ದಬ್ಬಗುಂಟಹಳ್ಳಿ ಹಾಲು ಉತ್ಪಾದಕರ ಸಂಘ ತಾಲೂಕಿಗೆ ಮಾದರಿ: ಹುಲ್ಲೂರು ಮಂಜುನಾಥ್

KannadaprabhaNewsNetwork |  
Published : Nov 22, 2024, 01:15 AM IST
ಫೋಟೋ: 21 ಹೆಚ್‌ಎಸ್‌ಕೆ 1ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿ ದಬ್ಬಗುಂಟಹಳ್ಳಿ ನೂತನ ಹಾಲು ಉತ್ಪಾದಕರ ಕಟ್ಟಡ ಉದ್ಘಾಟಿಸಿ ಪೂಜಾಕಾರ್ಯಕ್ರಮದಲ್ಲಿ ಡೈರಿ ನಿರ್ದೇಶಕರು ಅಧ್ಯಕ್ಷರು, ಮಾಜಿಅಧ್ಯಕ್ಷರನ್ನು ಬಮುಲ್ ನಿರ್ದೇಶಕ ಹುಲ್ಲೂರು ಮಂಜುನಾಥ್ ಸೇರಿದಂತೆ ಇತರರು ಅಭಿನಂಧಿಸಿದರು. | Kannada Prabha

ಸಾರಾಂಶ

ನಾವು 24 ವರ್ಷಗಳ ಹಿಂದೆ ಆಗ ನಿರ್ದೇಶಕರಾಗಿದ್ದ ಹುಲ್ಲೂರು ಮಂಜುನಾಥ್‌ರವರನ್ನು ಮನವಿ ಮಾಡಿದಾಗ ಕೇವಲ 15 ದಿನಗಳಲ್ಲೇ ನಮಗೆ ಡೇರಿ ಮಂಜೂರು ಮಾಡಿಸಿದ್ದು, ನಮ್ಮ ಗ್ರಾಮಸ್ಥರ ಆರ್ಥಿಕ ಸ್ವಾವಲಂಬನೆಗೆ ನೆರವಾದ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಹಾಲು ಉತ್ಪಾದನೆಯಲ್ಲಿ ದಬ್ಬಗುಂಟಹಳ್ಳಿ ಡೇರಿ ತಾಲೂಕಿಗೆ ಮಾದರಿಯಾಗಿ ಮುಂಚೂಣಿಯಲ್ಲಿದೆ ಎಂದು ಬಮುಲ್ ನಿರ್ದೆಶಕ ಹುಲ್ಲೂರು ಸಿ.ಮಂಜುನಾಥ್ ಹೇಳಿದರು.

ಜಡಿಗೇನಹಳ್ಳಿ ಹೋಬಳಿ ದಬ್ಬಗುಂಟಹಳ್ಳಿ ಗ್ರಾಮದ ಹಾಲಿನ ಡೇರಿಯ ನೂತನ ಕಟ್ಟಡ ಉದ್ಘಾಟನೆ, ಕನಕದಾಸರ ಜಯಂತಿ, ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗೂ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

60 ಕುಟುಂಬಗಳಿರುವ ಈ ಗ್ರಾಮದಲ್ಲಿ 45 ಕುಟುಂಬಗಳಿಗೆ ಹೈನುಗಾರಿಕೆಯೇ ಆದಾಯದ ಮೂಲವಾಗಿದ್ದು, 25 ವರ್ಷಗಳ ಹಿಂದೆ 25 ಲೀಟರ್ ಹಾಲಿನಿಂದ ಕೃಷ್ಣಪ್ಪ ಎಂಬುವವರ ಶೆಡ್ಡಿನಲ್ಲಿ ಪ್ರಾರಂಭವಾದ ಸಂಘವು ಇಂದು 750 ಲೀಟರ್ ನಷ್ಟು ಹಾಲು ಉತ್ಪಾದಿಸುತಿದ್ದು, 9 ಲಕ್ಷ ರು. ಮೊತ್ತದಲ್ಲಿ ಸುಸಜ್ಜಿತವಾದ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿರುವುದಲ್ಲದೆ 9 ಲಕ್ಷ ರು.ನಿವ್ವಳ ಲಾಭವನ್ನು ಕೂಡ ಗಳಿಸಿದ್ದು, ಇದಕ್ಕೆ ಹಾಲು ಉತ್ಪಾದಕರು ಕಾರಣರಾದರೂ ಕೂಡ ಅಧ್ಯಕ್ಷರಾಗಿ ನಾರಾಯಣಪ್ಪನವರು, ನಿರ್ದೇಶಕರ ಮತ್ತು ಹಾಲು ಉತ್ಪಾದಕರ ಸಹಕಾರದಿಂದ 25 ವರ್ಷಗಳ ನಿಸ್ವಾರ್ಥ ಸೇವೆ ಸಂಘವನ್ನು ಲಾಭದಾಯಕಗೊಳಿಸಿರುವುದು ಹೆಮ್ಮೆಯ ವಿಚಾರ ಎಂದರು.

ಸಂಘದ ಅಧ್ಯಕ್ಷ ನಾರಾಯಣಪ್ಪ ಮಾತನಾಡಿ, ನಾವು 24 ವರ್ಷಗಳ ಹಿಂದೆ ಆಗ ನಿರ್ದೇಶಕರಾಗಿದ್ದ ಹುಲ್ಲೂರು ಮಂಜುನಾಥ್‌ರವರನ್ನು ಮನವಿ ಮಾಡಿದಾಗ ಕೇವಲ 15 ದಿನಗಳಲ್ಲೇ ನಮಗೆ ಡೇರಿ ಮಂಜೂರು ಮಾಡಿಸಿದ್ದು, ನಮ್ಮ ಗ್ರಾಮಸ್ಥರ ಆರ್ಥಿಕ ಸ್ವಾವಲಂಬನೆಗೆ ನೆರವಾದ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ, ನಮ್ಮ ನಿರ್ದೆಶಕರು ಮತ್ತು ಉತ್ಪಾದಕರ ಸಹಕಾರವೇ ಇಂದು ಸಂಘವು ಇಷ್ಟು ಲಾಭದಾಯಕವಾಗಿರಲು ಕಾರಣವಾಗಿದೆ ಎಂದರು.

ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ರಾಮು ಮಾತನಾಡಿ, ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ, ಹೂ ಬೆಲೆಗಳು ಅಗ್ಗವಾಗಬಹುದು ಅಥವಾ ತುಟ್ಟಿಯಾಗಬಹುದು. ಆದರೆ ಹೈನುಗಾರಿಕಯಲ್ಲಿ ಆ ದಿನದ ಲಾಭ ರೈತರಿಗೆ ನಿಖರವಾಗಿ ತಿಳಿದಿರುತ್ತದೆ. ಆದ್ದರಿಂದ ಹೈನುಗಾರಿಕೆ ರೈತರ ಕೈ ಹಿಡಿದಿದೆ, ಕನಕದಾಸರು ೧೫ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಸರಳ ಭಾಷೆಯಲ್ಲಿ ಕೀರ್ತನೆಗಳ ಮೂಲಕ ಜನರಿಗೆ ಅರಿವು ಮೂಡಿಸಿದ್ದು ಅಲ್ಲದೆ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಹೊಸಕೋಟೆ ಶಿಬಿರದ ಉಪವ್ಯವಸ್ಥಾಪಕ ಶಿವಾಜಿ ನಾಯಕ್, ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆಂಚಪ್ಪ, ಹಾಲು ಪರೀಕ್ಷಕ ಮಂಜುನಾಥ್, ಉಪಾಧ್ಯಕ್ಷ ನಾರಾಯಣಪ್ಪ, ನಿರ್ದೇಶಕರಾದ ಮುನಿಯಪ್ಪ, ವೆಂಕಟೇಶಪ್ಪ ರಾಮಕೃಷ್ಣಪ್ಪ, ಶ್ರೀನಿವಾಸ್, ರವಿಕುಮಾರ್, ಗೋವಿಂದಪ್ಪ, ಸಹಾಯಕ ವ್ಯವಸ್ಥಾಪಕ ಶ್ರೀರಾಮ್, ವಿಸ್ತರಣಾಧಿಕಾರಿ ವಿನಯ್, ಸುಬ್ರಹ್ಮಣಾಚಾರಿ, ಮುನೇಗೌಡ, ಸೇರಿದಂತೆ ಹಾಲು ಉತ್ಪಾದಕರು ಇದ್ದರು.

PREV

Recommended Stories

ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ
ನಾಯಿ ಕಚ್ಚಿ ರಕ್ತ ಬಂದರೂ ಸಮೀಕ್ಷೆ ಮುಗಿಸಿದ ಶಿಕ್ಷಕಿ