ಎಂನರೇಗಾ ಸಹಯೋಗ: ಬೆಳ್ತಂಗಡಿ ತಾಲೂಕಿನ 35 ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಶೌಚಾಲಯ

KannadaprabhaNewsNetwork |  
Published : Mar 04, 2025, 12:37 AM IST
ಶೌಚಾಲಯ | Kannada Prabha

ಸಾರಾಂಶ

ಮನ ರೇಗಾ ಅನುದಾನ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅನುದಾನವನ್ನು ಬಳಸಿಕೊಂಡು ಬೆಳ್ತಂಗಡಿ ತಾಲೂಕಿನ ಸರ್ಕಾರಿ ಶಾಲೆ, ಕಾಲೇಜಿಗೆ ಶೌಚಾಲಯಗಳನ್ನು ನಿರ್ಮಿ ಸಲಾಗುತ್ತಿದೆ. ಈಗಾಗಲೇ ತಾಲೂಕಿನ 14 ಶಾಲೆಗಳಲ್ಲಿ ಹಾಗೂ 1 ಕಾಲೇಜಿನಲ್ಲಿ ಕೆಲಸ ಪ್ರಾರಂಭವಾಗಿದೆ. ಉಳಿದ 16 ಶಾಲೆಗಳು ಹಾಗೂ 4 ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೆಳ್ತಂಗಡಿ ತಾಲೂಕಿನಲ್ಲಿ 30 ಸರ್ಕಾರಿ ಶಾಲೆಗಳಲ್ಲಿ ಹಾಗೂ 5 ಸರ್ಕಾರಿ ಕಾಲೇಜುಗಳಲ್ಲಿ ಶೌಚಾಲಯ ನಿರ್ಮಿಸಿ ಗಮನ ಸೆಳೆದಿದೆ.

ರಾಜ್ಯ ಸರ್ಕಾರದ ಆದೇಶದಂತೆ ಮನ ರೇಗಾ ಅನುದಾನ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅನುದಾನವನ್ನು ಬಳಸಿಕೊಂಡು ಸರ್ಕಾರಿ ಶಾಲೆ, ಕಾಲೇಜಿಗೆ ಶೌಚಾಲಯಗಳನ್ನು ನಿರ್ಮಿ ಸಲಾಗುತ್ತಿದೆ. ಈಗಾಗಲೇ ತಾಲೂಕಿನ 14 ಶಾಲೆಗಳಲ್ಲಿ ಹಾಗೂ 1 ಕಾಲೇಜಿನಲ್ಲಿ ಕೆಲಸ ಪ್ರಾರಂಭವಾಗಿದೆ. ಉಳಿದ 16 ಶಾಲೆಗಳು ಹಾಗೂ 4 ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ.

ಒಂದು ಶಾಲೆಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ 5.20 ಲಕ್ಷ ರು. ವೆಚ್ಚ ನಿಗದಿ ಪಡಿಸಲಾಗಿದೆ. ಈ ಪೈಕಿ 1.90 ಲಕ್ಷ ರು. ಮನರೇಗಾ ಅನುದಾನವಾದರೆ, 3.29 ಲಕ್ಷ ರು. ಅನುದಾನ ಶಿಕ್ಷಣ ಇಲಾಖೆಯಿಂದ ನೀಡಲಾಗುತ್ತದೆ. ಈಗಾಗಾಲೇ ಶಿಕ್ಷಣ ಇಲಾಖೆಯಿಂದ 82.26 ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು, ಮನರೇಗಾದಡಿ ಕೂಲಿ ಮತ್ತು ಸಾಮಗ್ರಿ ಮೊತ್ತ ಸೇರಿ 15.18 ಲಕ್ಷ ರು. ಪಾವತಿಸಲಾಗಿದೆ.

ಒಂದು ಕಾಲೇಜಿನಲ್ಲಿ ಶೌಚಾಲಯಗಳ ನಿರ್ಮಿಸಲು 5.20 ಲಕ್ಷ ರು. ವೆಚ್ಚ ನಿಗದಿ ಪಡಿಸಲಾಗಿದೆ. ಈ ಪೈಕಿ 1.84 ಲಕ್ಷ ಮನರೇಗಾ ಅನುದಾನವಾದರೆ, 3.35 ಲಕ್ಷ ರು. ಅನುದಾನ ಶಿಕ್ಷಣ ಇಲಾಖೆಯಿಂದ ನೀಡಲಾಗುತ್ತಿದೆ. ಈಗಾಗಾಲೇ ಶಿಕ್ಷಣ ಇಲಾಖೆಯಿಂದ 16.79 ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು, ಮನರೇಗಾದಲ್ಲಿ ಕೂಲಿ ಮತ್ತು ಸಾಮಗ್ರಿ ಮೊತ್ತ 3.13 ಲಕ್ಷ ರು. ಪಾವತಿಸಲಾಗಿದೆ.

5 ಪ.ಪೂ. ಕಾಲೇಜುಗಳು: ಕೊಯ್ಯೂರು ಗ್ರಾಮದ ಸ.ಪ.ಪೂ. ಕಾಲೇಜು ಕೊಯ್ಯೂರು, ಕೊಕ್ಕಡ ಗ್ರಾಮದ ಕೊಕ್ಕಡ ಪ.ಪೂ. ಕಾಲೇಜು, ವೇಣೂರು ಗ್ರಾಮದ ಸ.ಪ.ಪೂರ್ವ ಕಾಲೇಜು, ಹತ್ಯಡ್ಕ ಗ್ರಾಮದ ಸ.ಪ.ಪೂ. ಕಾಲೇಜು, ಕಣಿಯೂರು ಗ್ರಾಮದ ಸ.ಪ.ಪೂ. ಕಾಲೇಜು ಪದ್ಮುಂಜ.

30 ಸ.ಹಿ.ಪ್ರಾ.ಹಾಗೂ ಪ್ರೌಢಶಾಲೆಗಳು:

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾದ ಉಜಿರೆ, ಗಾಂಧಿನಗರ, ಬದನಾಜೆ, ಮಾವಿನಕಟ್ಟೆ ತಿಮ್ಮಣ್ಣಬೆಟ್ಟು ಹೊಕ್ಕಾಡಿಗೋಳಿ, ಪಡ್ಡಂದಡ್ಡ, ಉಂಬೆಟ್ಟು ಸರಳಿಕಟ್ಟೆ, ಮಚ್ಚಿನ, ಕುವೆಟ್ಟು, ಗೋವಿಂದೂರು, ತಣ್ಣೀರು ಪಂತ, ಕುಪ್ಪೆಟ್ಟಿ, ಕುಂಜತ್ತೋಡಿ, ತುರ್ಕಳಿಕೆ, ಕೆಮ್ಮಟೆ, ನೇಲ್ಯಡ್ಕ, ಕೊಕ್ಕಡ. ಸೂರ್ಯತ್ತಾವು, ಮೇಲಿನಡ್ಕ, ಮಾಯ, ದೇವನಾರಿ, ಮೂಡಾಯಿಬೆಟ್ಟು, ಮಿತ್ತ ಬಾಗಿಲು, ನಾವೂರು, ಬಯಲು. ಸರಕಾರಿ ಪ್ರೌಢ ಶಾಲೆಗಳಾದ ಅಳದಂಗಡಿ, ಪುತ್ತಿಲ, ಕರಾಯದಲ್ಲಿ ನಿರ್ಮಿಸಲಿದೆ................30 ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಒಟ್ಟು 1.40 ಕೋಟಿ ರು. ವೆಚ್ಚವಾಗಲಿದೆ.

5 ಕಾಲೇಜುಗಳಲ್ಲಿ 26 ಲಕ್ಷ ರು. ವೆಚ್ಚವಾಗಲಿದೆ. ಶಾಲೆಯಲ್ಲಿ ಸುವ್ಯವಸ್ಥಿತ ಶೌಚಾಲಯ ಕೊರತೆಯಿಂದ ಗ್ರಾಮೀಣ ಭಾಗದ ಶಾಲೆಗಳ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚು ತೊಂದರೆ ಅನುಭವಿಸುತ್ತಾರೆ. ಶಿಕ್ಷಣ ಇಲಾಖೆಯಡಿ ಅನುದಾನ ಸಾಕಷ್ಟು ಇಲ್ಲದಿರುವುದರಿಂದ ಮನರೇಗಾ ಜತೆ ಕೈಜೋಡಿಸಿ ಶೌಚಾಲಯ ನಿರ್ಮಿಸಲು ಮುಂದಾಗಿದೆ.

................

ತಾಲೂಕಿನ ಸರ್ಕಾರಿ ಶಾಲೆಗಳ ಪೈಕಿ ಕೆಲವು ಕಡೆಗಳಲ್ಲಿ ಸಮರ್ಪಕ ಶೌಚಾಲಯಗಳಿರಲಿಲ್ಲ. ಶಿಕ್ಷಣ ಇಲಾಖೆ ಅಂತಹ ಶಾಲೆಗಳನ್ನು ಗುರುತಿಸಿ ಜಿಪಂಗೆ ಮಾಹಿತಿ ನೀಡಿತ್ತು. ಹಾಗಾಗಿ ತಾಲೂಕಿನಲ್ಲಿ ಕಳೆದ 2 ವರ್ಷಗಳಿಂದ ಶಿಕ್ಷಣ ಇಲಾಖೆ ಮತ್ತು ಮನರೇಗಾ ಯೋಜನೆಯಡಿ ಆಯ್ದಶಾಲೆ, ಪ್ರೌಢ ಶಾಲೆ, ಕಾಲೇಜುಗಳಲ್ಲಿ ಶೌಚಾಲಯಗಳ ನಿರ್ಮಾಣವಾಗುತ್ತಿದೆ.

-ತಾರಾ ಕೇಸರಿ, ಬಿಇಒ, ಬೆಳ್ತಂಗಡಿ

..............

ಶಿಕ್ಷಣ ಇಲಾಖೆ ಮತ್ತು ಮನರೇಗಾ ಯೋಜನೆ ಒಗ್ಗೂಡಿವಿಕೆಯಲ್ಲಿ ಅನುದಾನ ಬಳಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಶಾಲಾ ಶೌಚಾಲಯ, ಪದವಿಪೂರ್ವ ಕಾಲೇಜಿನಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

-ಭವಾನಿ ಶಂಕ‌ರ್, ಇಒ, ತಾಪಂ, ಬೆಳ್ತಂಗಡಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''