- ಶ್ರೀ ವೀರಭದ್ರೇಶ್ವರ ಸನ್ನಿಧಿ, ಸ್ವಾಮೀಜಿ ಸಮಕ್ಷಮ ಅಭ್ಯರ್ಥಿಗಳ ಆಣೆ, ಪ್ರಮಾಣಕ್ಕೆ ಒಲಿದ ಮತದಾರ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಚುನಾವಣೆಯಲ್ಲಿ ಯಾವುದೇ ಆಮಿಷ, ಹಣ ಹಂಚದೇ, ಶ್ರೀ ವೀರಭದ್ರೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡುವ ಮೂಲಕ ವಿಶಿಷ್ಟ ಚುನಾವಣೆಯನ್ನು ಶ್ರೀ ವೀರಭದ್ರೇಶ್ವರ ಸ್ವಾಮಿ ತಂಡವು ಸಂಘದ ನುಗ್ಗಿಹಳ್ಳಿ, ನೀತಿಗೆರೆ, ಹೊನ್ನೇಮರದಹಳ್ಳಿ, ಬೊಮ್ಮೇನಹಳ್ಳಿ ಗ್ರಾಮಗಳ ಎಲ್ಲ ಮತದಾರರ ವಿಶ್ವಾಸ ಗಳಿಸಿ, ಮಾದರಿ ಚುನಾವಣೆಗೆ ಕಾರಣವಾಗಿದೆ ಎಂದರು.
ಚುನಾವಣೆ ಘೋಷಣೆಗೆ ಮುನ್ನವೇ ಗ್ರಾಮದ ಹಿರಿಯರು, ಸಮಾನ ಮನಸ್ಕರು ಸೇರಿ ವೀರಭದ್ರೇಶ್ವರ ಸ್ವಾಮಿ ತಂಡವನ್ನು ರಚಿಸಿದ್ದೆವು. ಭ್ರಷ್ಟಾಚಾರರಹಿತ ಆಡಳಿತ ನೀಡುವ ಸಂಕಲ್ಪದೊಂದಿಗೆ ಸ್ಪರ್ಧಿಸಿದ್ದ ತಂಡದ ಅಭ್ಯರ್ಥಿಗಳು ನಾವು ಮತದಾರರಿಗೆ ಆಸೆ, ಆಮಿಷವೊಡ್ಡುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆಂದು ದೇವಸ್ಥಾನದಲ್ಲಿ ಪ್ರಮಾಣದ ಪತ್ರ ಓದಿ, ಆಣೆ ಮಾಡಿದ್ದೆವು. ಈ ಆಣೆ, ಪ್ರಮಾಣದ ವೀಡಿಯೋ ಹಾಗೂ ಮುದ್ರಿತ ಪ್ರತಿಯನ್ನು ಸಂಘದ ವ್ಯಾಪ್ತಿಯ ಎಲ್ಲ 800 ಮತದಾರರರ ಮನೆ ಮನೆಗೂ ತಲುಪಿಸಿ, ಮತ ಕೇಳಿದ್ದೆವು ಎಂದರು.ಸಹಕಾರ ಸಂಘಗಳ ಚುನಾವಣೆಗಳ ಬಗ್ಗೆ ಮತದಾರರಲ್ಲಿದ್ದ ನಿರಾಸಕ್ತಿ ದೂರಗೊಳಿಸಲು ಪಾಂಡೋಮಟ್ಟಿ ಶ್ರೀ ಗುರುಬಸವ ಸ್ವಾಮೀಜಿ ನೇತೃತ್ವದಲ್ಲಿ ಜಾಗೃತಿ ಸಭೆಗಳನ್ನು ಗ್ರಾಮಗಳಲ್ಲಿ ನಡೆಸಲಾಗಿತ್ತು. ಸ್ವಾಮೀಜಿ ಸಮ್ಮುಖ ಎಲ್ಲ ಅಭ್ಯರ್ಥಿಗಳೂ ಆಣೆ, ಪ್ರಮಾಣ ಮಾಡಿದ್ದರು. ಇದರಿಂದ ಪ್ರೇರಿತರಾದ ಮತದಾರರು ಸಹ ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ಶೇ.80ರಷ್ಟು ಮತ ಚಲಾಯಿಸಿ ಹೊಸ ದಾಖಲೆ ಬರೆದರು ಎಂದು ತಿಳಿಸಿದರು.
ಸಂಘದ ಚುನಾಯಿತ ಸದಸ್ಯರಾದ ಎಂ.ಪಿ. ಕುಮಾರಸ್ವಾಮಿ, ಬಿ.ಸಿ. ಮಹಾರುದ್ರಪ್ಪ, ಎಸ್.ಸಿ. ಮಹಾರುದ್ರಪ್ಪ, ಎನ್.ಸಿ. ಶಶಿಧರ, ಎನ್.ಸಿ.ಸುರೇಶ, ಎ.ಎಸ್.ಮಾದಮ್ಮ, ಎಚ್.ಎಂ.ರೂಪಾ, ಎಂ.ವಿ. ರಮೇಶ, ರಮೇಶ ನಾಯ್ಕ, ನಾಗರಾಜಪ್ಪ, ಚಂದ್ರಪ್ಪ, ರಘು ಇತರರು ಇದ್ದರು.
-10ಕೆಡಿವಿಜಿ4: ದಾವಣಗೆರೆಯಲ್ಲಿ ಶನಿವಾರ ಚನ್ನಗಿರಿ ತಾ. ನೀತಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜಯ ಗಳಿಸಿದ ತಂಡದ ಎನ್.ಸಿ. ಶಶಿಧರ (ಬಾಬು) ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.