ಕನ್ನಡಪ್ರಭ ವಾರ್ತೆ ಸಿಂಧನೂರು
ಕಾನಿಹಾಳ ಗ್ರಾಮದ ರಾಜೇಶ್ ನಾಯಕ ಎಂಬುವರ ಮದುವೆ ಸವಿತಾ ಅವರೊಂದಿಗೆ ಏ.13ರಂದು ನಿಗದಿಯಾಗಿತ್ತು. ತಮ್ಮ ಮದುವೆಗೆ ಮೋದಿಯನ್ನು ಆಹ್ವಾನಿಸಿ, ರಾಜೇಶ್ ಅವರು ದೆಹಲಿಯ ಪ್ರಧಾನಿ ಕಚೇರಿಗೆ ಆಹ್ವಾನ ಪತ್ರಿಕೆಯನ್ನು ಕಳುಹಿಸಿದ್ದರು. ಈ ಆಹ್ವಾನ ಸ್ವೀಕರಿಸಿದ ಮೋದಿಯವರು, ಪತ್ರದ ಮೂಲಕ ನವಜೋಡಿಗೆ ಶುಭ ಹಾರೈಸಿದ್ದಾರೆ.
‘ನಿಮ್ಮ ವಿವಾಹ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಜೀವನದ ಈ ಶುಭ ಸಂದರ್ಭಕ್ಕೆ ಕಾಲಿಡುತ್ತಿರುವ ನಿಮಗೆ ಮತ್ತು ಸವಿತಾ ಅವರ ಸುಂದರ ಭವಿಷ್ಯಕ್ಕಾಗಿ ಶುಭಾಶೀರ್ವಾದಗಳು’ ಎಂದು ಶುಭ ಹಾರೈಸಿದ್ದಾರೆ. ಮೋದಿಯವರ ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.