ಕುಷ್ಟಗಿ: ನಾನು ಸಣ್ಣತನದ ರಾಜಕಾರಣ ಮಾಡುವುದಿಲ್ಲ, ಮೊದಲು ಶಾಸಕರಾದ ನೀವು ಜನರಿಗೆ ಸುಳ್ಳು ಸಂದೇಶ ಕೊಡುವ ಹಳೆ ಚಾಳಿ ಬಿಡಬೇಕು ಎಂದು ಮಾಜಿ ಶಾಸಕ, ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಶಾಸಕ ದೊಡ್ಡನಗೌಡ ಪಾಟೀಲರಿಗೆ ತಿರಗೇಟು ನೀಡಿದ್ದಾರೆ.
ಆದೇಶ ಪ್ರತಿ ಮಾಡುವಾಗ ಸಾಮಾನ್ಯವಾಗಿ ಶಾಸಕರ ಶಿಫಾರಸ್ಸು ಎಂದು ತಪ್ಪು ಮಾಡಿರುವ ಹಿನ್ನೆಲೆಯಲ್ಲಿ ತಪ್ಪನ್ನು ತಿದ್ದಿಕೊಂಡ ಅಧಿಕಾರಿಗಳು ಆದೇಶ ತಿದ್ದುಪಡಿ ಮಾಡಿದ್ದಾರೆ ಎಂದರು.
ಇಸ್ಲಾಂ ಸಮಾಜದ ಮೇಲೆ ಪ್ರೀತಿ ಇದೆ ಎಂದು ಹೇಳುವ ನೀವು ಕುಷ್ಟಗಿ ತಾಲೂಕಿಗೆ ನೂರು ಕೋಟಿ ಅನುದಾನ ಬಂದಿತ್ತು. ಅದರಲ್ಲಿ ಒಂದು ಲಕ್ಷ ರೂಪಾಯಿಯಾದರೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಿದ್ದೀರಾ, ತಾವು ಶಾದಿಮಹಲ್ ಗೆ ಅನುದಾನ ಒದಗಿಸುವಂತೆ ಲೆಟರ್ ಕೊಟ್ಟು ಒಂದು ವರ್ಷದ ಅವಧಿಯಲ್ಲಿ ಮೂರು ಸಲ ಹಣ ಬಂದರೂ ಶಾದಿಮಹಲಿಗೆ ಅನುದಾನ ಮೀಸಲು ಇಟ್ಟಿಲ್ಲ ಯಾಕೆ? ಎಂದು ಪ್ರಶ್ನಿಸಿದರು.ಮೂರು ಸಲ ಶಾಸಕರಾದ ತಾವು ಬೇಕಾಬಿಟ್ಟಿಯಾಗಿ ಸರ್ಕಾರದ ಆದೇಶ ತಿದ್ದುಪಡಿ ಮಾಡಲು ಬರುವದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು, ನನಗಿಂತ ಅಧಿಕಾರ ನಿಮ್ಮದು ಹೆಚ್ಚಿದೆ, ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ತಿಳಿದುಕೊಳ್ಳಬೇಕು ಸುಳ್ಳನ್ನು ಹೇಳಬೇಡಿ ಎಂದರು.
ಅಂಜುಮನ್ ಕಮೀಟಿಯ ಅಧ್ಯಕ್ಷ ಅಹ್ಮದಹುಸೇನ ಆದೋನಿ ಮಾತನಾಡಿ, ನಮ್ಮ ಕಮೀಟಿಯಿಂದ ಶಾಸಕ ದೊಡ್ಡನಗೌಡರಿಗೆ ಶಾದಿಮಹಲ ನಿರ್ಮಾಣಕ್ಕಾಗಿ ಅನುದಾನ ಕೇಳಲು 2-3 ಬಾರಿ ಹೋದ ಸಂದರ್ಭದಲ್ಲಿ ಮುಂದಿನ ಸಲ ಹಾಕುತ್ತೇನೆ ಎಂದು ಹಾರಿಕೆ ಉತ್ತರ ನೀಡಿದ್ದರು. ಈಗ ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಅನುದಾನ ಹಾಕಿಸಿಕೊಂಡು ಬಂದಿದ್ದಾರೆ, ಶರಣೇಗೌಡ ಬಯ್ಯಾಪೂರ ಐದು ಲಕ್ಷ ಅನುದಾನ ನೀಡಿದ್ದಾರೆ, ಶಾಸಕ ದೊಡ್ಡನಗೌಡ ಪಾಟೀಲ ಏನು ನೀಡಿಲ್ಲ ಎಂದರು.ಈ ಸಂದರ್ಭದಲ್ಲಿ ಮೈನುದ್ದಿನ್ ಮುಲ್ಲಾ, ಸೈಯದ್‌ಸಾಬ್ ಅತ್ತಾರ, ಅಜಮೀರಸಾಬ್ ಯಲಬುರ್ಗಿ, ಶ್ಯಾಮೀದಸಾಬ್ ಮುಜಾವರ, ಬಾಳಪ್ಪ ಅರಳಿಕಟ್ಟಿ, ಶುಖಮುನಿ ಈಳಗೇರ, ಉಮೇಶ ಮಡಿವಾಳರ, ಖಾಜೇಸಾಬ ಗಚ್ಚಿನಮನಿ, ಇಸ್ಲಾಂ ಸಮುದಾಯದವರು ಇದ್ದರು.