ಸಾಮಾನ್ಯ ವ್ಯಕ್ತಿ ಕೂಡ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿಕೊಟ್ಟವರು ಮೋದಿ: ಸದಾನಂದ ಗೌಡ

KannadaprabhaNewsNetwork |  
Published : Apr 24, 2024, 02:17 AM ISTUpdated : Apr 24, 2024, 02:18 AM IST
63 | Kannada Prabha

ಸಾರಾಂಶ

ಸಮಾನ ಮನಸ್ಸಿಗರಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ನಮ್ಮ ಪ್ರಧಾನಮಂತ್ರಿ ಅವರು ಸೇರಿಕೊಂಡು ಮೈತ್ರಿಕೂಟವನ್ನು ರಚಿಸಿಕೊಳ್ಳಲು ನಿಶ್ಚಯ ಮಾಡಿದರು, 10 ವರ್ಷದ ಒಳ್ಳೆಯ ಕೆಲಸ ಮಾಡಿದ್ದಾರೆ ಅವರು ದೇವೇಗೌಡರ ಸಂಬಂಧ ಇದರಿಂದಾಗಿ ಒಂದು ಮಟ್ಟಕ್ಕೆ ಅದ್ಭುತವಾದ ಪರಿವರ್ತನೆ ದೇಶದಲ್ಲಿ ಆಗಬೇಕಾಗಿದೆ, ದಕ್ಷಿಣ ಕನ್ನಡದಿಂದ ಚಿಕ್ಕಬಳ್ಳಾಪುರದವರೆಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ, ಒಳ್ಳೆಯ ವಾತಾವರಣವಿದೆ.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ದೇಶದಲ್ಲಿ ಸಾಮಾನ್ಯ ವ್ಯಕ್ತಿ ಕೂಡ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿಕೊಟ್ಟವರು ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ, ಇವರನ್ನು ನಾವು ಗೌರವಯುತವಾಗಿ ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ಮಾಡೋಣ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ತಾಲೂಕಿನಲ್ಲಿ ಗ್ರಾಪಂ ಕೇಂದ್ರ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿ, ಈ ಬಾರಿ ಹೊಸ ರೀತಿಯ ಬದಲಾವಣೆಯ ಚುನಾವಣೆ, ಜೆಡಿಎಸ್, ಬಿಜೆಪಿ ಬೇಸುಗೆ ಮಾಡಿಕೊಂಡು ಮತಯಾಚನೆಗೆ ಬಂದಿದ್ದೇವೆ, ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಆಲೋಚನೆ ಮಾಡಿದ್ದಾರೆ, ಸಾಮಾನ್ಯ ವ್ಯಕ್ತಿ ಕೂಡ ಸ್ವಾಭಿಮಾನದಿಂದ ಬದುಕುವಂತಹ ವಾತಾವರಣವನ್ನು ದೇಶದಲ್ಲಿ ನಿರ್ಮಾಣ ಮಾಡಿದ್ದಾರೆ, ಕಾಂಗ್ರೆಸ್ ಪಕ್ಷವು ಮುಂದಕ್ಕೆ ಇರಬಾರದು ಆ ರೀತಿ ಮತ ಚಲಾವಣೆ ಆಗಬೇಕು ಎಂದರು.

ಸಮಾನ ಮನಸ್ಸಿಗರಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ನಮ್ಮ ಪ್ರಧಾನಮಂತ್ರಿ ಅವರು ಸೇರಿಕೊಂಡು ಮೈತ್ರಿಕೂಟವನ್ನು ರಚಿಸಿಕೊಳ್ಳಲು ನಿಶ್ಚಯ ಮಾಡಿದರು, 10 ವರ್ಷದ ಒಳ್ಳೆಯ ಕೆಲಸ ಮಾಡಿದ್ದಾರೆ ಅವರು ದೇವೇಗೌಡರ ಸಂಬಂಧ ಇದರಿಂದಾಗಿ ಒಂದು ಮಟ್ಟಕ್ಕೆ ಅದ್ಭುತವಾದ ಪರಿವರ್ತನೆ ದೇಶದಲ್ಲಿ ಆಗಬೇಕಾಗಿದೆ, ದಕ್ಷಿಣ ಕನ್ನಡದಿಂದ ಚಿಕ್ಕಬಳ್ಳಾಪುರದವರೆಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ, ಒಳ್ಳೆಯ ವಾತಾವರಣವಿದೆ, ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿರುವುದು ಬಲು ಒಳ್ಳೆಯ ಕೆಲಸವಾಗಿದೆ, ಕೊಳ್ಳೆ ಕೊಳ್ಳೆ ಹೊಡೆಯುವವರನ್ನು ಲೂಟಿ ಹೊಡೆಯುವರನ್ನು ಅಧಿಕಾರದಿಂದ ದೂರ ಇರಿಸಲು ಈ ಸಂಬಂಧವು ಏರ್ಪಾಡು ಮಾಡಿಕೊಡಿದ್ದು, ಇದು ತಾತ್ಕಾಲಿಕವಲ್ಲ ಭವಿಷ್ಯದಲ್ಲಿ ಶಾಶ್ವತವಾಗಿ ಉಳಿಯುವ ಸಂಬಂಧವಾಗಿದೆ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಕಣ್ಣೀರು ಹಾಕು ಪರಿಸ್ಥಿತಿ ಬಂದಿದೆ:

ಸಿದ್ದರಾಮಯ್ಯ ಅವರು ಕಣ್ಣಿರುವ ಹಾಕುವ ಪರಿಸ್ಥಿತಿ ಬಂದು ತಲುಪಿದ್ದಾರೆ. ನೀವು ನನಗೆ ವೋಟ್ ಹಾಕಿ, ಹಾಕದಿದ್ದರೆ ಮುಖ್ಯಮಂತ್ರಿ ಕುರ್ಚಿ ತಪ್ಪಿ ಹೋಗುತ್ತದೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ಇಂತಹ ದಣನೀಯ ಪರಿಸ್ಥಿತಿ ಸಿದ್ದರಾಮಯ್ಯರವರಿಗೆ ಬರಬಾರದಿತ್ತು ಎಂದು ಅವರು ಹೇಳಿದರು.

ಕಾಂಗ್ರೆಸ್ ಆಮಿಷಗಳಿಗೆ ಬಲಿಯಾಗಬೇಡಿ:

ಕಾಂಗ್ರೆಸ್ ಆಮಿಷಗಳಿಗೆ ಬಲಿಯಾಗಬೇಡಿ, ಈ ಬಾರಿ ದೇಶದ ಅದ್ಭುತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಶೀರ್ವಾದ ಮಾಡಬೇಕು, ತಾವೆಲ್ಲರೂ ಸೇರಿ ನರೇಂದ್ರ ಮೋದಿ ಅವರನ್ನು ಬಾರಿ ದೊಡ್ಡ ಅಂತರದ ಗೆಲುವನ್ನು ತಂದು ಕೊಡಬೇಕೆಂದು ಅವರ ನಡವಳಿಕೆಗಳ ಇವೆಲ್ಲ ಗಮನಿಸಿದ್ದೀರಿ ನಾನು ನಿಮ್ಮ ಸೇವಕ ಎಂದು ಹೇಳುತ್ತಾರೆ ಅವರಿಗೆ ನಿಮ್ಮ ಆಶೀರ್ವಾದ ಬೇಕು ಎಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಸುಂದರೇಗೌಡ, ಆರ್.ಟಿ. ಸತೀಶ್, ವಿದ್ಯಾಶಂಕರ್, ಗಾಯತ್ರಿ, ತಾಲೂಕು ಬಿಜೆಪಿ ಅಧ್ಯಕ್ಷ ರಾಜೇಂದ್ರ, ಸೋಮಶೇಖರ, ಸ್ವಾಮಿ, ಮಂಜು, ಗಣೇಶ, ರುದ್ರೇಶ, ಶಿವರಾಜು, ರಾಜು, ಸ್ವಾಮಿಗೌಡ, ವೆಂಕಟರಾಮು, ಶೋಭಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''