ಈ ಬಾರಿ ಮೋದಿ ಹವಾ ನಡೆಯಲ್ಲ: ಶಾಸಕ ಬೇಳೂರು ಗೋಪಾಲಕೃಷ್ಣ

KannadaprabhaNewsNetwork |  
Published : Apr 14, 2024, 01:55 AM ISTUpdated : Apr 14, 2024, 11:21 AM IST
 ಫೋಟೋ 13 ಎ, ಎನ್, ಪಿ 1 ಆನಂದಪುರದಲ್ಲಿ  ಶುಕ್ರವಾರ ಸಂಜೆ ಶಾಸಕ ಗೋಪಾಲಕೃಷ್ಣ ಬೇಳೂರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದ ಸಂದರ್ಭ. | Kannada Prabha

ಸಾರಾಂಶ

ಶಿವಮೊಗ್ಗದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹವಾ ನಡೆಯುವುದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಆನಂದಪುರ: ಶಿವಮೊಗ್ಗದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹವಾ ನಡೆಯುವುದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಆನಂದಪುರದಲ್ಲಿ ಶುಕ್ರವಾರ ಸಂಜೆ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಈ ಬಾರಿ ಮೋದಿ ಹವಾ ಇಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಮತ್ತು ಮೋದಿ ಹವಾ ಇತ್ತು, ಈ ಬಾರಿ ಆ ರೀತಿಯ ವಾತಾವರಣ ಕಾಣುತ್ತಿಲ್ಲ. 

ಕಳೆದ ವರ್ಷ ಚುನಾವಣೆಯಲ್ಲಿ ಆಯನೂರಿಗೆ ಮೋದಿ ಭೇಟಿ ನೀಡಿದ್ದರು. ಆದರೆ, ಅಲ್ಲಿ ಜೆಡಿಎಸ್‌ನ ಅಭ್ಯರ್ಥಿ ಶಾಂತಾಪೂರಾ ನಾಯಕ್ ಗೆಲುವು ಸಾಧಿಸಿದ್ದರು. ಈ ಬಾರಿ ಶಿವಮೊಗ್ಗಕ್ಕೆ ಮೊದಲ ಬಾರಿ ಮೋದಿ ಬಂದು ಹೋದ ಮೇಲೆ ಮೋದಿ ಹವಾ ಸಂಪೂರ್ಣ ಕಡಿಮೆಯಾಗಿದೆ ಎಂದರು.ಶಿವಮೊಗ್ಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿ ನಡೆಯಲಿದ್ದು, ತ್ರಿಕೋನ ಸ್ಪರ್ಧೆಯಾಗಲು ಸಾಧ್ಯವಿಲ್ಲ. ಕಾರಣ ಈಶ್ವರಪ್ಪ ಬಿಜೆಪಿಯ ಮನೆ ಮಗ ಅವರು ಏನು ಮಾಡುತ್ತಾರೆ ಎಂದು ಕೊನೆಯವರೆಗೂ ಕಾದು ನೋಡಬೇಕಾಗುತ್ತದೆ. ಈಶ್ವರಪ್ಪಗೆ ಬಿಜೆಪಿ ಮತಗಳು ಹೋಗುತ್ತವೆ ಹೊರೆತು ಕಾಂಗ್ರೆಸ್ ಮತಗಳು ಹೋಗುವುದಿಲ್ಲ. ಕಾಂಗ್ರೆಸ್ ಮತಗಳು ಹೋಗುವಂತಹ ವ್ಯಕ್ತಿತ್ವವನ್ನು ಅವರು ಬೆಳೆಸಿಕೊಂಡಿಲ್ಲ. ಅವರು ಬಿಜೆಪಿ, ಬಜರಂಗದಳ, ಆರ್‌ಎಸ್‌ಎಸ್‌ ಮತಗಳು ಪಡೆಯುತ್ತಾರೆ ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ಕಾಂಗ್ರೆಸ್ ಪರ ವಾತಾವರಣವಿದ್ದು, ಚುನಾವಣಾ ಪ್ರಚಾರ ನಿರಂತರವಾಗಿ ನಡೆಯುತ್ತಿದೆ. ನಾಮಪತ್ರ ಸಲ್ಲಿಸಿದ ನಂತರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೆ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ತೆರಳಿ ಮತಯಾಚನೆ ಮಾಡಲಿದ್ದಾರೆ. ಈ ಬಾರಿ ಶಿವಮೊಗ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಗೀತಾ 70 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.

ಪಕ್ಷದ ಮುಖಂಡರಾದ ರಮಾನಂದ್ ಸಾಗರ್, ರವಿಕುಮಾರ್, ಸೋಮಶೇಖರ್ ಲಗ್ಗೆರೆ, ವಿಜಯಕುಮಾರ್, ರಹಮತುಲ್ಲಾ, ನಜರುಲ್ಲಾ ಖಾನ್, ಇತರರು ಇದ್ದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ