ಹುಬ್ಬಳ್ಳಿ: ಮುಂಬರುವ ದಿನಗಳಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ವಿಶ್ವದ ಹಿರಿಯಣ್ಣನಾಗಿ ಜಗತ್ತನ್ನೇ ಮುನ್ನಡೆಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸವಿತಾ ಸಮಾಜ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ವಿಶ್ವದಲ್ಲೇ ಭಾರತ ನಂಬರ್ ಒನ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಳೆದ ಒಂದು ದಶಕದಲ್ಲಿ ಭಾರತ ಅಭೂತಪೂರ್ವ ಅಭಿವೃದ್ಧಿ ಸಾಧಿಸಿದೆ. ಮೋದಿ ಅವರ ಸಮರ್ಥ ನಾಯಕತ್ವ ಭಾರತದ ಅಭಿವೃದ್ಧಿಯ ಪಥವನ್ನೇ ಬದಲಿಸಿತು ಎಂದು ಹೇಳಿದರು.
ಭಾರತದ ಅಭಿವೃದ್ಧಿಯ ನಾಗಲೋಟ ಹೀಗೇ ಸಾಗಬೇಕು. ಈ ಮಹತ್ಕಾರ್ಯಕ್ಕಾಗಿ ಮತ್ತೆ ಮೋದಿ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಬೇಕಿದ್ದು, ಈ ಚುನಾವಣೆಯಲ್ಲಿ ಎಲ್ಲರೂ ಬಿಜೆಪಿ ಗೆಲುವಿಗೆ ಶ್ರಮಿಸಬೇಕಿದೆ. ಭಾರತದ ಭವ್ಯ ಭವಿಷ್ಯಕ್ಕಾಗಿ ಈ ಸಲವೂ ತಮಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.ಪಕ್ಷದ ಪ್ರಮುಖರಾದ ಸಂಜಯ್ ಕಪಟ್ಕರ್, ಕೃಷ್ಣ ಉಪ್ಪೇರ್, ರಘುನಾಥ ನಾರಾಯಣದಾಸ, ಮೋಹನ ಗೋಲಿ, ಬುಚ್ಚಣ್ಣ ಮುಷ್ಟಿಪಲ್ಲೆ, ಮಂಜು ಬಿಜವಾಡ, ಕೃಷ್ಣ ಗಂಡಗಾಳಕರ, ಮಾಸಣ್ಣ ಅಮರಜಿಂತಾ ಹಾಗೂ ಸವಿತಾ ಸಮಾಜದ ಪ್ರಮುಖರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಹತಾಶೆಗೊಂಡ ಕಾಂಗ್ರೆಸ್‌ನಿಂದ ಕೀಳುಮಟ್ಟದ ರಾಜಕಾರಣಕಾಂಗ್ರೆಸ್ ಹತಾಶೆಗೊಂಡಿದೆ. ಎಲ್ಲ ಸಮೀಕ್ಷೆಗಳಲ್ಲಿ ಹಿನ್ನಡೆಯಾಗಿದೆ. ಹೀಗಾಗಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಅತ್ಯಂತ ಹಿರಿಯ ಜೀವಿ. ಅವರು ಕರ್ನಾಟಕದಿಂದ ಏಕೈಕ ಪ್ರಧಾನಿಯಾಗಿದ್ದವರು. ಅವರ ಬಗ್ಗೆ ತುಚ್ಛ ಭಾಷೆ ಬಳಸುತ್ತಿರುವುದು ಖಂಡನೀಯ ಎಂದರು.ಎಚ್.ಡಿ. ಕುಮಾರಸ್ವಾಮಿ 1000 ಎಕರೆ ಆಸ್ತಿ ಮಾಡಿದರೆ, ಅವರ ಜತೆ ಕಾಂಗ್ರೆಸ್‌ನವರು ಯಾಕೆ ಸರ್ಕಾರ ಮಾಡಿದ್ದರು? ಕುಮಾರಸ್ವಾಮಿ ತಮ್ಮ ಮನೆಯಲ್ಲಿ ಕುಳಿತಿದ್ದರು. ಅವರಿದ್ದಲ್ಲಿಗೆ ಹೋಗಿ ಕಾಂಗ್ರೆಸ್‌ನವರು ಯಾಕೆ ಸರ್ಕಾರ ಮಾಡಬೇಕಿತ್ತು ಎಂದು ಪ್ರಶ್ನೆ ಮಾಡಿದರು.
ಇದೇ ವೇಳೆ ಡಿ.ಕೆ. ಶಿವಕುಮಾರ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ, ಕರ್ನಾಟಕದ ಕಾಂಗ್ರೆಸ್‌ನಲ್ಲಿ ಬಹಳ ಗೊಂದಲ ಇದೆ. ಮುಂದೆ ಯಾವ ಹಂತಕ್ಕಾದರೂ ಹೋಗಬಹುದು. ಗೊಂದಲದ ಕಾರಣದಿಂದ ಆಡಳಿತ ಯಂತ್ರ ಕುಸಿದಿದೆ. ಮುಂದೆ ಏನಾದರೂ ಆಗಬಹುದು ಎಂಬ ಸಾಧ್ಯತೆಗಳನ್ನು ಡಿಕೆಶಿ ಕೊಡುತ್ತಿದ್ದಾರೆ ಎಂದು ತಿಳಿಸಿದರು.ನಿರೀಕ್ಷೆ ಮೀರಿ ಜನ:ನಾಮಪತ್ರ ಸಲ್ಲಿಕೆಗೆ ನಾನಾ ಕಡೆಗಳಲ್ಲಿ ಕಾರ್ಯಕರ್ತರು ಬರುತ್ತಿದ್ದರು. ಆದರೆ, ಕೆಲವರು ಕಾಂಗ್ರೆಸ್‌ನವರ ಮಾತು ಕೇಳಿ ಕೆಲವು ಕಡೆ ನಮ್ಮವರ ವಾಹನ ತಡೆದಿದ್ದಾರೆ. ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ವಾಹನಗಳನ್ನು ಬಿಡಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.ಲೀಡ್ ಬರದೆ ಹೋದರೆ ಕುರ್ಚಿ ಬಿಡಬೇಕಾಗುತ್ತದೆ ಎಂಬ ದರ್ಶನಾಪುರ ಹೇಳಿಕೆ ವಿಚಾರವಾಗಿ ಮಾತನಾಡಿ, ಇದು ಜನಾಭಿಪ್ರಾಯ. ಕುರ್ಚಿ ಸಲುವಾಗಿ ವೋಟ್ ಕೊಡಬೇಕೋ? ಜನಹಿತಕ್ಕಾಗಿ ವೋಟ್ ಕೊಡಬೇಕೋ? ಇದನ್ನು ಕಾಂಗ್ರೆಸ್ ಮೊದಲು ಹೇಳಬೇಕು. 10 ವರ್ಷಗಳಲ್ಲಿ ಭ್ರಷ್ಟಾಚಾರ ಪರಮಾವಧಿ ತಲುಪಿತ್ತು ಎಂದು ಹರಿಹಾಯ್ದರು.