ನಾಗರಿಕ ರಕ್ಷಣಾ ಕಾರ್ಯಾಚರಣೆಯ ಅಣುಕು ಪ್ರದರ್ಶನ

KannadaprabhaNewsNetwork |  
Published : May 20, 2025, 01:02 AM IST
ಯುದ್ಧ ಸಂಭವಿಸುವ ಸಂದರ್ಭದಲ್ಲಿ ಆಗಬಹುದಾದ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತ ಮೂಡಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ವತಿಯಿಂದ ಸಂಡೂರಿನ ತೋರಣಗಲ್ಲು ಬಳಿಯ ಜೆಎಸ್‌ಡಬ್ಲ್ಯೂ ವಿಜಯನಗರ ಟೌನ್‌ಶಿಪ್ ನಲ್ಲಿ ನಾಗರಿಕ ರಕ್ಷಣಾ ಕಾರ್ಯಚರಣೆಯ ಅಣುಕು ಪ್ರದರ್ಶನ ಜರುಗಿತು.  | Kannada Prabha

ಸಾರಾಂಶ

ಆಪರೇಶನ್ ಅಭ್ಯಾಸ್ ಅಡಿ ನಾಗರಿಕ ರಕ್ಷಣಾ ಕಾರ್ಯಾಚರಣೆಯ ಅಣುಕು ಪ್ರದರ್ಶನವನ್ನು ಸಂಡೂರಿನ ತೋರಣಗಲ್ಲು ಬಳಿಯ ಜೆಎಸ್‌ಡಬ್ಲ್ಯೂ ವಿಜಯನಗರ ಟೌನ್‌ಶಿಪ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಪ್ರಸ್ತುತ ದೇಶದಲ್ಲಿ ಯುದ್ಧ ಸಂಭವಿಸುವ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಮುಂದೆ ಆಗಬಹುದಾದ ಎಲ್ಲಾ ರೀತಿಯ ಅನಾಹುತ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತೆ ಮೂಡಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ವತಿಯಿಂದ ಆಪರೇಶನ್ ಅಭ್ಯಾಸ್ ಅಡಿ ನಾಗರಿಕ ರಕ್ಷಣಾ ಕಾರ್ಯಾಚರಣೆಯ ಅಣುಕು ಪ್ರದರ್ಶನವನ್ನು ಸಂಡೂರಿನ ತೋರಣಗಲ್ಲು ಬಳಿಯ ಜೆಎಸ್‌ಡಬ್ಲ್ಯೂ ವಿಜಯನಗರ ಟೌನ್‌ಶಿಪ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಣುಕು ಪ್ರದರ್ಶನದಲ್ಲಿ ನುರಿತ ಅಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜೆಎಸ್‌ಡಬ್ಲ್ಯೂ ನ ಕ್ಯೂಆರ್‌ಟಿ, ಸಂಶೋಧನಾ ಮತ್ತು ರಕ್ಷಣೆ, ವಿಮಾನ ನಿಲ್ದಾಣ ಭದ್ರತಾ ತಂಡ, ಶ್ವಾನದಳ, ಅಗ್ನಿಶಾಮಕ ದಳದ ತಂಡ ಮತ್ತು ಇತರೆ ತಂಡ ಒಳಗೊಂಡಂತೆ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಅಣುಕು ಪ್ರದರ್ಶನ ನಡೆಸಿಕೊಟ್ಟರು.

ಅಣುಕು ಪ್ರದರ್ಶನದಲ್ಲಿ ಅನಾಹುತ ಸಂಭವಿಸಿದಲ್ಲಿ ಕೈಗೊಳ್ಳಬಹುದಾದ ಪ್ರಥಮ ಚಿಕಿತ್ಸಾ ಕಾರ್ಯ, ಸುರಕ್ಷಿತ ಸ್ಥಳದಲ್ಲಿ ಅಡಗುವಿಕೆ, ಶ್ವಾನಗಳ ಕಾರ್ಯಾಚರಣೆ ಹಾಗೂ ಇತರೆ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಯಪಡಿಸಲಾಯಿತು.

ಈ ಸಂದರ್ಭ ಸಹಾಯಕ ಆಯುಕ್ತ ಪಿ.ಪ್ರಮೋದ್, ತೋರಣಗಲ್ಲು ವಿಭಾಗ ಡಿ.ಎಸ್.ಪಿ ಪ್ರಸಾದ್ ಗೋಖಲೆ ಸೇರಿದಂತೆ ಆರೋಗ್ಯ ಇಲಾಖೆ, ಕಾರ್ಖಾನೆಗಳು ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಗೃಹ ರಕ್ಷಕದಳ ಅಧಿಕಾರಿಗಳು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು ಮತ್ತು ಸಾರ್ವಜನಿಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ