ಅವೈಜ್ಞಾನಿಕ ನೀತಿಯಿಂದ ರೈತರ ಭೂಮಿ ಎಂಎನ್‌ಸಿ ಪಾಲು

KannadaprabhaNewsNetwork |  
Published : Dec 22, 2023, 01:30 AM IST
ಪೋಟೋ: 21ಎಸ್ಎಂಜಿಕೆಪಿ05ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ರೈತರ ನಾಯಕ ಎನ್.ಡಿ.ಸುಂದರೇಶ್‌ರವರ 31ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಎನ್‌.ಡಿ.ಸುಂದರೇಶ್‌ ಭಾವಚಿತ್ರಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ಕೆ.ಟಿ.ಗಂಗಾಧರ್‌ ಪುಷ್ಪನಮನ ಸಲ್ಲಿಸಿದರು.  | Kannada Prabha

ಸಾರಾಂಶ

ಸರ್ಕಾರಗಳ ಅವೈಜ್ಞಾನಿಕ ನೀತಿಯಿಂದ ರೈತರ ಭೂಮಿ ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತಿವೆ. ತಮ್ಮ ಬಳಿ ಇದ್ದ ತುಂಡು ಭೂಮಿಯೂ ಕಳೆದುಕೊಂಡು ರೈತ ಬೀದಿಗೆ ಬಂದು ನಿಂತಿದ್ದಾನೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ಕೆ.ಟಿ.ಗಂಗಾಧರ್‌ ಅವರು ರೈತ ನಾಯಕ ಎನ್‌.ಡಿ.ಸುಂದರೇಶ್‌ ಸ್ಮರಣೆ ಕಾರ್ಯಕ್ರಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ರೈತರ ನಾಯಕ ಎನ್.ಡಿ.ಸುಂದರೇಶ್‌ 31ನೇ ವರ್ಷದ ಪುಣ್ಯಸ್ಮರಣೆ, ರೈತರ ಜಾಗೃತಿ ಸಭೆಯಲ್ಲಿ ಕೆ.ಟಿ.ಗಂಗಾಧರ್‌ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸರ್ಕಾರಗಳ ಅವೈಜ್ಞಾನಿಕ ನೀತಿಯಿಂದ ರೈತರ ಭೂಮಿ ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತಿವೆ. ತಮ್ಮ ಬಳಿ ಇದ್ದ ತುಂಡು ಭೂಮಿಯೂ ಕಳೆದುಕೊಂಡು ರೈತ ಬೀದಿಗೆ ಬಂದು ನಿಂತಿದ್ದಾನೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ಕೆ.ಟಿ.ಗಂಗಾಧರ್‌ ಅಸಮಾಧಾನ ವ್ಯಕ್ತಪಡಿಸಿದರು.ಇಲ್ಲಿನ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ರೈತರ ನಾಯಕ ಎನ್.ಡಿ.ಸುಂದರೇಶ್‌ 31ನೇ ವರ್ಷದ ಪುಣ್ಯಸ್ಮರಣೆ ಹಾಗೂ ರೈತರ ಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಆಹಾರದ ಸಾರ್ವಭೌಮತೆಯನ್ನು ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳಿಗೆ ಕೊಡುವ ಹುನ್ನಾರವನ್ನು ಕಾನೂನತ್ಮಾಕವಾಗಿ ತಂದಿದೆ. ಇದರಿಂದ ದೇಶದಲ್ಲಿ ಕೃಷಿಯನ್ನೇ ಅವ ಲಂಬಿಸಿದ್ದ ಶೇ .70 ಈಗ ಭೂಮಿಯನ್ನು ಕಳೆದುಕೊಂಡು ಉಳುಮೆಯನ್ನೇ ಮರೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ಸರ್ಕಾರ ನೀತಿಗಳಿಗೆ ಹೆದರಿ ರೈತರು ತಮ್ಮ ಕೃಷಿ ವ್ಯವಸಾಯದ ಬಗ್ಗೆ ಅಸಡ್ಡೆ ತೋರಿಸಬಾರದು. ನಮ್ಮ ಹಿರಿಯರು ಬೀಜ ಸಂಗ್ರಹಣೆ ವಿಧಾನವನ್ನು ಮತ್ತು ಕೃಷಿಯ ಎಲ್ಲಾ ಜ್ಞಾನವನ್ನು ಹೊಂದಿದ್ದರು. ಇಂದು ನಾವು ನಮ್ಮ ಕೃಷಿ ಭೂಮಿಯನ್ನು ಬಿಡುವುದಿಲ್ಲ. ನಮ್ಮ ಮಕ್ಕಳಿಗೆ ಕೃಷಿ ಜ್ಞಾನವನ್ನು ನೀಡಿ ಉತ್ತಮ ಕೃಷಿಕರನ್ನಾಗಿ ಮಾಡುತ್ತೇವೆ ಎಂಬ ಪ್ರತಿಜ್ಞೆ ಮಾಡಬೇಕಿದೆ ಎಂದು ಕರೆ ನೀಡಿದರು.

ಮನೆಯ ಹೆಣ್ಣು ಮಕ್ಕಳಿಗೂ ವ್ಯವಸಾಯದಲ್ಲಿ ತೊಡಗಿಸಿಕೊಳ್ಳಬೇಕು. ರೈತರಿಗೆ ಅನ್ಯಾಯವಾದರೆ ಹೋರಾಟವನ್ನು ಮುಂದುವರಿ ಸುತ್ತೇವೆ. ಮೂರು ಕೃಷಿ ಕಾಯಿದೆಯನ್ನು ವಾಪಸ್ಸು ಪಡೆಯಲೇಬೇಕು. ಕನಿಷ್ಠ ಬೆಲೆ ನೀಡುವುದಷ್ಟೆ ಅಲ್ಲ, ಕೃಷಿ ಉತ್ಪನ್ನಗಳಲ್ಲಿ 27 ಉತ್ಪನ್ನಗಳನ್ನು ಕನಿಷ್ಠ ಬೆಲೆಯಿಂದ ಹೊರಗಿಡಲಾಗಿದೆ. ಈ ದೇಶದಲ್ಲಿ ರೈತ ಬೆಳೆದ ಬೆಲೆಗೆ ವೈಜ್ಞಾನಿಕ ಬೆಲೆಯನ್ನು ಸರ್ಕಾರವೇ ನಿಗದಿ ಮಾಡಬೇಕು. ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ರೈತರಿಂದ ಖರೀದಿ ಮಾಡಿದರೆ, ಶಿಕ್ಷಾರ್ಹ ಅಪರಾಧ ಎಂಬ ಕಾಯಿದೆಯನ್ನು ತಂದು ರೈತರಿಗೆ ಕಾನೂನು ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ರೈತನಾಯಕ ಸುಂದರೇಶ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವಿವಿಧ ನಾಯಕರು ರೈತರ ವಿವಿಧ ಬೇಡಿಕೆಗಳ ಬಗ್ಗೆ ಜಾಗೃತಿ ಮೂಡಿಸಿದರು. ವೇದಿಕೆಯಲ್ಲಿ ಪ್ರಮುಖರಾದ ರಾಮಣ್ಣ, ಹಾಲೇಶಪ್ಪ ಗೌಡರು, ಯಶವಂತರಾವ್ ಘೋರ್ಪಡೆ, ಡಿ.ವಿ.ವಿರೇಶ್, ಬಿ.ಆರ್.ಸಣ್ಣರಂಗಪ್ಪ, ಕೆ.ಆರ್.ರಂಗಣ್ಣ, ಜಗದೀಶ್ ನಾಯಕ್, ಸಿ.ಎಸ್. ಮಂಜಣ್ಣ ಮತ್ತಿತರರು ಇದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ