ಶಾಸಕ ವಿಶ್ವಾಸ ವೈದ್ಯ ಜನ್ಮದಿನ ಅದ್ಧೂರಿ ಆಚರಣೆ

KannadaprabhaNewsNetwork |  
Published : Oct 13, 2024, 01:10 AM IST
ಸವದತ್ತಿ-ಯಲ್ಲಮ್ಮಾ  ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಅವರ ೪೩ನೇ ಜನ್ಮದಿನದ ನಿಮಿತ್ತ ಅವರ ನಿವಾಸದಲ್ಲಿ ಅಭಿಮಾನಿಗಳು ಶುಭಾಶಯ ಕೋರಿದರು. | Kannada Prabha

ಸಾರಾಂಶ

ಶಾಸಕ ವಿಶ್ವಾಸ ವೈದ್ಯರವರು ತಮ್ಮ ೪೩ನೇ ಹುಟ್ಟುಹಬ್ಬವನ್ನು ವಿಜಯದಶಮಿಯಂದು ಅಭಿಮಾನಿಗಳೊಂದಿಗೆ ತಮ್ಮ ನಿವಾಸದಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡರು.

ಕನ್ನಡಪ್ರಭ ವಾರ್ತೆ ಸವದತ್ತಿ

ಶಾಸಕ ವಿಶ್ವಾಸ ವೈದ್ಯರವರು ತಮ್ಮ ೪೩ನೇ ಹುಟ್ಟುಹಬ್ಬವನ್ನು ವಿಜಯದಶಮಿಯಂದು ಅಭಿಮಾನಿಗಳೊಂದಿಗೆ ತಮ್ಮ ನಿವಾಸದಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡರು.

ವಿಜಯದಶಮಿಯಂದೇ ಜನಿಸಿದ ಶಾಸಕ ವಿಶ್ವಾಸ ವೈದ್ಯರಿಗೆ ೪೩ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿಜಯದಶಮಿಯಂದು ಹುಟ್ಟುಹಬ್ಬ ಬಂದಿರುವುದು ಜನ್ಮದಿನದ ಖುಷಿಯನ್ನು ಹೆಚ್ಚಿಸಿತ್ತು. ಶನಿವಾರ ಬೆಳಗ್ಗೆಯಿಂದಲೇ ಸಹಸ್ರಾರು ಅಭಿಮಾನಿಗಳು ಶಾಸಕರ ನಿವಾಸಕ್ಕೆ ತೆರಳಿ ತಮ್ಮ ನೆಚ್ಚಿನ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

ವೈದ್ಯ ಫೌಂಡೇಶನ್ ವತಿಯಿಂದ ಶಾಸಕರ ಹುಟ್ಟುಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಮತ್ತು ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಮಾಡಲಾಯಿತು. ಶಾಸಕರ ವಿಶೇಷ ಅನುದಾನದಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು. ಬೆಳಗ್ಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ವಿಶ್ವಾಸ ವೈದ್ಯ ಅಭಿಮಾನಿ ಬಳಗದವರು ಹಣ್ಣು ಹಂಪಲ ವಿತರಿಸಿದರು.

ಕೆಲ ಅಭಿಮಾನಿಗಳು ಶಾಸಕರಿಗೆ ಕಂಬಳಿ ಹೊದಸಿ ಸನ್ಮಾನಿಸಿದರೆ, ಇನ್ನು ಕೆಲವರು ಕುರಿಗಳನ್ನು ಉಡುಗೊರೆಯಾಗಿ ಅಭಿಮಾನ ತೋರ್ಪಡಿಸಿದರು. ಎನ್‌ಕರೇಜ್ ಗ್ರುಪ್‌ನ ಸದಸ್ಯರು ೧೧೬ ಕೆಜಿ ತೂಕದ ಕೇಕ್ ತಂದು ವೈದ್ಯ ಅವರಿಂದ ಕಟ್‌ ಮಾಡಿಸಿ ಎಲ್ಲರಿಗೂ ಹಂಚಿದರು.

ನಾಡಿನ ಅನೇಕ ಶ್ರೀಗಳು ವೈದ್ಯರಿಗೆ ಜನ್ಮದಿನದ ಶುಭಾಶಯ ಕೋರಿ ಆಶೀರ್ವದಿಸಿದರು. ಜನಪ್ರತಿನಿಧಿಗಳ, ರಾಜಕೀಯ ಮುಖಂಡರು ಸಹ ಆಗಮಿಸಿ ಶುಭಾಶಯ ಕೋರಿದರು.ಶಾಸಕ ಬಾಬಾಸಾಹೇಬ ಪಾಟೀಲ, ಯುವ ಮುಖಂಡ ರಾಹುಲ ಜಾರಕಿಹೊಳಿ, ಮೃಣಾಲ್‌ ಹೆಬ್ಬಾಳಕರ, ಮಾಜಿ ಶಾಸಕ ಆರ್.ವಿ. ಪಾಟೀಲ, ಚಂದ್ರಣ್ಣ ಶಾಮರಾಯನವರ, ರವೀಂದ್ರ ಯಲಿಗಾರ, ಮಹಾಬಳೇಶ್ವರ ಪುರದಗುಡಿ, ರಿಯಾಜ್‌ ಚೌಗಲಾ, ಸಿ.ಬಿ. ಬಾಳಿ, ಚಂದ್ರು ಜಂಬ್ರಿ, ಬಿ.ಎನ್. ಪ್ರಭುನವರ, ರಾಜಶೇಖರ ಕಾರದಗಿ, ದೀಪಕ ಜಾನ್ವೇಕರ, ಶಿವಾನಂದ ಹೂಗಾರ, ಸೋಮನಗೌಡ ಪಾಟೀಲ, ಮಂಜು ಪಾಚಂಗಿ, ಶಿವಾನಂದ ಪಟ್ಟಣಶೆಟ್ಟಿ, ಬಸವರಾಜ ಅರಮನಿ, ಮದನಲಾಲ ಚೋಪ್ರಾ, ಸನ್ನಿ ನರೋಗೋಳ, ವೈದ್ಯ ಅಭಿಮಾನಿಗಳು, ವಿವಿಧ ಸಮಾಜ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಸಕರಿಗೆ ಜನ್ಮದಿನದ ಶುಭ ಕೋರಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...