ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಬಿಜೆಪಿ ವಿಧಾನಸಭಾ ಮತಕ್ಷೇತ್ರ ವತಿಯಿಂದ ಪ್ರಧಾನಿ ನರೇಂದ ಮೋದಿ ಜನ್ಮದಿನದ ನಿಮಿತ್ತ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಯಿ ಹೆಸರಿನಲ್ಲಿ ಸಸಿ ನಡೆಸುವುದು, ಬಿಜೆಪಿ ಮಹಿಳಾ ಮೋರ್ಚಾದಿಂದ ಮಂಡಲ ಕಾರ್ಯಾಲಯದ ಆವರಣದಲ್ಲಿ ಮುಖಂಡರೊಂದಿಗೆ ಮತ್ತು ಕಾರ್ಯಕರ್ತರೊಂದಿಗೆ ಸಸಿ ನೆಡಲಾಯಿತು. ಒಬಿಸಿ ಮೋರ್ಚಾದಿಂದ ನಗರದ ಸರ್ಕಾರಿ ಆಸ್ಪತ್ರೆಯಲ್ಲಿರುವ ಬಾಣಂತಿಯರಿಗೆ ಹಾಗೂ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಮಂಡಲ, ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಇದೇ ವೇಳೆ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಪ್ರಧಾನ ಕಾರ್ಯದರ್ಶಿ ಉಮೇಶ ಹಂಚಿನಾಳ, ಶ್ರೀಧರ ನಾಗರಬಟ್ಟ, ಜಿಲ್ಲಾ ಉಪಾಧ್ಯಕ್ಷ ಭಾಗೀರಥಿ ಪಾಟೀಲ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಕೇಂದ್ರ ಸರ್ಕಾರದ ಆಯಿಲ್ ಇಂಡಸ್ಟ್ರೀಜ್ ನಿರ್ದೇಶಕ ರಾಜು ರೇವಣಕರ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಶಶಿ ಗುತ್ತಣ್ಣವರ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಉಪಾಧ್ಯಕ್ಷೆ ಶೋಬಾ ರಾವ್, ಸಭಾಪತಿ ಯಲ್ಲಪ್ಪ ನಾರಾಯಣಿ, ಮುಖಂಡರಾದ ಡಾ.ಎಂ.ಎಸ್.ದಡ್ಡೆನ್ನವರ, ಗುಂಡುರಾವ್ ಶಿಂದೆ, ರಾಜು ಶಿಂತ್ರೆ, ರಾಮಣ್ಣ ಜುಮನಾಳ, ಸಂಗಣ್ಣ ಶಿರೂರ, ಮಲ್ಲಿಕಾರ್ಜುನ ಮಠ, ನಗರಸಭೆ ಸದಸ್ಯರಾದ ಸರಸ್ವತಿ ಕುರಬರ, ಶೀವಲಿಲಾ ಪಟ್ಟಣಶೆಟ್ಟಿ, ಶಶಿಕಲಾ ಮಜ್ಜಗಿ, ರತ್ನಾ ಕೆರೂರ, ಮಹಾಶಕ್ತಿ ಕೇಂದ್ರ ಸಂಚಾಲಕ ಸುರೇಶ ಮಜ್ಜಗಿ, ಸಹ ಸಂಚಾಲಕ ಮಾನೇಶ ಅಂಬಿಗೇರ, ಮೋರ್ಚಾ ಪದಾಧಿಕಾರಿಗಳು ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಇದ್ದರು.