ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಎಫ್‌ಸ್ಟೀನ್ ಸಂಸ್ಥೆ ಬಹಿರಂಗಪಡಿಸಿರುವ ದಾಖಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ದೊರೆ ಭೇಟಿ ಸಂದರ್ಭದಲ್ಲಿ 2017ರ ಜು.9 ರಂದು ತಮಗೆ ಬೆಂಬಲ ನೀಡುವಂತೆ ವಿದೇಶಿ ಪ್ರಧಾನಿಗಳೆದುರು ನೃತ್ಯ ಮಾಡುವ ಮೂಲಕ ದೇಶದ ಮಾನ ಹರಾಜಿಗಿಟ್ಟಿರುವುದು ಬಹಿರಂಗವಾಗಿದೆ. ಇದು ವಿಶ್ವದಾದ್ಯಂತ ಚರ್ಚೆಯಾಗಿ ದೇಶದ ಮಾನ-ಮರ್ಯಾದೆ ಹೋಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅಮೆರಿಕದ ಕೃಷಿ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಯಾವುದೇ ಶುಲ್ಕವಿಲ್ಲದೆ ಶೇ.0 ಸುಂಕದಲ್ಲಿ ನೇರವಾಗಿ ಭಾರತದ ಮಾರುಕಟ್ಟೆಗೆ ಅಮೆರಿಕದ ಉತ್ಪನ್ನಗಳು ಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ಮೊದಲೇ ಸಾಲದ ಸುಳಿಯಲ್ಲಿ ಸಿಕ್ಕು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಭಾರತದ ಬಡ ರೈತರು ಅಮೆರಿಕದಂತಹ ಶ್ರೀಮಂತ ಕಾರ್ಪೋರೇಟ್ ಕೃಷಿ ಉದ್ಯಮಕ್ಕೆ ನಮ್ಮ ದೇಶದ ಬಡ ರೈತರು ಪೈಪೋಟಿ ನೀಡಲು ಸಾಧ್ಯವಿಲ್ಲದಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಈ ನಿರ್ಧಾರ ದೇಶದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಕೊಂಡೊಯ್ಯಲಿದೆ ಎಂದು ಆರೋಪಿಸಿದರು.ಮೋದಿಯವರು ಸುಳ್ಳು ಹೇಳಿಕೊಂಡೇ ಪ್ರಧಾನಿ ಹುದ್ದೆಗೇರಿದವರು. ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲಾ ಒಂದು ಸುಳ್ಳು ಹೇಳಿಕೊಂಡೇ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಮೇಕ್ ಇನ್ ಇಂಡಿಯಾ ಎಂದು ಹೇಳಿಕೊಂಡು ಬರುತ್ತಿರುವ ಪ್ರಧಾನಿ ಮೇಕ್ ಇನ್ ಇಂಡಿಯಾಕ್ಕೆ ಅವಕಾಶವನ್ನೇ ಕೊಟ್ಟಿಲ್ಲ. ಇದೀಗ ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಫ್ಯಾಕ್ಟ್ ಶೃಂಗಸಭೆಯಲ್ಲಿ ವಿದೇಶಿ ಅವಿಷ್ಕಾರವನ್ನು ಸ್ವದೇಶಿ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ಓರಿಯನ್ ಎಂಬ ಹೆಸರಿನ ರೋಬೋಟ್ ನಾಯಿಯನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಹೇಳಲಾಗಿದೆ. ಆದರೆ ಇದರ ಮೂಲ ಚೀನಾದ ಆವಿಷ್ಕಾರ ಎಂದು ತಜ್ಞರು ಪತ್ತೆಹಚ್ಚಿದ್ದಾರೆ. ಹೀಗೆ ಒಂದಲ್ಲಾ ಒಂದು ಸುಳ್ಳು ಹೇಳುವ ಮೂಲಕ ದೇಶದ ಮಾನವನ್ನು ಹರಾಜಿಗೆ ಹಾಕುತ್ತಿರುವ ಉತ್ತರ ಪ್ರದೇಶದ ಗಲ್ಲೋಟಿಯಾ ವಿವಿಗೂ ಪ್ರಧಾನಿಯವರಿಗೂ ಗಾಢ ನಂಟಿದೆ ಎನ್ನುವುದು ಜಗಜ್ಜಾಹೀರವಾಗಿದೆ ಎಂದು ಟೀಕಿಸಿದರು.
ಕೊರೋನಾ ಸಂದರ್ಭದಲ್ಲಿ ತಟ್ಟೆ, ಲೋಟ, ಗಂಟೆ ಬಡಿಯುವ ಮೂಲಕ ಕೊರೋನಾ ವೈರಸ್ ನಿಯಂತ್ರಿಸಬಹುದು ಎಂದು ಹೇಳುವ ಮೂಲಕ ಪ್ರಧಾನಿ ನಗೆಪಾಟಲಿಗೆ ಗುರಿಯಾಗಿದ್ದರು. ನರೇಂದ್ರ ಮೋದಿ ತಾವು ಮಾತ್ರವಲ್ಲ, ತಮ್ಮ ಬಳಗವೇ ಸುಳ್ಳು ಎಂದು ಸಾಬೀತುಪಡಿಸಿ ದೇಶದ ಮಾನವನ್ನು ವಿಶ್ವಮಟ್ಟದಲ್ಲಿ ಹರಾಜಿಗಿಟ್ಟಿದ್ದಾರೆ ಎಂದು ಆರೋಪಿಸಿದರು.ಆದ್ದರಿಂದ ಕೂಡಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಪ್ರಧಾನಿ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ರಾಜ್ಯ ಜವಳಿ ನಿಗಮದ ಅಧ್ಯಕ್ಷ ಕೆ.ಚೇತನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಹರ್ಪಿತ್‌ಗೌಡ, ನಗರಾಧ್ಯಕ್ಷ ಜೆ.ಚರಣ್, ಪ್ರಮುಖರಾದ ಎನ್. ರಮೇಶ್, ಯು. ಶಿವಾನಂದ, ಎಂ. ರಮೇಶ್ ಹೆಗಡೆ, ಮಧುಸೂದನ್, ಗಿರೀಶ್, ಮೊಹಮ್ಮದ್ ಗೌಸ್, ಪ್ರವೀಣ್, ಅನಿಲ್ ಪಾಟೀಲ್, ಅಶೋಕ್, ಬಾಬು, ಲಿಂಗರಾಜು, ನಯಾಜ್, ಮನೋಜ್ ಇತರರು ಭಾಗವಹಿಸಿದ್ದರು.