ಹುಬ್ಬಳ್ಳಿ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದಿಂದ ನಗರದ ಮೂರುಸಾವೀರ ಮಠದಲ್ಲಿ ಶ್ರೀಗುರುಸಿದ್ದೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಸತತವಾಗಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರ ಪಟ್ಟಿಯಲ್ಲಿ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ತಮ್ಮ ಸಂಪೂರ್ಣ ಜೀವನವನ್ನು ದೇಶಸೇವೆಗೆ ಸಮರ್ಪಿಸಿಕೊಂಡು, ಕುಟುಂಬಕ್ಕಿಂತ ರಾಷ್ಟ್ರವನ್ನೇ ಮೊದಲ ಆದ್ಯತೆಯಾಗಿ ಇಟ್ಟು ಕಾರ್ಯನಿರ್ವಹಿಸುತ್ತಿರುವ ಕಾರಣ ಅವರು ರಾಜಕೀಯ ಸನ್ಯಾಸಿ ಎಂದರು. ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ ಮಾತನಾಡಿ, ಮೋದಿ ಪ್ರಧಾನಿಯಾಗಿ 12 ವರ್ಷ ಅಧಿಕಾರಾವಧಿ ಪೂರೈಸಿ, ನೆಹರು ಅವರ ದಾಖಲೆ ಹಿಂದಿಕ್ಕಿದರು. ಅತ್ಯಂತ ದೀರ್ಘಾವಧಿ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ನಾಯಕರೆನಿಸಿದ್ದಾರೆ ಎಂದು ಹೇಳಿದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ, ಮುಖಂಡರಾದ ಮಂಜುನಾಥ ಕಾಟಕರ, ನಾರಾಯಣ ಜರತಾರಘರ, ರಂಗಾ ಬದ್ದಿ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಸತೀಶ ಶೇಜವಾಡಕರ, ರಂಗಾ ಕಠಾರೆ, ಅನೂಪ್ ಬಿಜವಾಡ, ಪಾಲಿಕೆ ಸದಸ್ಯರಾದ ಪ್ರೀತಿ ಲದವಾ, ಭಾಸ್ಕರ ಜಿತೂರಿ, ಲಕ್ಷ್ಮೀಕಾಂತ ಘೋಡಕೆ, ನಾಗರತ್ನ ಬಳ್ಳಾರಿ, ಜದೀಶ್ ಬುಳ್ಳಾನವರ ಸೇರಿ ಹಲವರಿದ್ದರು.