ಗದಗ: ಪ್ರಧಾನಿ ಮೋದಿ ಅವರ ದಿಟ್ಟ ನಾಯಕತ್ವಕ್ಕೆ ಯಾವತ್ತೂ ಜನಮತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪುರ ಮಾತನಾಡಿ, 2047ರ ಹೊತ್ತಿಗೆ ವಿಕಸಿತ ಭಾರತವಾಗುವ ಗುರಿಯನ್ನು ನಾವು ಹೊಂದಿದ್ದೇವೆ. ಈಗಾಗಲೇ 3ನೇ ಅತಿದೊಡ್ಡ ಆರ್ಥಿಕತೆಯಾಗಿ ದಾಪುಗಾಲು ಇಟ್ಟಾಗಿದೆ. ಅತಿದೊಡ್ಡ ಪ್ರಜಾಪ್ರಭುತ್ವ ದೇಶವಷ್ಟೆ ಅಲ್ಲದೇ ಅತಿದೊಡ್ಡ ಉತ್ಪಾದಕ ದೇಶವಾಗುವ, ಜಾಗತಿಕ ಪೂರೈಕೆ ಜಾಲದಲ್ಲಿ ನಿರ್ಣಾಯಕ ಕೊಂಡಿಯಾಗುವ, ರಕ್ಷಣಾ ವಲಯಲದಲ್ಲಿ ಸ್ವಾವಲಂಬನೆ ಸಾಧಿಸುವ, ಬಡತನದ ರೇಖೆಯಿಂದ ಪುಟಿಯುವ ಗುರಿ ಎದುರಾಗಿದೆ ಎಂದರು.
ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎಸ್. ಕರೀಗೌಡ್ರ, ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ ಮಾತನಾಡಿದರು. ಪ್ರಮುಖರಾದ ಜಗನ್ನಾಥಸಾ ಭಾಂಡಗೆ, ಬಿ.ಎಚ್. ಲದ್ವಾ, ಎಂ.ಎಂ. ಹಿರೇಮಠ, ಸಿದ್ದು ಪಲ್ಲೇದ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಚಂದ್ರು ತಡಸದ, ನಿರ್ಮಲಾ ಕೊಳ್ಳಿ, ಮಂಜುನಾಥ ಮುಳಗುಂದ, ಮುತ್ತು ಮುಶಿಗೇರಿ, ಶಶಿಧರ ದಿಂಡೂರ, ವಿನಾಯಕ ಮಾನ್ವಿ, ನಾಗರಾಜ ತಳವಾರ, ಅಮರನಾಥ ಗಡಗಿ, ವಿದ್ಯಾವತಿ ಗಡಗಿ, ಲಕ್ಷ್ಮೀ ಕಾಕಿ, ವಿಜಯಲಕ್ಷ್ಮೀ ಮಾನ್ವಿ, ಮಂಜುನಾಥ ಶಾಂತಗೇರಿ, ರಾಚಯ್ಯ ಹೊಸಮಠ, ದೇವೇಂದ್ರಪ್ಪ ಹೂಗಾರ, ಗಂಗಾಧ ಮೇಲಗಿರಿ, ಲಕ್ಷ್ಮಣ ದೊಡ್ಮನಿ, ಜಯಶ್ರೀ ಉಗಲಾಟದ, ಶಾರದಾ ಸಜ್ಜನ, ವಂದನಾ ವರ್ಣೇಕರ್, ಕಮಲಾಕ್ಷೀ ಗೊಂದಿ, ಪಾರ್ವತಿ ಪಟ್ಟಣಶೆಟ್ಟಿ, ಸ್ವಾತಿ ಅಕ್ಕಿ, ರೇಖಾ ಬಂಗಾರಶೆಟ್ಟರ, ಯೋಗೇಶ್ವರಿ ಭಾವಿಕಟ್ಟಿ, ಕವಿತಾ ಬಂಗಾರಿ, ಪ್ರೀತಿ ಶಿವಪ್ಪನಮಠ, ಅಕ್ಕಮ್ಮ ವಸ್ತ್ರದ, ರಮೇಶ ಸಜ್ಜಗಾರ, ವಿಶ್ವನಾಥ ಹಳ್ಳಿಕೇರಿ ಇದ್ದರು. ಶಂಕರ ಕಾಕಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ ಚಿತ್ತರಗಿ ವಂದಿಸಿದರು.