ಮಾದಿಗ ಸಮುದಾಯದ ಮುಂದಿನ ತಲೆಮಾರು ಅಭಿವೃದ್ಧಿಗೆ ಮೋದಿ ಬೆಂಬಲಿಸಿ: ಮಂದಕೃಷ್ಣ ಮಾದಿಗ

KannadaprabhaNewsNetwork |  
Published : May 04, 2024, 12:36 AM IST
03ಕೆಪಿಆರ್‌ಸಿಆರ್‌ 03:  | Kannada Prabha

ಸಾರಾಂಶ

ರಾಯಚೂರಿನ ಲಕ್ಷ್ಮೀದೇವಿ ಕಲ್ಯಾಣ ಮಂಟಪದಲ್ಲಿ ನಡೆದ ವಿಜಯಯಾತ್ರೆಯಲ್ಲಿ ಎಂಆರ್‌ಎಚ್‌ಎಸ್‌ನ ಮುಖಂಡ ಮಂದಕೃಷ್ಣ ಮಾದಿಗ ಅವರು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ರಾಯಚೂರು

ಪರಿಶಿಷ್ಟ ಜಾತಿಯ ಜನರ ಮುಂದಿನ ತಲೆಮಾರಿನ ಯುವಜನತೆ ಶಿಕ್ಷಣವಂತರಾಗಲು, ಉದ್ಯೋಗ ಪಡೆಯುವಂತಾಗಲು ಮೋದಿಯವರನ್ನು ಬೆಂಬಲಿಸಬೇಕಾಗಿದೆ. ಹೀಗಾಗಿ ರಾಯಚೂರಿನ ಮಾದಿಗ ಸಮುದಾಯದ ಜನತೆ ರಾಜಾ ಅಮರೇಶ್ವರ ನಾಯಕರನ್ನು ಗೆಲ್ಲಿಸಿ ಮೂರನೇ ಬಾರಿಗೆ ಪ್ರಧಾನಿ ಮಾಡಲು ಬೆಂಬಲಿಸಬೇಕಾಗಿದೆ ಎಂದು ಎಂಆರ್‌ಎಚ್‌ಎಸ್‌ ಮುಖಂಡ ಮಂದಕೃಷ್ಣ ಮಾದಿಗ ಹೇಳಿದರು.

ಸ್ಥಳೀಯ ಲಕ್ಷ್ಮೀದೇವಿ ಕಲ್ಯಾಣ ಮಂಟಪದಲ್ಲಿ ಮೈತ್ರಿ ಪಕ್ಷದಿಂದ ಹಮ್ಮಿಕೊಂಡಿದ್ದ ವಿಜಯಯಾತ್ರೆಯಲ್ಲಿ ಭಾಗವಹಿಸಿ ಶುಕ್ರವಾರ ಮಾತನಾಡಿದವರು, ಕಳೆದ ಮೂರು ದಶಕದಿಂದ ಪರಿಶಿಷ್ಟ ಜಾತಿ ಸಮುದಾಯಗಳ ಮೀಸಲಾತಿಯಲ್ಲಿ ವರ್ಗೀಕರಣಕ್ಕೆ ಆಗ್ರಹಿಸಿ, ಮಾದಿಗ ಮೀಸಲಾತಿ ಪೋರಾಟ ಸಮಿತಿ ರಚಿಸಿಕೊಂಡು ಹೋರಾಟ ಮಾಡಿರುವ ನಾನು, ಯಾವುದೇ ಪಕ್ಷವನ್ನು ಬೆಂಬಲಿಸಿದವನ್ನಲ್ಲ ಕೇವಲ ಮೋದಿಜಿಯವರು ಸಮುದಾಯಕ್ಕಾಗಿ ಮಾಡಿದ ಕಾರ್ಯಗಳನ್ನು ಬೆಂಬಲಿಸಿ ಎಲ್ಲೆಡೆ ಸಂಚರಿಸಿ ಅವರಪರವಾಗಿ ಪ್ರಚಾರ ಮಾಡುತ್ತಿರುವುದಾಗಿ ತಿಳಿಸಿದರು.

ಪರಿಶಿಷ್ಟ ಜಾತಿ ವರ್ಗೀಕರಣ ಮಾಡುವ ನಿಟ್ಟಿನಲ್ಲಿ ಈ ಹಿಂದೆ ಪ್ರಧಾನಿಗಳಾದ ಮನಮೋಹನ್ ಸಿಂಗ್, ಕಾಂಗ್ರೆಸ್ ಮುಖ್ಯಸ್ಥರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ಮನವಿ ಪತ್ರ ನೀಡಿ ಅಲೆದಾಡಿದೆ. ಆದರೆ ಅವರಿಗೆ ಸಮುದಾಯದ ಹಿತಾಸಕ್ತಿ ಮುಖ್ಯವಾಗಿರಲಿಲ್ಲ ಹೀಗಾಗಿ ಮೋದಿಜಿಯವರ ಕಳೆದ ಹತ್ತು ವರ್ಷದ ಆಡಳಿತದಲ್ಲಿ ದಲಿತ ಸಮುದಾಯದ ಅಭಿವೃದ್ಧಿಗಾಗಿ ಹಲವು ಕ್ರಮ ಕೈಗೊಂಡಿದ್ದಾರೆ ಎಂದರು.

ಹೈದ್ರಾಬಾದ್ ನಲ್ಲಿ ನಡೆದ ಮಾದಿಗರ ಸಭೆಯಲ್ಲಿ ಮೋದಿಜಿಯವರು ಭಾಗವಹಿಸಿ, ಮಾದಿಗರ ಸಬಲೀಕರಣಕ್ಕಾಗಿ ಸಾಧ್ಯವಾದ ಎಲ್ಲಾ ಮಾರ್ಗಗಳನ್ನು ಅಳವಡಿಸುವ ಸಮಿತಿ ರಚಿಸಿ ಸಮುದಾಯದ ಭವಿಷ್ಯಕ್ಕಾಗಿ ಹಲವು ಕಾರ್ಯ ಕೈಗೊಂಡಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ರಾಜ್ಯದಲ್ಲಿ ಮಾದಿಗ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ರಾಜ್ಯ ಸರ್ಕಾರದ ಪ್ರಮುಖ ಖಾತೆಗಳನ್ನು ಖರ್ಗೆ ಮಗನಿಗೆ ಅಂದರೆ ಮಾಲಾ ಸಮುದಾಯಕ್ಕೆ ನೀಡಿ, ಮುನಿಯಪ್ಪ ಆರ್.ಬಿ.ತಿಮ್ಮಾಪುರೆಯವರಿಗೆ ಆಹಾರ ಹಾಗೂ ಅಬಕಾರಿ ಖಾತೆ ನೀಡಿ ಸಮುದಾಯದಕ್ಕೆ ದ್ರೋಹವೆಸಗಿದ್ದಾರೆ. ಅಲ್ಲದೇ ಟಿಕೆಟ್ ನೀಡುವಲ್ಲೂ ಕಾಂಗ್ರೆಸ್ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಸಮುದಾಯದ ಹಿತ ಕಾಪಾಡುವ ನಿಟ್ಟಿನಲ್ಲಿ ಭವಿಷ್ಯಕ್ಕಾಗಿ ಮೋದಿಜಿಯವರನ್ನು ಬೆಂಬಲಿಸಬೇಕು ಎಂದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ