ಶರಣ ಹೂಗಾರ ಮಾದಣ್ಣನವರ ಕಾಯಕ ನಿಷ್ಠೆ ಮಾದರಿ: ಡಾ.ಪಟ್ಟದ್ದೇವರ

KannadaprabhaNewsNetwork |  
Published : Sep 20, 2024, 01:32 AM IST
ಚಿತ್ರ 19ಬಿಡಿಆರ್3ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ಭಾಲ್ಕಿಯ ಹೂಗಾರ ಸಮಾಜದ ಮುಖಂಡ ರವಿ ಹೂಗಾರ ಅವರನ್ನು ಪೂಜ್ಯರು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಹೂಗಾರ ಮಾದಣ್ಣನವರು ಬಸವಣ್ಣನ ಸಮಕಾಲೀನ ಶರಣರು. ಅನುಭವ ಮಂಟಪದಲ್ಲಿ ಎಲ್ಲ ಶರಣರ ಜೊತೆ ಅನುಭಾವ ಮಾಡಿದವರು

ಕನ್ನಡಪ್ರಭ ವಾರ್ತೆ ಭಾಲ್ಕಿ

ಶರಣ ಹೂಗಾರ ಮಾದಣ್ಣನವರ ಕಾಯಕ ನಿಷ್ಠೆ, ದಾಸೋಹ ಭಾವ ಹಾಗೂ ಇಷ್ಟಲಿಂಗ ನಿಷ್ಠೆಯ ಕುರಿತು ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿದರು.

ಅವರು ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ 480ನೇ ಮಾಸಿಕ ಶಿವಾನುಭವಗೋಷ್ಠಿ ಹಾಗೂ ಶರಣ ಹೂಗಾರ ಮಾದಣ್ಣನವರ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಹೂಗಾರ ಮಾದಣ್ಣನವರು ಬಸವಣ್ಣನ ಸಮಕಾಲೀನ ಶರಣರು. ಅನುಭವ ಮಂಟಪದಲ್ಲಿ ಎಲ್ಲ ಶರಣರ ಜೊತೆ ಅನುಭಾವ ಮಾಡಿದವರು. ನಿತ್ಯ ಬೆಳಗ್ಗೆ ಶಿವಶರಣರ ಮನೆಗೆ ಹೂ ಮತ್ತು ಬಿಲ್ವಪತ್ರಿ ವಿತರಿಸುವ ಕಾಯಕ ಮಾಡುತ್ತ ತಮ್ಮ ಸುವಿಚಾರದಿಂದ ಎಲ್ಲರ ಮನಸ್ಸು ಅರಳಿಸಿದವರು ಎಂದರು.

ಹೂಗಾರ ಮಾದಣ್ಣನ ಕಾಯಕ ಮತ್ತು ದಾಸೋಹತತ್ವದಲ್ಲಿ ಅತ್ಯಂತ ಶ್ರದ್ಧೆ ಇಟ್ಟುಕೊಂಡವರು. ಹೂಗಾರ ಮಾದಣ್ಣನವರ ಪತ್ನಿ ಮಹಾದೇವಿ ಪತಿಗೆ ತಕ್ಕ ಸತಿಯಾಗಿದ್ದಳು. ಸಕಲೇಶ ಮಾದರಸರಿಂದ ಇಷ್ಟಲಿಂಗ ದೀಕ್ಷೆ ಪಡೆದುಕೊಂಡು ಲಿಂಗಾನುಭವವನ್ನು ಸಾಧಿಸಿದ ಮಹಾ ಶರಣರಾದರು.

ಹೂಗಾರ ಮಾದಣ್ಣನವರ ಜೀವನ ಚರಿತ್ರೆ ಜನಪದ ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡಿದೆ. ಅವರ ವಚನಗಳು ನಮಗೆ ದೊರೆತಿಲ್ಲ. ಚರಿತ್ರೆಯೂ ಸಿಗುವುದಿಲ್ಲ. ಆದರೆ ಜನಪದ ಸಾಹಿತ್ಯದಿಂದ ಹೂಗಾರ ಮಾದಣ್ಣನವರ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಸಾಧ್ಯವಿದೆ. ಅವರು ವಿಶ್ವಗುರು ಬಸವಣ್ಣನವರನ್ನು ನಂಬಿ ಅವರ ತತ್ವಾದರ್ಶಗಳನ್ನು ಅನುಷ್ಠಾನದಲ್ಲಿ ತಂದರು ಎಂದು ಪೂಜ್ಯರು ಆರ್ಶೀವಚನ ನೀಡಿದರು.

ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು. ಮನೋಹರ ಫುಲಾರಿ ಅಧ್ಯಕ್ಷತೆ ವಹಿಸಿದ್ದರು. ರಾಜಕುಮಾರ ಹೂಗಾರ ಶ್ರೀಮಂಡಲ ಅವರಿಂದ ಅನುಭಾವ ನಡೆಯಿತು. ಸಂತೋಷ ಮಾಲಗಾರ ಗ್ರಂಥ ಪಠಣ ಮಾಡಿದರು. ಮುಖ್ಯ ಅತಿಥಿಗಳಾಗಿ ಜಯಪ್ರಕಾಶ ಮಾಲಗಾರ, ವಿಠ್ಠಲ ಹೂಗಾರ, ವೀರಣ್ಣ ಹೂಗಾರ ಭಾಗವಹಿಸಿದ್ದರು. ರವಿ ಹೂಗಾರ ಭಾಲ್ಕಿ ಅವರಿಗೆ ಸನ್ಮಾನಿಸಲಾಯಿತು.

ಬಸವರಾಜ ಹೂಗಾರ, ಶಿವಕುಮಾರ ಹೂಗಾರ, ಜಗದೀಶ ಡೋಣಗಾಪೂರೆ ಹೂಗಾರ ಉಪಸ್ಥಿತರಿದ್ದರು. ವೀರಣ್ಣ ಕುಂಬಾರ ನಿರೂಪಿಸಿದರರು. ರಾಜಕುಮಾರ ಹೂಗಾರ ಅವರಿಂದ ವಚನ ಸಂಗೀತ ಜರುಗಿತು. ಅಕ್ಕನ ಬಳಗದ ಶರಣೆಯರು ಹಾಗೂ ಮಠದ ಸದ್ಭಕ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಳಸಾ-ಬಂಡೂರಿ: ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸಲಿ: ಸಿ.ಸಿ. ಪಾಟೀಲ
ಉತ್ತಮ ಪ್ರತಿಭೆ ಗುರುತಿಸಲು ಕಲಾ ಪ್ರತಿಭೋತ್ಸವ ಕಾರ್ಯಕ್ರಮ ಸಹಕಾರಿ