ಇಲ್ಲಿನ ಫಿಷರೀಸ್ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದ ಮೇಲ್ಛಾವಣಿಗೆ ಗಾಳಿ ಮಳೆಯಿಂದಾಗಿ ಮರಬಿದ್ದು ಹಾನಿಗೀಡಾದ ಹಿನ್ನಲೆಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಲ್ಪೆ
ಇಲ್ಲಿನ ಫಿಷರೀಸ್ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದ ಮೇಲ್ಛಾವಣಿಗೆ ಗಾಳಿ ಮಳೆಯಿಂದಾಗಿ ಮರಬಿದ್ದು ಹಾನಿಗೀಡಾದ ಹಿನ್ನಲೆಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮೊನ್ನೆ ಸುರಿದ ಗಾಳಿ ಮಳೆಗೆ ಅಂಗನವಾಡಿ ಕೇಂದ್ರದ ಮೇಲೆ ಮರಬಿದ್ದ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರವನ್ನು ತಾತ್ಕಾಲಿಕವಾಗಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಪ್ರೌಢಶಾಲೆ ವಿಭಾಗದ ರಂಗ ಮಂದಿರಕ್ಕೆ ಸ್ಥಳಾಂತರಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಸೂಚನೆ ನೀಡಿದರು.ನೂತನ ಅಂಗನವಾಡಿ ಕೇಂದ್ರ ನಿರ್ಮಿಸಲು ತಕ್ಷಣ ಕಂದಾಯ ಇಲಾಖೆಯ ಮೂಲಕ ನಿವೇಶನ ಗುರುತಿಸಿ, ಅಂಗನವಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರವೀಣ್ ಹೇರೂರು, ಮಾಜಿ ನಗರಸಭೆ ಸದಸ್ಯರಾದ ಎಡ್ಲಿನ್ ಕರ್ಕಡ, ಸುಂದರ ಕಲ್ಮಾಡಿ, ನಾರಾಯಣ ಕುಂದರ್, ಸ್ಥಳೀಯ ಪ್ರಮುಖರಾದ ಲಕ್ಷ್ಮೀಶ ಬಂಗೇರ, ವಿನಯ ಕುಮಾರ್, ಸುಶಾಂತ್, ಮಂಜು ಕೊಳ, ಸುರೇಶ್ ಕುಂದರ್, ಕೃಷ್ಣಪ್ಪ ಜತ್ತನ್, ನಿತಿನ್ ಪೂಜಾರಿ, ಸುಧಾಕರ ಕುಂದರ್, ವಿನೋದ್ ಹೊಸಕಟ್ಟ, ಅಂಗನವಾಡಿ ಕಾರ್ಯಕರ್ತೆ ರಾಧಿಕಾ ಕೋಟ್ಯಾನ್, ಸಹಾಯಕಿ ರೇಣುಕಾ ಮೊದಲಾದವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.