1.7 ಕೋಟಿಯ ಮೊಬೈಲ್‌ಗಳುಮರಳಿ ಮಾಲಿಕರಿಗೆ ಹಸ್ತಾಂತರ

KannadaprabhaNewsNetwork |  
Published : May 06, 2026, 04:00 AM IST
1.75 ಕೋಟಿ ಮೊಬೈಲ್ | Kannada Prabha

ಸಾರಾಂಶ

ಕಳೆದ ತಿಂಗಳು ಸಾರ್ವಜನಿಕರು ಕಳೆದುಕೊಂಡಿದ್ದ 1.75 ಕೋಟಿ ರು. ಮೌಲ್ಯದ 692 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಈಶಾನ್ಯ ವಿಭಾಗದ ಪೊಲೀಸರು ಮರಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ತಿಂಗಳು ಸಾರ್ವಜನಿಕರು ಕಳೆದುಕೊಂಡಿದ್ದ 1.75 ಕೋಟಿ ರು. ಮೌಲ್ಯದ 692 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಈಶಾನ್ಯ ವಿಭಾಗದ ಪೊಲೀಸರು ಮರಳಿಸಿದ್ದಾರೆ.

ಯಲಹಂಕ-83, ಯಲಂಹಕ ನ್ಯೂ ಟೌನ್‌-76, ಕೊಡಿಗೇಹಳ್ಳಿ-66, ವಿದ್ಯಾರಣ್ಯಪುರ-86, ಸಂಪಿಗೆಹಳ್ಳಿ -107, ಕೊತ್ತನೂರು-70, ಬಾಗಲೂರು-85, ಅಮೃತಹಳ್ಳಿ-66, ಚಿಕ್ಕಜಾಲ-34, ದೇವನಹಳ್ಳಿ-12 ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ-07 ಸೇರಿದಂತೆ ಒಟ್ಟು ಈಶಾನ್ಯ ವಿಭಾಗದ 11 ಠಾಣೆಗಳ ಪೊಲೀಸರು ಒಟ್ಟು 692 ಮೊಬೈಲ್ ಪತ್ತೆ ಹಚ್ಚಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಮೊಬೈಲ್ ಪತ್ತೆ ತಂಡ ರಚನೆ:

ಮೊಬೈಲ್‌ಗಳ ಕಳ್ಳತನ ಪತ್ತೆಗೆ ಪ್ರತಿ ವಿಭಾಗದಲ್ಲಿ ತಂಡ ರಚಿಸಲಾಗಿದೆ. ಮೊಬೈಲ್ ಕಣ್ಮರೆ ಬಗ್ಗೆ ಸಿಇಐರ್ ಪೋರ್ಟಲ್‌ನಲ್ಲಿ ದೂರು ದಾಖಲಾದ ಕೂಡಲೇ ಪೊಲೀಸರು ಕಾರ್ಯಾಚರಣೆಗಿಳಿಯುತ್ತಾರೆ. ಅಂತೆಯೇ ಏಪ್ರಿಲ್ ತಿಂಗಳಲ್ಲಿ ಈಶಾನ್ಯ ವಿಭಾಗದ ಪೊಲೀಸರು ಉತ್ತಮ ಕಾರ್ಯನಿರ್ವಹಣೆ ತೊರಿದ್ದಾರೆ ಎಂದು ಆಯುಕ್ತರು ಶ್ಲಾಘಿಸಿದರು. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಹ ಕಳವು ಮೊಬೈಲ್‌ಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮೊಬೈಲ್ ಕಳ್ಳತನ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮೊಬೈಲ್ ಕಳ್ಳತನವಾದ ಕೂಡಲೇ ಸಿಇಐಆರ್ ಪೋರ್ಟಲ್‌ನಲ್ಲಿ ಸಾರ್ವಜನಿಕರು ದೂರು ದಾಖಲಿಸಿದರೆ ತನಿಖೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಲಸಕ್ಕಿದ್ದ ಉದ್ಯಮಿ ಮನೆಯಲ್ಲಿ43 ಲಕ್ಷದ ಆಭರಣ ಕದ್ದ ದಂಪತಿ
140 ಕಿ.ಮೀ ಬೆನ್ನತ್ತಿ ಕಳ್ಳನನ್ನುಹಿಡಿದು ಬಂಧಿಸಿದ ಪೊಲೀಸರು