ಮುರ್ಡೇಶ್ವರ, ಕಣ್ಣೂರಿಗೆ ಹೋಗುವ ಎಕ್ಸ್‌ಪ್ರೆಸ್ರೈ ಲುಗಳಿಗೆ ಹೊಸ ಮಾದರಿಯ ಬೋಗಿಗಳ ಅಳವಡಿಕೆ

KannadaprabhaNewsNetwork | Updated : Apr 18 2025, 07:53 AM IST

ಸಾರಾಂಶ

ಮುರ್ಡೇಶ್ವರ, ಕಣ್ಣೂರಿಗೆ ಹೋಗುವ ರೈಲುಗಳಿಗೆ ಹೊಸ ಮಾದರಿಯ ಬೋಗಿಗಳನ್ನು ಅಳವಡಿಸಲಾಗುತ್ತಿದೆ.

  ಬೆಂಗಳೂರು : ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರು-ಮುರ್ಡೇಶ್ವರ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿನ ಸಾಂಪ್ರದಾಯಿಕ ಐಸಿಎಫ್ ಬೋಗಿ ಬದಲಿಸಿ ಅತ್ಯಾಧುನಿಕ ಎಲ್‌ಎಚ್‌ಬಿ (ಲಿಂಕ್ ಹಾಫ್ಮನ್ ಬುಶ್) ಬೋಗಿ ಅಳವಡಿಸಲು ನೈಋತ್ಯ ರೈಲ್ವೆ ಮುಂದಾಗಿದೆ.

ನೂತನ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಕಾರ್ಯನಿರ್ವಹಿಸಲಿರುವ ಎಸ್ಎಂವಿಟಿ ಬೆಂಗಳೂರು-ಮುರ್ಡೇಶ್ವರ ಎಕ್ಸ್‌ಪ್ರೆಸ್‌ ರೈಲು (16585) ಮೇ 5ರಿಂದ ಸಂಚಾರ ಆರಂಭಿಸಲಿದೆ. ಮುರ್ಡೇಶ್ವರದಿಂದ ಹಿಮ್ಮಾರ್ಗದ ರೈಲು (16586) ಮೇ 6ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ.

ಬೆಂಗಳೂರು-ಕಣ್ಣೂರು:

ಇದಲ್ಲದೆ, ಬೆಂಗಳೂರಿನಿಂದ ಕಣ್ಣೂರಿಗೆ ಸಂಪರ್ಕ ಕಲ್ಪಿಸುವ ರೈಲು (16511) ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಮೇ 7ರಿಂದ ಹಾಗೂ ಹಿಮ್ಮಾರ್ಗದಲ್ಲಿ ಸಂಚರಿಸುವ ರೈಲು (16512) ಮೇ 8ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ.

ನವೀಕರಿಸಲಾದ ಎಲ್‌ಎಚ್‌ಬಿ ರೇಕ್ ಒಟ್ಟು 20 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ ಫಸ್ಟ್ ಕ್ಲಾಸ್ ಎಸಿ (1), ಎಸಿ 2-ಟೈರ್ (2), ಎಸಿ 3-ಟೈರ್ (4), ಸ್ಲೀಪರ್ ಕ್ಲಾಸ್ (7), ಜನರಲ್ ಸೆಕೆಂಡ್ ಕ್ಲಾಸ್ (4), ಲಗೇಜ್/ ಜನರೇಟರ್ ಬೋಗಿ (2). ಇರಲಿವೆ. ಸದ್ಯ 22 ಬೋಗಿಗಳನ್ನು ಹೊಂದಿದ್ದ ‘ಐಸಿಎಫ್ ರೇಕ್’ನ ಬದಲಿಗೆ ಈಗ 20 ಹೊಸ ಎಲ್‌ಎಚ್‌ಬಿ ಬೋಗಿಗಳನ್ನು ಅಳವಡಿಸಲಾಗಿದೆ.ಬೆಳಗಾವಿ-ಬೆಂಗಳೂರಿಗೆ ನಾಡಿದ್ದು ವಿಶೇಷ ರೈಲುಕನ್ನಡಪ್ರಭ ವಾರ್ತೆ ಬೆಂಗಳೂರುಬೇಸಿಗೆ ರಜೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಬೆಳಗಾವಿ ಮತ್ತು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ತಲಾ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

ಬೆಳಗಾವಿ–ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು (07385) ಏಪ್ರಿಲ್ 20ರಂದು ಬೆಳಗಾವಿಯಿಂದ ಸಂಜೆ 5.30ಕ್ಕೆ ಹೊರಟು, ಮರುದಿನ ಬೆಳಗ್ಗೆ 5ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ. ಹಿಂತಿರುಗುವ ರೈಲು (07386) ಏ.21ರಂದು ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 7ಕ್ಕೆ ಹೊರಟು, ಮರುದಿನ ಬೆಳಗ್ಗೆ 8ಕ್ಕೆ ಬೆಳಗಾವಿ ತಲುಪಲಿದೆ.ಈ ರೈಲು ಖಾನಾಪುರ, ಲೊಂಡಾ, ಅಳ್ನಾವರ, ಧಾರವಾಡ, ಹುಬ್ಬಳ್ಳಿ, ಹಾವೇರಿ, ಹರಿಹರ, ದಾವಣಗೆರೆ, ಬಿರೂರು, ಅರಸೀಕೆರೆ, ತುಮಕೂರು ಮತ್ತು ಚಿಕ್ಕಬಾಣಾವರ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ರೈಲಿನಲ್ಲಿ ಒಟ್ಟು 16 ಬೋಗಿಗಳು ಇರಲಿವೆ, ಎಸಿ ಟು-ಟೈರ್ (1), ಎಸಿ ತ್ರಿ-ಟೈರ್ (1), ಸ್ಲೀಪರ್ ಕ್ಲಾಸ್ (8), ಸಾಮಾನ್ಯ ದ್ವಿತೀಯ ದರ್ಜೆ (4) ಮತ್ತು ಎಸ್ಎಲ್ಆರ್/ಡಿ (2) ಬೋಗಿಗಳು ಇರಲಿವೆ.

ಹೊಳಲ್ಕೆರೆ, ಅಮೃತಾಪುರದಲ್ಲಿ ಪ್ಯಾಸೆಂಜರ್ ರೈಲು ನಿಲುಗಡೆಕನ್ನಡಪ್ರಭ ವಾರ್ತೆ ಬೆಂಗಳೂರುಪ್ರಯಾಣಿಕರ ಅನುಕೂಲಕ್ಕಾಗಿ, ನೈಋತ್ಯ ರೈಲ್ವೆಯು ಕೆಎಸ್ಆರ್ ಬೆಂಗಳೂರು – ಹೊಸಪೇಟೆ – ಕೆಎಸ್ಆರ್ ಬೆಂಗಳೂರು (56519/56520) ದೈನಂದಿನ ಪ್ಯಾಸೆಂಜರ್ ರೈಲಿಗೆ ಹೊಳಲ್ಕೆರೆ ಮತ್ತು ಅಮೃತಾಪುರ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ಒಂದು ನಿಮಿಷದ ನಿಲುಗಡೆ ಕಲ್ಪಿಸಲು ನಿರ್ಧರಿಸಿದೆ. ಮುಂದಿನ ಮೂರು ತಿಂಗಳವರೆಗೆ ಅಂದರೆ ಏಪ್ರಿಲ್ 18ರಿಂದ ಜುಲೈ 17 ರವರೆಗೆ ಈ ಸೌಲಭ್ಯ ಇರಲಿದೆ.

ಬೆಂಗಳೂರಿಂದ ಹೊರಡುವ ದೈನಂದಿನ ಪ್ಯಾಸೆಂಜರ್ ರೈಲು (56519) ಹೊಳಲ್ಕೆರೆಗೆ ಬೆಳಗ್ಗೆ 9.57ಕ್ಕೆ ಆಗಮಿಸಿ 9.58ಕ್ಕೆ ನಿರ್ಗಮಿಸಲಿದೆ. ಬಳಿಕ ಅಮೃತಾಪುರಕ್ಕೆ ಬೆಳಗ್ಗೆ 10.30ಕ್ಕೆ ಆಗಮಿಸಿ 10.31ಕ್ಕೆ ನಿರ್ಗಮಿಸಲಿದೆ. ಹಿಂತಿರುಗುವ ಮಾರ್ಗದ ರೈಲು (56520) ಅಮೃತಾಪುರಕ್ಕೆ ಸಂಜೆ 4.45ಕ್ಕೆ ಆಗಮಿಸಿ 4.46ಕ್ಕೆ ನಿರ್ಗಮಿಸಲಿದೆ. ಹೊಳಲ್ಕೆರೆಗೆ ಸಂಜೆ 5.22ಕ್ಕೆ ಆಗಮಿಸಿ 5.23ಕ್ಕೆ ನಿರ್ಗಮಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

Share this article