ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಎನ್.ಡಿ.ಎ.ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸೋಣ. ಹೊಸದಾಗಿ ಅಸಂಘಟಿತ ಕಾರ್ಮಿಕರಿಗೆ ಕೇವಲ 20 ರು.ಮಾಸಿಕ ಪಡೆದು 60 ವರ್ಷದ ನಂತರ 2500-5000 ರು.ವರೆಗೆ ಮಾಸಿಕ ಪೆನ್ಷನ್ ಯೋಜನೆ ಜಾರಿಗೊಳಿಸಿದ್ದಾರೆ. ಬರಗಾಲದ ಈ ದಿನದಲ್ಲಿ ಜಿಲ್ಲೆಯ ಹಾಗೂ ರಾಜ್ಯದ ಜನತೆ ಬಿಜೆಪಿ ಸರ್ಕಾರವನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದರು.
ಇಡೀ ವಿಶ್ವದಲ್ಲೇ ಬೇರೆ ಬೇರೆ ಕಾರಣಗಳಿಗೆ ಆರ್ಥಿಕ ತಲ್ಲಣವಾಗಿದ್ದರೂ ದೇಶದ ಜಿಡಿಪಿಯಲ್ಲಿ ಏರಿಕೆಯಾಗಿದ್ದು, 2047ರ ಹೊತ್ತಿಗೆ ಸ್ವಾತಂತ್ರ್ಯ ಸಿಕ್ಕಿ ನೂರು ವರ್ಷ ತುಂಬಲಿದ್ದು, ಮೋದಿಯವರ ವಿಕಸಿತ ಭಾರತದ ಕನಸನ್ನು ನನಸು ಮಾಡಬೇಕು. ವಿವಿಲ್ ಡು ಇಟ್ ಘೋಷವಾಕ್ಯದೊಂದಿಗೆ ಸಂಕಲ್ಪ ಮಾಡೋಣ. ಕಾರ್ಯಕರ್ತರು ಮುಂಬರುವ ಸಣ್ಣ ಸಣ್ಣ ಚುನಾವಣೆಗಳನ್ನೂ ಕಡೆಗಣಿಸದೆ ಸಂಪೂರ್ಣವಾಗಿ ಪ್ರಧಾನಿ ಮೋದಿಯವರ ಯೋಜನೆಗಳನ್ನು ಪ್ರತಿ ಮನೆಮನೆಗೂ ತಲುಪಿಸುವ ಸಂಕಲ್ಪ ಮಾಡೋಣ ಎಂದರು.ಸೀನಪ್ಪ ಶೆಟ್ಟಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಸೇವಾ ಜ್ಯೋತಿ ಯಾತ್ರೆ ಮುಂದುವರಿಯಿತು. ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಆರ್.ಕೆ.ಸಿದ್ರಾಮಣ್ಣ, ಕೆ.ಬಿ.ಅಶೋಕ ನಾಯ್ಕ, ಕೆ.ಜಿ.ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಟಿ.ಡಿ.ಮೇಘರಾಜ್, ರಾಜು ತಲ್ಲೂರು, ಮಾಲತೇಶ್, ಹರಿಕೃಷ್ಣ, ಜ್ಞಾನೇಶ್ವರ್ ಸೇರಿದಂತೆ ಜಿಲ್ಲೆಯ ವಿವಿಧ ಮಂಡಲಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.