ದೇಶದ್ರೋಹಿ ಕೃತ್ಯ ನಿಗ್ರಹಕ್ಕೆ ಮೋದಿ ಸರ್ಕಾರವೇ ಬೇಕು : ಪ್ರಹ್ಲಾದ ಜೋಶಿ

KannadaprabhaNewsNetwork |  
Published : Apr 13, 2024, 01:15 AM ISTUpdated : Apr 13, 2024, 11:31 AM IST
ಉದ್ಘಾಟನೆ | Kannada Prabha

ಸಾರಾಂಶ

ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ಎಲ್ಲ ದೇಶದ್ರೋಹಿ ಕೃತ್ಯಗಳನ್ನು ನಿಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ ಅವರೇ ಸರಿ.

ಹುಬ್ಬಳ್ಳಿ:  ಭಾರತದಲ್ಲಿ ದೇಶದ್ರೋಹಿ ಕೃತ್ಯಗಳನ್ನು ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಅತ್ಯಗತ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಪಾದಿಸಿದರು.

ನಗರದಲ್ಲಿ ಶುಕ್ರವಾರ ರಜಪೂತ ಮತ್ತು ಮರಾಠ ರಜಕ್ ಸಮಾಜದ ಪ್ರಮುಖರೊಂದಿಗೆ ನಡೆಸಿದ ಸಭೆ ಉದ್ದೇಶಿಸಿ ಮಾತನಾಡಿದರು.

ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ಎಲ್ಲ ದೇಶದ್ರೋಹಿ ಕೃತ್ಯಗಳನ್ನು ನಿಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ ಅವರೇ ಸರಿ ಎಂದು ಹೇಳಿದರು.

ದೇಶದಲ್ಲಿ ಎಲ್ಲೇ ಆಗಲಿ ಉಗ್ರ ಚಟುವಟಿಕೆಗಳನ್ನು ಮೋದಿ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಕಾನೂನಾತ್ಮಕ ಕ್ರಮಕೈಗೊಂಡು ಎದುರಿಸಿದೆ. ಅದರ ಪರಿಣಾಮ ದೇಶದಲ್ಲಿ ಭಯೋತ್ಪಾದನೆ ಕ್ಷೀಣಿಸಿ ಶಾಂತಿ ನೆಲೆಸಿದೆ ಎಂದರು.ಮೋದಿ ಅವರ ಖಡಕ್ ನಿಲುವುಗಳಿಂದಾಗಿ ಇಂದು ದೇಶ ಸುರಕ್ಷಿತವಾಗಿದೆ. ಜನರೂ ಶಾಂತಿಯಿಂದ ಜೀವಿಸುವಂತಾಗಿದೆ. ಸದಾ ಬಡವರ ಏಳಿಗೆಗಾಗಿ ಶ್ರಮಿಸುತ್ತಿರುವ ಮೋದಿ ಅವರ ಕೈ ಬಲಪಡಿಸಲು ಈ ಬಾರಿಯೂ ಸರ್ವ ಸಮಾಜದವರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ನೆರೆದಿದ್ದ ರಜಪೂತ, ರಜಕ್ ಮರಾಠ ಸಮಾಜದವರು ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಪ್ರಮುಖರಾದ ವಿದ್ಯಾ ಜಾವುರ, ಸುಭಾಸ ಸಿಂಗ ಜಮಾದಾರ, ವಿಷ್ಣು ಕೆಲಗೇರಿ, ಸತೀಶ್ ಸಂಕ್ಪಾಲ್, ಸಂಜಯ ಕಪಟ್ಕರ, ಮಂಜುನಾಥ ಕಾಟ್ಕರ್, ಶೋಭಾ ಕಿಲ್ಲೇದಾರ್, ನಾರಾಯಣಸಿಂಗ್, ಅಜಿತ್ ಸಿಂಗ್ ರಜಪೂತ್ ಹಾಗೂ ಸಮಾಜದ ಮುಖಂಡರು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ