ಮೊಳಕಾಲ್ಮುರು ಇತಿಹಾಸ ಪೂರ್ವ ಕಾಲಕ್ಕೆ ಮಹತ್ವದ ಕೊಡುಗೆ ನೀಡಿದೆ

KannadaprabhaNewsNetwork | Published : Nov 23, 2024 12:30 AM

ಸಾರಾಂಶ

ಮೊಳಕಾಲ್ಮುರು: ಪ್ರಪಂಚದ ಇತಿಹಾಸಕ್ಕೆ ತಾಲೂಕಿನ ಬ್ರಹ್ಮಗಿರಿ ಅಶೋಕನ ಶಿಲಾಶಾಸನಗಳು ಮಹತ್ವ ಕೊಡುಗೆ ನೀಡಿವೆ ಎಂದು ಇತಿಹಾಸಕಾರ ಪ್ರೊ.ಲಕ್ಷ್ಮಣ ತೆಲಗಾವಿ ಅಭಿಪ್ರಾಯಪಟ್ಟರು.

ಮೊಳಕಾಲ್ಮುರು: ಪ್ರಪಂಚದ ಇತಿಹಾಸಕ್ಕೆ ತಾಲೂಕಿನ ಬ್ರಹ್ಮಗಿರಿ ಅಶೋಕನ ಶಿಲಾಶಾಸನಗಳು ಮಹತ್ವ ಕೊಡುಗೆ ನೀಡಿವೆ ಎಂದು ಇತಿಹಾಸಕಾರ ಪ್ರೊ.ಲಕ್ಷ್ಮಣ ತೆಲಗಾವಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ವಿಷ್ಣು ಸೇನಾ ಸಮಿತಿ, ತಾಲೂಕು ಕಲಾವಿದರ ಕಲ್ಯಾಣ ವೇದಿಕೆ, ಅಕ್ಷರ ಸಾಂಸ್ಕೃತಿಕ ವಿಕಾಸ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಗೀತೆಗಳ ಸಂಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೊಳಕಾಲ್ಮೂರು ಪ್ರಾಗೈತಿಹಾಸಿಕವಾಗಿ ಬಹು ದೊಡ್ಡ ಕಾಣಿಕೆ ನೀಡಿದೆ. ಇಲ್ಲಿ ಹಲವಾರು ರಾಜರು ಪಾಳೇಗಾರರ ಆಳ್ವಕೆ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಕವಿ ಮೊಳಕಾಲ್ಮೂರು ಶ್ರೀನಿವಾಸಮೂರ್ತಿ, ಜಿ.ಎಸ್.ವಸಂತ ಮಾಸ್ತರ ಮುಂತಾದವರ ಕೊಡುಗೆ ನೀಡಿದ್ದಾರೆ. ಜಾನಪದ ಬುಡಕಟ್ಟು ಸಂಸ್ಕೃತಿಯ ಕಣಜವಾಗಿರುವ ಸುಪ್ರಸಿದ್ಧ ರೇಷ್ಮೆ ಸೀರೆಗಳ ತವರು ತಾಲೂಕಿನ ಬಗ್ಗೆ ಪ್ರತಿಯೊಬ್ಬರು ಗೌರವ ಅಭಿಮಾನ‌ ಇಟ್ಟುಕೊಳ್ಳಬೇಕೆಂದು ತಿಳಿಸಿದರು.

ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿ, ಸಾಹಿತ್ಯ, ಸಂಗೀತ ರಂಗ ಚಟುವಟಿಕೆಗಳಿಗೆ ಜನಪ್ರತಿನಿಧಿಗಳ ಸಹಕಾರ ಅಗತ್ಯ. ಶಾಸಕರಿರಲಿ, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಇಂತಹ ಕಾರ್ಯಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಸ್ವಾಮೀಜಿ, ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ವಿರುಪಾಕ್ಷ ಪೂಜಾರಹಳ್ಳಿ, ತಾಲೂಕು ಕಲಾವಿದರ ಕಲ್ಯಾಣ ವೇದಿಕೆ ಅಧ್ಯಕ್ಷ ಜಿ.ಪಿ.ಸುರೇಶ್, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಜಿ.ಶ್ರೀನಿವಾಸಮೂರ್ತಿ, ಗಾಯಕ ಡಿ.ಒ.ಮುರಾರ್ಜಿ, ನಿವೃತ್ತ ಶಿಕ್ಷಕ ಎಂ.ಡಿ.ಲತೀಫ್ ಸಾಬ್, ರಾಯಾಪುರ ನಾಗೇಂದ್ರಪ್ಪ, ಎನ್.ವಿ.ಲೋಕೇಶ್, ಕಲಾವಿದರಾದ ಮನೋಹರ್, ಅಜ್ಜೇರಿ ತಿಪ್ಪೇಸ್ವಾಮಿ, ಕೋನಸಾಗರ ಶಿವು, ಚಲನಚಿತ್ರ ನಿರ್ದೇಶಕ ಎಚ್.ಮಲಿಯಣ್ಣ, ಶಿಕ್ಷಕ ಮುಜಾಮಿಲ್ ಮತ್ತಿತರರಿದ್ದರು.

Share this article