ಪಾಲಿಕೆ ಅಧಿಕಾರಿಗಳ ತುರ್ತು ಸಭೆ ನಡೆಸಿದ ಶಾಸಕ ವೇದವ್ಯಾಸ್‌ ಕಾಮತ್

KannadaprabhaNewsNetwork |  
Published : Jun 22, 2025, 01:20 AM IST
ಪಾಲಿಕೆ ಅಧಿಕಾರಿಗಳ ತುರ್ತು ಸಭೆ ನಡೆಸಿದ ಶಾಸಕ ವೇದವ್ಯಾಸ್‌ ಕಾಮತ್  | Kannada Prabha

ಸಾರಾಂಶ

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ರವರು ಶುಕ್ರವಾರ ಪಾಲಿಕೆ ಅಧಿಕಾರಿಗಳ ಮಹತ್ವದ ತುರ್ತು ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ಮಹಾನಗರ ಪಾಲಿಕೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ರವರು ಶುಕ್ರವಾರ ಪಾಲಿಕೆ ಅಧಿಕಾರಿಗಳ ಮಹತ್ವದ ತುರ್ತು ಸಭೆ ನಡೆಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದಾಗಿ ಅನೇಕ ಕಡೆ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಪ್ರತೀ ವಾರ್ಡ್‌ಗೆ 10 ಮನೆಗಳಂತೆ 60 ವಾರ್ಡಿನ ಮನೆಗಳಿಗೂ ತುರ್ತು ದುರಸ್ತಿಗೆ ಸಹಾಯವಾಗುವಂತೆ 40 ಸಾವಿರ ರು. ವರೆಗೆ ಪರಿಹಾರ ಧನ ನೀಡುವ ನಿರ್ಣಯ ಕೈಗೊಂಡು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ ಇದೀಗ ಬಿಜೆಪಿ ಆಡಳಿತದ ಅವಧಿ ಅಂತ್ಯವಾಗಿದ್ದು, ಪಾಲಿಕೆಯು ಜಿಲ್ಲಾಡಳಿತದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿರುವ ಕಾರಣ ಪರಿಹಾರ ಧನ ಯಾರಿಗೂ ಸಿಗದಿರುವುದು ಅಕ್ಷಮ್ಯ. ಈ ಹಿಂದಿನ ಕೌನ್ಸಿಲ್ ನಿರ್ಣಯವನ್ನು ತಡೆ ಹಿಡಿಯಲು ಯಾರಿಗೂ ಅಧಿಕಾರವಿಲ್ಲ. ಕೂಡಲೇ ಜನರಿಗೆ ಪರಿಹಾರ ಧನ ವಿತರಣೆಯಾಗಬೇಕು. ಬಿಜೆಪಿಯು ಈ ಹಿಂದೆ ಬಜೆಟ್ ನಲ್ಲಿ ಮೀಸಲಿಟ್ಟ ಅನುದಾನವನ್ನು ಈಗಿನ ಆಡಳಿತ ವ್ಯವಸ್ಥೆ ಸಮರ್ಪಕವಾಗಿ ಬಳಸದೇ ಜನಸಾಮಾನ್ಯರಿಗೆ ಅನ್ಯಾಯ ಎಸಗುತ್ತಿದೆ ಎಂದು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶವನ್ನು ಕೂಡಲೇ ಸರಿಪಡಿಸಬೇಕು, ಭವಿಷ್ಯದಲ್ಲಿ ಮಳೆ ನೀರು ಮನೆಗೆ ನುಗ್ಗದಂತೆ ತಡೆಗಟ್ಟಬೇಕು, ಕಸ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಶಾಸಕರು ಸೂಚನೆ ನೀಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪಾಲಿಕೆ ಆಯುಕ್ತರು ಯಾವುದೇ ಲೋಪದೋಷವಾಗದಂತೆ ಕ್ರಮಬದ್ಧವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.ಈ ಸಂದರ್ಭ ಅಧೀಕ್ಷಕ ಅಭಿಯಂತರರಾದ ನರೇಶ್‌ ಶೆಣೈ, ಸುರತ್ಕಲ್ ಹಾಗೂ ಕದ್ರಿ ಭಾಗದ ಉಪ ಆಯುಕ್ತರು, ಮುಖ್ಯ ಲೆಕ್ಕಾಧಿಕಾರಿಗಳು, ಕಾರ್ಯಕಾರಿ ಅಭಿಯಂತರರುಗಳು, ಆಶ್ರಯ ವಸತಿ ರೋಜಗಾರ್‌, ಆರೋಗ್ಯ, ನಗರ ಯೋಜನೆ, ಕಂದಾಯ ಅಧಿಕಾರಿಗಳು ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ