ಜೋಯಿಡಾ: ದೇಶ ಉನ್ನತಿಯತ್ತ ಸಾಗಬೇಕು ಎಂದರೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯಬೇಕು ಎಂದು ಉತ್ತರಕನ್ನಡ ಬಿಜೆಪಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ, ಅಖಂಡ ಭಾರತವನ್ನು ಉಳಿಸುವುದೇ ಬಿಜೆಪಿಯ ಮೊದಲನೇ ಉದ್ದೇಶ. ಇನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಚೊಂಬು ಕೊಡುವ ಕೆಲಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ, ಭಾರತ ವಿಶ್ವದಲ್ಲಿ ಪ್ರಖ್ಯಾತಿ ಪಡೆಯಲು ನರೇಂದ್ರ ಮೋದಿಯವರೇ ಕಾರಣ. ನಮ್ಮ ಧರ್ಮ ಉಳಿಯಬೇಕು ಎಂದರೆ ಮೋದಿಯವರನ್ನೇ ಮತ್ತೊಮ್ಮೆ ಆಯ್ಕೆ ಮಾಡೋಣ ಎಂದು ಮನವಿ ಮಾಡಿದರು.ಜೋಯಿಡಾ ಬಿಜೆಪಿ ಅಧ್ಯಕ್ಷ ಶಿವಾಜಿ ಗೋಸಾವಿ, ಜೆಡಿಎಸ್ ಅಧ್ಯಕ್ಷ ಅಜಿತ್ ಥೋರವಥ್, ಮುಖಂಡ ಅರುಣ ಕಾಂಬ್ರೇಕರ, ಉಮೇಶ್ ಭಾಗ್ವತ್, ಆರ್.ವಿ. ದಾನಗೇರಿ, ಗಣಪತಿ ಕರಂಜೇಕರ, ಸುಧಾಕರ ರೆಡ್ಡಿ, ಶೋಭಾ ಎಲ್ಲೆಕರ, ವಿಷ್ಣು ಬಿರಂಗತ್, ಚಂದ್ರಶೇಖರ ಸಾವರಕರ ಉಪಸ್ಥಿತರಿದ್ದರು.