ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಬೇಬಿ ಗ್ರಾಮ ಪಂಚಾಯ್ತಿ ಮತ್ತು ದೊಡ್ಡ ಗರುಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಡಿ.ಜಿ.ಹಳ್ಳಿ, ವಡಘಟ್ಟ ಗುಡಿಗೆನಹಳ್ಳಿ, ಮಾಯಪ್ಪನಹಳ್ಳಿ, ಚಾಕ್ನಳ್ಳಿ, ಗೂಳಿಕೊಪ್ಪಲು, ಗುತ್ತಿಗಾನಹಳ್ಳಿ, ತರಣಿಗೆರೆ, ಬಿದರಕಟ್ಟೆ ಸೇರಿದಂತೆ ಹಲವು ಗ್ರಾಮಗಳ 1 ರಿಂದ 10ನೇ ತರಗತಿವರೆಗಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ಫೌಂಡೇಶನ್‌ನಿಂದ ಮಕ್ಕಳ ಶೈಕ್ಷಣಿಕ ಸಾಮಾಜಿಕ ಕಾರ್ಯದ ಪ್ರಯುಕ್ತ ಉಚಿತ ನೋಟ್ ಬುಕ್ ವಿತರಿಸಲಾಯಿತು.
ಈ ವೇಳೆ ಡಿ.ಜಿ.ಹಳ್ಳಿ ಶಾಲೆ ಅಧ್ಯಕ್ಷ ಯೋಗಾನಂದ ಮಾತನಾಡಿ, ಫೌಂಡೇಶನ್ ಕಾರ್ಯವು ಸಮಾಜ ಸೇವೆಗೆ ಅರ್ಹವಾಗಿದೆ. ಹಲವಾರು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.ಶಾಲಾ ಮುಖ್ಯೋಪಾಧ್ಯಾಯರು, ಫೌಂಡೇಶನ್ ಶೈಕ್ಷಣಿಕ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಫೌಂಡೇಶನ ಖಜಾಂಚಿ ಶಶಿಕುಮಾರ್ ಬೇಬಿ, ಫೌಂಡೇಶನ್ ಸಾಮಾಜಿಕ ಸೇವೆಗಳನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವಂತೆ ಕರೆ ನೀಡಿದರು.
ಶ್ರೀಗೀತಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ
ಇಲ್ಲಿನ ಶಂಕರನಗರದ ಶ್ರೀಗೀತಾ ಪ್ರೌಢಶಾಲೆಯಲ್ಲಿ ಬುಧವಾರ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ, ಉಚಿತ ಸಮವಸ್ತ್ರ ಹಾಗೂ ನೋಟ್ ಬುಕ್ ವಿತರಣಾ ಕಾರ್ಯಕ್ರಮ ನಡೆಯಿತು.
ಅಂಕಗಳಿಕೆ ಒಂದೇ ವಿದ್ಯಾರ್ಜನೆಯ ಮೂಲಮಂತ್ರವಲ್ಲ. ಸತ್ಪ್ರಜೆಯಾಗಿ ರೂಪಗೊಳ್ಳುವುದು ಮತ್ತು ರೂಪು ಗೊಳಿಸುವುದು ಸುವಿದ್ಯಾರ್ಥಿ ಮತ್ತು ಶಿಕ್ಷಕರ ಪ್ರಮುಖ ಪಾತ್ರ ಎಂದು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ 15ನೇ ವಾರ್ಡ್ ನ ನಗರಸಭಾ ಸದಸ್ಯೆ ಮೀನಾಕ್ಷಿ ಪುಟ್ಟಸ್ವಾಮಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ವಸಂತ್ ಕುಮಾರ್, ಸಹ ಶಿಕ್ಷಕರಾದ ಕಲ್ಲಪ್ಪ, ಸರಿತಾ, ದೇವರಾಜು ರುದ್ರೇಶ್ ಉಪಸ್ಥಿತರಿದ್ದರು.