ವಿವಿಧ ಅಭಿವೃದ್ಧಿಗೆ ಶಾಸಕ ವೆಂಕಟೇಶ ಚಾಲನೆ

KannadaprabhaNewsNetwork |  
Published : Sep 11, 2024, 01:05 AM IST
ಫೋಟೋ 10ಪಿವಿಡಿ1ತಾಲೂಕಿನ ಕನ್ನಮೇಡಿ ಗ್ರಾಮದ ಅಲ್ಪ ಸಂಖ್ಯಾತರ ಕಾಲೋನಿಯಲ್ಲಿ 50ಲಕ್ಷ ವೆಚ್ಚದ ಸಿಸಿರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗೆ ಶಾಸಕ ಎಚ್‌.ವಿ.ವೆಂಕಟೇಶ್‌ ಗುದ್ದಲಿಪೂಜೆ ನೆರೆವೇರಿಸಿದರು.ಗ್ರಾಪಂ ಮಾಜಿ ಅಧ್ಯಕ್ಷ ನರಸಿಂಹಪ್ಪ,ಸ್ಟುಡಿಯೋ ಅಮರ್‌,ಚಿತ್ತಗಾನಹಳ್ಳಿ ಚಂದ್ರು ಇದ್ದಾರೆ. ಫೋಟೋ 10ಪಿವಿಡಿ2ತಾ,ದೊಮ್ಮತಮರಿ ಗ್ರಾಮದ ಅಲ್ಪಸಂಖ್ಯಾತರ ಕಾಲೋನಿಯಲ್ಲಿ 50ಲಕ್ಷ ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್‌.ವಿ.ವೆಂಕಟೇಶ್‌ ವಿದ್ಯುಕ್ತ ಚಾಲನೆ ನೀಡಿದರು.ಇದೇ ವೇಳೆ ಮುಖಂಡರಾದ ವಿಶೇಶ್ವರಯ್ಯ ಹಾಗೂ ಗುಮ್ಮಘಟ್ಟ ಶ್ರೀನಿವಾಸ್‌ ಇದ್ದಾರೆ. | Kannada Prabha

ಸಾರಾಂಶ

ವಿವಿಧ ಅಭಿವೃದ್ಧಿಗೆ ಶಾಸಕ ವೆಂಕಟೇಶ ಚಾಲನೆ

ಕನ್ನಡಪ್ರಭವಾರ್ತೆ ಪಾವಗಡ

ಶಾಸಕರ ನಿಧಿ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯ ನಿಧಿ ಸೇರಿದಂತೆ ವಿವಿಧ ಯೋಜನೆ ಅಡಿಯ ಅನುದಾನ ವಿನಿಯೋಗಿಸುವ ಮೂಲಕ ಗಡಿ ಗ್ರಾಮಗಳ ಪ್ರಗತಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಶಾಸಕ ಎಚ್‌.ವಿ.ವೆಂಕಟೇಶ್‌ ಅವರು ಹೇಳಿದರು.

ಪ್ರಸಕ್ತ ಸಾಲಿನ ರಾಜ್ಯ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ನಿಧಿಯಲ್ಲಿ ತಾ. ದೊಮ್ಮತಮರಿ, ಕನ್ನಮೇಡಿ ಸಿ.ಕೆ.ಪುರ ಗ್ರಾಮದ ಅಲ್ಪಸಂಖ್ಯಾತ ಕಾಲೋನಿಯ ಪ್ರಗತಿಗೆ ತಲಾ 50ಲಕ್ಷ ಸೇರಿ ಒಟ್ಟು 1.50ಕೋಟಿ ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ, ಕನ್ನಮೇಡಿದಲ್ಲಿ ಡಿಜಿಟಲ್ ಗ್ರಂಥಾಲಯ ಕಚೇರಿಗೆ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಶಾಸಕರ ಪ್ರದೇಶಾಭಿವೃದ್ಧಿ ಹಾಗೂ ರಾಜ್ಯ ಅಲ್ಪ ಸಂಖ್ಯಾತರ ಇಲಾಖೆಯ ಅನುದಾನ ಸೇರಿದಂತೆ ವಿವಿಧ ಇಲಾಖೆಯ ಯೋಜನೆಯ ಅಡಿ ಅನುದಾನವನ್ನು ತಾಲೂಕಿನ ಗಡಿಗ್ರಾಮಗಳ ಪ್ರಗತಿಗೆ ವಿನಿಯೋಗಿಸಿ ಕಾಮಗಾರಿಗಳ ಪ್ರಗತಿಗೆ ಗುದ್ದಲಿಪೂಜೆ ನೆರೆವೇರಿಸಲಾಗಿದೆ ಎಂದರು.

ಇದೇ ವೇಳೆ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ರಾಮಾಂಜಿನಪ್ಪ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಆದಿ ನಾರಾಯಣಪ್ಪ,ಗುಮ್ಮಘಟ್ಟ ಶ್ರೀನಿವಾಸಲು, ಗ್ರಾಪಂ ಅಧ್ಯಕ್ಷೆ ಗಂಗಮ್ಮ,ಹಿರಿಯ ಮುಖಂಡ ವಿಶ್ವೇಶ್ವರಯ್ಯ, ನಾರಾಯಣಪ್ರಸಾದ್‌ ಹಜರತ್, ಸುಬಾನ್‌, ಸಂಜೀವರಾಯಪ್ಪ ದೊಮ್ಮತಮರಿ ಶಿವಪ್ಪ ರಾಮಾಂಜಿ, ಲಕ್ಷ್ಮೀ ನಾರಾಯಣಪ್ಪ, ಅಧ್ಯಕ್ಷೆ ಗಂಗಮ್ಮ, ಕನ್ನಮೇಡಿ ಗ್ರಾಪಂ ಮಾಜಿ ಅಧ್ಯಕ್ಷ ನರಸಿಂಹಪ್ಪ, ಚಿತ್ತಗಾನಹಳ್ಳಿ ಚಂದ್ರು, ಸ್ಟುಡಿಯೋ ಅಮರ್‌ ಕನ್ನಮೇಡಿ ಸುರೇಶ್‌, ಮಾರುತೇಶ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್‌ಸಿಯು ಧೂಳಿಗೆ ಕಮರಿದ ರೈತರ ಬದುಕು
ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಅಗತ್ಯ