ಮಾಮ್ಕೋಸ್ ಪಾರದರ್ಶಕ ಅಡಳಿತಕ್ಕೆ ಹೆಸರಾಗಿದೆ: ಟಿ.ಎಲ್.ರಮೇಶ್

KannadaprabhaNewsNetwork |  
Published : Mar 12, 2025, 12:47 AM IST
ಮ್ಯಾಮ್.ಕೋಸ್ ಪಾರದರ್ಶಕ ಅಡಳಿತಕ್ಕೆ ಹೆಸರಾಗಿದೆಃ ಟಿ.ಎಲ್.ರಮೇಶ್ | Kannada Prabha

ಸಾರಾಂಶ

ತರೀಕೆರೆ, ಏಷ್ಯಾ ಖಂಡದಲ್ಲಿಯೇ ವಿಶೇಷ ಸಹಕಾರಿ ಸಂಸ್ಥೆಯಾದ ಮಾಮ್ಕೋಸ್ 31130 ಸದಸ್ಯರನ್ನು ಹೊಂದಿದ್ದು ಪಾರದರ್ಶಕ ಆಡಳಿತಕ್ಕೆ ಹೆಸರಾಗಿದೆ ಎಂದು ಮಾಮ್ಕೋಸ್ ನೂತನ ನಿರ್ದೇಶಕ ಟಿ.ಎಲ್.ರಮೇಶ್ ತಿಳಿಸಿದರು.

ಅಡಕೆ ಬೆಲೆ ಸ್ಥಿರತೆ ಕಾಪಾಡುತ್ತಿರುವ ಮಾಮ್ಕೋಸ್

ಕನ್ನಡಪ್ರಭ ವಾರ್ತೆ, ತರೀಕೆರೆ

ಏಷ್ಯಾ ಖಂಡದಲ್ಲಿಯೇ ವಿಶೇಷ ಸಹಕಾರಿ ಸಂಸ್ಥೆಯಾದ ಮಾಮ್ಕೋಸ್ 31130 ಸದಸ್ಯರನ್ನು ಹೊಂದಿದ್ದು ಪಾರದರ್ಶಕ ಆಡಳಿತಕ್ಕೆ ಹೆಸರಾಗಿದೆ ಎಂದು ಮಾಮ್ಕೋಸ್ ನೂತನ ನಿರ್ದೇಶಕ ಟಿ.ಎಲ್.ರಮೇಶ್ ತಿಳಿಸಿದರು.ಮಾಮ್ಕೋಸ್ ಶಾಖಾ ಕಚೇರಿಯಲ್ಲಿ ಷೇರುದಾರರು ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ ₹1150 ಕೋಟಿ ಸ್ವಂತ ಬಂಡವಾಳ ಹೊಂದಿರುವ ಸಂಘ ₹250 ಕೋಟಿ ಠೇವಣಿ ಹೊಂದಿ 21 ತಾಲೂಕು, 3 ಜಿಲ್ಲೆಗಳಲ್ಲಿ ಹೆಮ್ಮರವಾಗಿ ಬೆಳೆಯಲು ಭ್ರಷ್ಟಾಚಾರ ರಹಿತ ಆಡಳಿತವೇ ಕಾರಣ. ಅಡಕೆ ಬೆಲೆ ಸ್ಥಿರತೆಯನ್ನು ಮಾಮ್ಕೋಸ್ ಕಾಪಾಡುತ್ತಿದ್ದು, ಸಂಘದಿಂದ ಷೇರುದಾರರಿಗೆ ನೇರವಾಗಿ ವಿಶೇಷ ಸೌಲಭ್ಯ ತಲುಪಿಸಲಾಗುತ್ತಿದೆ. ಷೇರುದಾರರು ಕಡ್ಡಾಯವಾಗಿ ಸಂಘ ದಲ್ಲಿಯೇ ವ್ಯವಹಾರ ನಡೆಸಬೇಕು. ಸೂಕ್ತ ಠೇವಣಿ ಇಡಬೇಕು ಎಂದು ಹೇಳಿದರು.

ಮಾಮ್ಕೋಸ್ ನಿರ್ದೇಶಕರಾಗಿ ಆಯ್ಕೆ ಆಗಿರುವುದು ಸಂತಸವಾಗಿದೆ. ಸಹಕಾರಿ ಕ್ಷೇತ್ರದಲ್ಲಿ 40 ವರ್ಷಗಳ ಸುಧೀರ್ಘ ಸೇವೆ ಯಿಂದ ಈ ಅವಕಾಶ ದೊರೆತಿದೆ. ಅಡಕೆ ಹಾನಿಕಾರಕವಲ್ಲ ಎಂಬ ವಿಷಯ ಮಂಡನೆಯಲ್ಲಿ ಮಾಮ್ಕೋಸ್ ಪ್ರಮುಖ ಪಾತ್ರ ವಹಿಸುತ್ತಿದೆ. ಷೇರುದಾರರು ಗುಣಮಟ್ಟದ ಅಡಕೆ ಮಾರಾಟ ಮಾಡಬೇಕು, ಷೇರುದಾರರ ಹಿತ ಕಾಪಾಡಲು ಸಂಘ ಬದ್ಧವಿದ್ದು, ಸಂಘದ ಸೌಲಭ್ಯ ಪಡೆಯಲಿ ಎಂದು ಹೇಳಿದರು.ಶಾಖಾ ವ್ಯವಸ್ಥಾಪಕ ಎಲ್.ಎಸ್. ಪ್ರದೀಪ್‌ಕುಮಾರ್ ಮಾತನಾಡಿ, ಷೇರುದಾರರಿಗೆ ಅವಘಡವಾದಾಗ ಅಭಿರಕ್ಷೆ ಗುಂಪು ಯೋಜನೆ ಮೂಲಕ ವಿಮಾ ಸೌಲಭ್ಯ ಒದಗಿಸಲಾಗುತ್ತಿದೆ. ₹ 1175 ಗಳನ್ನು ಷೇರುದಾರರು ಸಂದಾಯ ಮಾಡಬೇಕಿದೆ, ಅಡಕೆಗೆ ತಗಲುವ ರೋಗದ ಬಗ್ಗೆ ಮಾಹಿತಿ ನೀಡಲು ಸ್ಥಳಕ್ಕೆ ವಿಜ್ಞಾನಿಗಳನ್ನು ಕರೆಸಲಾಗುವುದು ಎಂದು ಹೇಳಿದರು.

ಮೃತಪಟ್ಟ ಷೇರುದಾರರಾದ ಟಿ.ಕೆ.ವೆಂಕಟೇಶ್ ಮತ್ತು ಪುಟ್ಟಪ್ಪ ರವರ ಶವ ಸಂಸ್ಕಾರ ಸಹಾಯಧನ ತಲಾ ₹5000 ಚೆಕ್‌ನ್ನು ಕುಟುಂಬದವರಿಗೆ ವಿತರಿಸಲಾಯಿತು. ಬೀರೂರು ಶಾಖಾ ವ್ಯವಸ್ಥಾಪಕಿ ಆರ್.ಪಲ್ಲವಿ ಹಾಗೂ ಷೇರುದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-ತರೀಕೆರೆಯಲ್ಲಿ ಮಾಮ್ಕೋಸ್ ಶಾಖಾ ಕಚೇರಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ನಿರ್ದೇಶಕ ಟಿ.ಎಲ್.ರಮೇಶ್ ಅವರನ್ನು ಅಭಿನಂದಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೃಢ ಸಂಕಲ್ಪ, ಅಚಲ ವಿಶ್ವಾಸದಿಂದ ಯಶಸ್ಸು ಸಾಧ್ಯ
ಧಾರ್ಮಿಕ, ಪ್ರಾಚೀನ ಮಾಹಿತಿಯುಳ್ಳ ಕ್ಯಾಲೆಂಡರ್ ಬಿಡುಗಡೆ