ಕನ್ನಡಪ್ರಭ ವಾರ್ತೆ ರಾಮದುರ್ಗ
ಕಳೆದೆರಡು ವರ್ಷಗಳಿಂದ ಎಂಎಲ್‌ಬಿಸಿ ಕಾಲೋನಿಯಲ್ಲಿ ಬೀದಿ ದೀಪಗಳು ಉರಿಯುತ್ತಿರಲಿಲ್ಲ. ಕನ್ನಡಪ್ರಭವು ಜೂ.6 ರಂದು ಕತ್ತಲಲ್ಲಿ ಕಾಲ ಕಳೆಯುತ್ತಿರುವ ಕಾಲೋನಿ ಜನ ಶಿರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಬೆಳಕು ಚೆಲ್ಲಿತ್ತು. ವರದಿ ಬೆನ್ನಲ್ಲೆ ಸ್ಪದಿಸಿದ ಕರ್ನಾಟಕ ನೀರಾವರಿ ನಿಗಮದ ನಂ.6ದ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನದಿಂದ ಕಾಲೋನಿಯಲ್ಲಿರುವ 31 ವಿದ್ಯುತ್ ಕಂಬಗಳ ಪೈಕಿ 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ವಿದ್ಯುತ್ ಬಲ್ಬ್ ಹಾಕಿದ್ದಾರೆ. ಈ ಮೊದಲು 3-4 ಕಂಬಗಳಿಗೆ ಬಲ್ಬ್‌ಗಳಿದ್ದವು, ಇನ್ನೂಳಿದ ಕಂಬಗಳಿಗೆ ಕೂಡಾ ಬಲ್ಬ್ ಹಾಕುವುದಾಗಿ ಮತ್ತು ಉಳಿದ ಕಾರ್ಯನಿರ್ವಹಣೆ ಮಾಡುವುದಾಗಿ ಕರ್ನಾಟಕ ನೀರಾವರಿ ನಿಗಮದ ನಂ.6 ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಶ್ರೀನಿವಾಸ ಅರಿಶಿನಗೋಡಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.