ಮೊಬೈಲ್ ಬ್ಯಾಂಕಿಂಗ್ ಸೇವೆ: ಅಧ್ಯಕ್ಷ ಲೋಕೇಶ್

KannadaprabhaNewsNetwork |  
Published : Jun 20, 2026, 01:30 AM IST
್ಿಿ್ಿ | Kannada Prabha

ಸಾರಾಂಶ

ಗ್ರಾಹಕರ ಹಣಕಾಸು ವ್ಯವಹಾರವನ್ನು ಮತ್ತಷ್ಟು ಸರಳಗೊಳಿಸಲು ತುಮಕೂರು ಬಸವೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಎಂ.ಎನ್. ಲೋಕೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು ಗ್ರಾಹಕರ ಹಣಕಾಸು ವ್ಯವಹಾರವನ್ನು ಮತ್ತಷ್ಟು ಸರಳಗೊಳಿಸಲು ತುಮಕೂರು ಬಸವೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಎಂ.ಎನ್. ಲೋಕೇಶ್ ಹೇಳಿದರು.ನಗರದ ಬಸವೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜಿ. ಮಲ್ಲಿಕಾರ್ಜುನಯ್ಯ ಅವಿರೋಧವಾಗಿ ಆಯ್ಕೆಯಾದರು. ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಅವರು, 33 ವರ್ಷ ಪೂರೈಸಿರುವ ನಮ್ಮ ಸೊಸೈಟಿ ಎಲ್ಲಾ ಹಂತಗಳಲ್ಲಿಯೂ ಪ್ರಗತಿಯಲ್ಲಿ ಸಾಗುತ್ತಿದೆ. ಸಹಕಾರ ಇಲಾಖೆಯಲ್ಲಿ ಪರಿಷ್ಕರಣೆ ಆಗುತ್ತಿರುವ ನಿಯಮಗಳನ್ನು ಅನುಸರಿಸಿಕೊಂಡು, ಬ್ಯಾಂಕಿಂಗ್ ಕ್ಷೇತ್ರದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಶೇರುದಾರರಿಗೆ ಹೆಚ್ಚಿನ ಅನುಕೂಲ ಮಾಡಬೇಕು ಎಂಬ ಸಲಹೆ ಮಾಡಿದರು.

ಉಪಾಧ್ಯಕ್ಷ ಜಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಸಕಾಲದಲ್ಲಿ ಸಾಲ ವಸೂಲಾತಿ ಮಾಡಿ ಸೊಸೈಟಿಯನ್ನು ಬಲವರ್ಧನೆ ಮಾಡಲು ಎಲ್ಲಾ ನಿರ್ದೇಶಕರು ಅಧಿಕಾರಿಗಳೊಂದಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು. ನಿರ್ದೇಶಕರಾದ ಎಸ್.ಎಂ. ರಾಜು, ಟಿ.ಸಿ. ಓಹಿಲೇಶ್ವರ್, ಟಿ.ಕೆ. ಕುಮಾರಸ್ವಾಮಿ, ರೇಣುಕಯ್ಯ, ಕೆ.ಆರ್. ಮಹದೇವಯ್ಯ, ಎ.ಎಸ್. ರುದ್ರಮೂರ್ತಿ, ಎಸ್.ವಿ. ಗುರುದೇವಯ್ಯ, ಕೆ.ಎಂ. ಸಿದ್ಧಲಿಂಗಪ್ಪ, ಜಿ.ಎಸ್. ಸಿದ್ಧಲಿಂಗಪ್ಪ, ಎಚ್. ರವಿ, ಬಿ. ಕುಮಾರ್, ಟಿ.ಎನ್. ಮಹದೇವಯ್ಯ, ಎಚ್.ಜಿ. ವೀರಶೆಟ್ಟಪ್ಪ, ಟಿ.ಜೆ. ಅರುಣ್‌ಕುಮಾರ್, ಪವನ್‌ಮೂರ್ತಿ, ಬಿ.ಎಸ್. ವೀಣಾ ನಾಗೇಶ್, ಕೆ.ವಿ. ಸುಮ, ಸಿಇಒ ಎ.ಜೆ. ಉಮೇಶ್ ಹಾಗೂ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕರು ಅವರವರ ಆತ್ಮಸಾಕ್ಷಿಗೆ ಮತ ಚಲಾಯಿಸಿದ್ದಾರೆ
ಸೂಕ್ತ ಪರಿಷ್ಕರಣೆಯಿಂದ 14 ಲಕ್ಷ ಮತಗಳು ವಿಮರ್ಶೆಗೆ ಒಳಪಡುತ್ತದೆ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ