ರಾಮನಗರ: ನಗರದ ಶ್ರೀ ಬಂಡಿಮಹಂಕಾಳಿ ಅಮ್ಮನವರ ಹಸಿ ಕರಗದ ಹಿನ್ನಲೆಯಲ್ಲಿ ಶಾಸಕ ಹೆಚ್.ಎ.ಇಕ್ಬಾಲ್‌ಹುಸೇನ್ ಮಂಗಳವಾರ ಮುಖಂಡರೊಡಗೂಡಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಷಾಢಮಾಸದ ಮೊದಲ ವಾರದಲ್ಲಿ ಶ್ರೀ ಬಂಡಿಮಹಂಕಾಳಿ ಅಮ್ಮನವರ ಹಸಿ ಕರಗದೊಂದಿಗೆ ಆರಂಭವಾಗಿ, ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಸೇರಿದಂತೆ 9 ನಗರ ದೇವತೆಗಳ ಕರಗಗಳು ಯಶಸ್ವಿಯಾಗಿ ಸಡಗರದಿಂದ ನೆರವೇರಲಿವೆ. ಈ ಕರಗ ಹಬ್ಬ ಜಾತಿ, ಧರ್ಮ ಮೀರಿ ಎಲ್ಲರೂ ಒಗ್ಗಟ್ಟಾಗಿ ಆಚರಿಸುವ ಜೊತೆಗೆ ಸರ್ವ - ಧರ್ಮ - ಸಮನ್ವಯ ಸಾರುತ್ತವೆ. ನಗರದಲ್ಲಿರುವ 9 ದೇವತೆಗಳಿಗೆ ಕರಗ ನಡೆಯುವ ಸಂಪ್ರದಾಯ ಹಿಂದಿನಿಂದಲೂ ನೆರವೇರುತಲಿದ್ದು, ನಾನು ಪ್ರತಿವರ್ಷದಂತೆ ಈ ವರ್ಷವೂ ಸಹ ಕರಗ ನಡೆಯುವ ಎಲ್ಲ ದೇವತೆಗಳಿಗೆ ಮಡಿಲಕ್ಕಿ ಕೊಟ್ಟು ವಿಶೇಷ ಪೂಜೆ ಸಲ್ಲಿsಸುತ್ತೇನೆ ಎಂದರು.ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಯಶಸ್ವಿಯಾಗಲು ನಮಗೆ ಒಗ್ಗಟ್ಟಿನ ಜನಶಕ್ತಿಯಷ್ಟೇ ಬೇಕು. ಎಲ್ಲರೂ ಸೇರಿಕೊಂಡು ಹಬ್ಬಾಚರಣೆ ಮಾಡುತ್ತೇವೆ. ಬೇರೆಯವರಿಗೆ ತೊಂದರೆ ಕೊಡಬಾರದು, ಹಾಗೆಯೆ ದೇವತೆಗಳ ಹೆಸರಿನಲ್ಲಿ ಯಾರಿಂದಲೂ ವಸೂಲಿ ಮಾಡಬಾರದು. ಅದಕ್ಕಾಗಿಯೇ ಒಂದು ಸಮಿತಿ ರಚನೆ ಮಾಡಿದ್ದು, ಸಮಿತಿ ಮೂಲಕ ಕರಗ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಸಿದ್ದತೆ ನಡೆಸುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪೂಜೆ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ನಗರಸಭೆ ಸದಸ್ಯರಾದ ಬಿ.ಸಿ.ಪಾರ್ವತಮ್ಮ, ಅಣ್ಣು, ನಾಗಮ್ಮ, ಪೌರಾಯುಕ್ತ ಡಾ.ಜಯಣ್ಣ, ಇಂಜಿನಿಯರ್ ನಿರ್ಮಲಾ ಮುಖಂಡ ಪ್ರಸನ್ನಕುಮಾರ್, ಗ್ರಾಮಾಂತರ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ಬಾಲಗೇರಿ ಪ್ರಭು, ಮಣಿ, ರಾಜೇಶ್, ಕರಗಧಾರಕ ಯೋಗೇಶ್ ಮತ್ತಿತರರು ಹಾಜರಿದ್ದರು.1ಕೆಆರ್ ಎಂಎನ್ 8.ಜೆಪಿಜಿರಾಮನಗರದ ಶ್ರೀ ಬಂಡಿಮಹಂಕಾಳಿ ಅಮ್ಮನವರ ಹಸಿ ಕರಗದ ಹಿನ್ನಲೆಯಲ್ಲಿ ಶಾಸಕ ಹೆಚ್.ಎ.ಇಕ್ಬಾಲ್‌ಹುಸೇನ್ ಮಂಗಳವಾರ ಮುಖಂಡರೊಡಗೂಡಿ ವಿಶೇಷ ಪೂಜೆ ಸಲ್ಲಿಸಿದರು.