ಕನ್ನಡಪ್ರಭ ವಾರ್ತೆ ಮೈಸೂರು
ನಗರದ ನಟರಾಜ ಕಲ್ಯಾಣ ಮಂಟಪದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈ.ಲಿ., ಆಶ್ರಯ್ ಸೇವಾ ಸನ್ ಸ್ಥಾನ್, ಲಯನ್ಸ್ ಅಂತಾರಾಷ್ಟ್ರೀಯ ಜಿಲ್ಲೆ 317ಜಿ, ಜೈನ್ ಮಿಲನ್ ಚಾರಿಟೆಬಲ್ ಟ್ರಸ್ಟ್ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ಮಾಡ್ಯೂಲ್ ಕೃತಕ ಕೈ ಮತ್ತು ಕಾಲಿನ ಅಂಗಗಳನ್ನು ವಿಶೇಷಚೇತನರಿಗೆ ವಿತರಿಸುವ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೆ ಅತಿ ಮುಖ್ಯವಾದುದು ಕೈ ಕಾಲು ಅಂಗಗಳು, ಇವು ಇಲ್ಲದಿದ್ದರೆ ಬಹಳ ಕಷ್ಟವಾಗುತ್ತದೆ. ಸರ್ಕಾರದಿಂದ ಯಾವುದೇ ಸಹಾಯ ಪಡೆಯದೇ ಹಲವಾರು ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಎಲ್ಲರಿಗೂ ಕೃತಕ ಕೈ ಕಾಲುಗಳನ್ನು ನೀಡುತ್ತಿರುವುದು ಒಳ್ಳೆಯ ಕೆಲಸ ಎಂದು ಅವರು ಶ್ಲಾಘಿಸಿದರು.ಸರ್ಕಾರ ಎಲ್ಲವನ್ನೂ ಎಲ್ಲರಿಗೂ ಕೊಡಲು ಸಾಧ್ಯವಿಲ್ಲ. ಎಷ್ಟು ಕೊಟ್ಟರೂ ಇಂದು ಸಮಾಜದಲ್ಲಿ ಕೈ ಕಾಲು ಇಲ್ಲದವರು, ಕಣ್ಣು ಇಲ್ಲದವರು ಲಕ್ಷಾಂತರ ಜನರಿಗೆ ಬೇಡಿಕೆ ಇದೆ. ಜೈನ ಸಮಾಜ ಯಾವುದೇ ಪ್ರಚಾರ ಪಡೆಯದೆ ಒಳ್ಳೆಯ ಕೆಲಸ ಮಾಡುತ್ತಿದೆ. ಪಿಂಜರಾಪೋಲ್ ನಡೆಸುತ್ತಿದೆ. ಪ್ರತಿಯೊಬ್ಬ ಮನುಷ್ಯನಿಗೂ ಏನಾದರೊಂದು ನೋವು ಇದ್ದೆ ಇರುತ್ತದೆ ಎಂದು ಅವರು ಹೇಳಿದರು.
ಮನುಷ್ಯ ಈ ಭೂಮಿಯ ಮೇಲೆ ಹುಟ್ಟಿದ ಮೇಲೆ ಒಳ್ಳೆಯ ಹೆಜ್ಜೆ ಗುರುತನ್ನು ಬಿಟ್ಟು ಹೋಗಬೇಕು. ಎಲ್ಲರ ಬಳಿ ಹಣ ಇರುತ್ತದೆ. ಅವರ ಕುಟುಂಬಕ್ಕೆ ಮಾತ್ರ ವಿನಿಯೋಗಿಸುತ್ತಾರೆ. ಆದರೆ, ಇಂತಹ ಸೇವಾ ಸಂಸ್ಥೆಗಳು ಸೇರಿಕೊಂಡು ಉಚಿತವಾಗಿ ಕೃತಕ ಕಾಲು, ಕೈಗಳನ್ನು ಧಾನ ಮಾಡುತ್ತಿದ್ದೀರಿ. ಇಂತಹ ಧಾನ ಮಾಡುವ ಉಧಾರತೆ ಎಲ್ಲರಿಗೂ ಬರಲಿ ಎಂದು ಅವರು ಆಶಿಸಿದರು.80 ಹೆಚ್ಚು ಜನರಿಗೆ ಕೃತಕ ಕೈ ಕಾಲು ಅಂಗಗಳನ್ನು ವಿತರಿಸಲಾಯಿತು. ಕನಕಗಿರಿ ಜೈನ ಮಠದ ಶ್ರೀ ಭುವನಕೀತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಲಯನ್ಸ್ ಅಂತಾರಾಷ್ಟ್ರೀಯದ ಹೇಮಂತಕುಮಾರ್ ಬನ್ಸಾಲಿ, ಕೆ. ರಾಜಶೇಖರ್, ಶಂಕರೇಗೌಡ, ವಿನೋದ್ ಕುಮಾರ್ ಜೈನ್, ಮದನ್ ಲಾಲ್ ಮಾರೋ, ಸುರೇಶ್ ಮೊದಲಾದವರು ಇದ್ದರು.