3ನೇ ಬಾರಿ ಮೋದಿ ಪ್ರಧಾನಿ ಆಗೋದು ಶತಸಿದ್ಧ: ಕೆ. ಮಹದೇವ್‌

KannadaprabhaNewsNetwork | Published : Apr 28, 2024 1:18 AM

ಸಾರಾಂಶ

ಕಾಂಗ್ರೆಸ್ ಸರ್ಕಾರ ಬರೀ ಸುಳ್ಳು ಹೇಳಿ ಕಾಲ ಕಳೆಯುತ್ತಿದೆ, ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದರು. ಕಾಂಗ್ರೆಸ್ ನವರಿಗೆ ರೈತರ ಸಾಲ ಮನ್ನಾ ಮಾಡಲು ಆಗುವುದಿಲ್ಲ, ಸರ್ಕಾರ ನಡೆಸಲು ಹಣವಿಲ್ಲದಿದ್ದಾಗ ರೈತರ ಸಾಲವನ್ನು ಹೇಗೆ ತಾನೇ ಮಾಡುತ್ತಾರೆ.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ವಿಶ್ವದ ಜನಪ್ರಿಯ ನಾಯಕ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಮಂತ್ರಿಯಾಗುವುದು ಶತಸಿದ್ದ ಎಂದು ಮಾಜಿ ಶಾಸಕ ಕೆ. ಮಹದೇವ್ ಹೇಳಿದರು.

ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಮತದಾನವು ಒಂದು ಪುಣ್ಯದ ಕೆಲಸವಾಗಿದೆ ನಿಮ್ಮ ಒಂದೊಂದು ವೋಟು ದೇಶದ ಭವಿಷ್ಯಕ್ಕೆ ಅಡಿಪಾಯವಿದ್ದಂತೆ ಮನೆಗೆ ಒಂದು ಕಲ್ಲು, ಇಲ್ಲದಿದ್ದರೆ ಅಡಿಪಾಯಕ್ಕೆ ತೊಂದರೆಯಾಗುತ್ತದೆ. ಅದೇ ರೀತಿ ಮತದಾನವು ಎಲ್ಲರಿಗೂ, ಯಾರೊಬ್ಬರೂ ಕೂಡ ಮತದಾರದಿಂದ ದೂರ ಉಳಿಯಬಾರದು, ಇದು ನಿಮ್ಮ ಜನ್ಮ ಸಿದ್ಧ ಹಕ್ಕು ಈ ಹಕ್ಕನ್ನು ನೀವು ಚಲಾಯಿಸಬೇಕು ಎಂದರು.

ಕಾಂಗ್ರೆಸ್ ನವರು ಇತರ ಪಕ್ಷಗಳನ್ನು ಟೀಕಿಸುವುದೇ ಒಂದು ಉದ್ಯೋಗ ಮಾಡಿಕೊಂಡಿದ್ದಾರೆ. ಐದು ವರ್ಷಗಳಲ್ಲಿ ಭಾರತವು ಸಧೃಡ ದೇಶವಾಗುವುದರಲ್ಲಿ ಯಾವುದೇ ಸಂಶಯ ಬೇಡ, ದೇಶದಲ್ಲಿ ಯಾವಾಗಲೂ ಅಸ್ಥಿರತೆ ಕಾಡುತ್ತಿತ್ತು, ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದಲ್ಲಿ ಸಮಾನತೆ ಹುಟ್ಟು ಹಾಕಿದರು. ಎಲ್ಲರನ್ನೂ ಸಮಾನ ರೀತಿಯಲ್ಲಿ ಕರೆದುಕೊಂಡು ಹೋಗುವ ವ್ಯಕ್ತಿತ್ವವುಳ್ಳ ನರೇಂದ್ರ ಮೋದಿ ಅವರು ಇಡೀ ಪ್ರಪಂಚಕ್ಕೆ ಮಾದರಿಯಾಗಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರ ಬರೀ ಸುಳ್ಳು ಹೇಳಿ ಕಾಲ ಕಳೆಯುತ್ತಿದೆ, ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದರು. ಕಾಂಗ್ರೆಸ್ ನವರಿಗೆ ರೈತರ ಸಾಲ ಮನ್ನಾ ಮಾಡಲು ಆಗುವುದಿಲ್ಲ, ಸರ್ಕಾರ ನಡೆಸಲು ಹಣವಿಲ್ಲದಿದ್ದಾಗ ರೈತರ ಸಾಲವನ್ನು ಹೇಗೆ ತಾನೇ ಮಾಡುತ್ತಾರೆ ಎಂದು ಟೀಕಿಸಿದರು.ಎಚ್‌.ಡಿ. ಕೋಟೆ: ಮತದಾನ ಶಾಂತಿಯುತಕನ್ನಡಪ್ರಭ ವಾರ್ತೆ ಎಚ್‌.ಡಿ. ಕೋಟೆತಾಲೂಕಿನಲ್ಲಿ ಲೋಕಸಭಾ ಚುನಾವಣೆಯು ಮತದಾನವು ಶಾಂತಿಯುತವಾಗಿ ಮುಕ್ತಾಯಗೊಂಡಿದೆ.ತಾಲೂಕಿನಲ್ಲಿ ಶೇ. 69.20 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಚುನಾವಣೆ ಪ್ರಕ್ರಿಯೆ ಆರಂಭಗೊಂಡಾಗಿನಿಂದ ಬಿಸಿಲಿನ ತಾಪ ಹೆಚ್ಚಾಗಿ ಕಂಡುಬಂದ ಕಾರಣ ಮತದಾರರು ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸುವುದು ಬಹಳ ವಿರಳವಾಗಿತ್ತು. ಮಧ್ಯಾಹ್ನ 3 ಗಂಟೆ ನಂತರ ಮತದಾನ ಪ್ರಕ್ರಿಯೆ ಚುರುಕುಗೊಂಡಿತು.ಮಾಜಿ ಸಚಿವ ಎಂ. ಶಿವಣ್ಣ ಎಚ್‌.ಡಿ. ಕೋಟೆಯಲ್ಲಿ, ಮಾಜಿ ಶಾಸಕ ಚಿಕ್ಕಣ್ಣ ಬಿಚನಹಳ್ಳಿಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಚಾಮರಾಜನಗರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಪಟ್ಟಣದ ಮುಸ್ಲಿಂ ಬ್ಲಾಕ್ ಮತಗಟ್ಟೆಗೆ ಹಾಗೂ ಹೆರಿಗೆ ಮತಗಟ್ಟೆಗಳಿಗೆ ಭೇಟಿ ನೀಡಿದ್ದರು.

Share this article