ಮಠಗಳು ಸಂಸ್ಕಾರ ನೀಡುವ ಶ್ರದ್ಧಾ ಕೇಂದ್ರಗಳು

KannadaprabhaNewsNetwork |  
Published : Sep 05, 2024, 12:32 AM IST
ಲೋಕಾಪುರ | Kannada Prabha

ಸಾರಾಂಶ

ಪ್ರತಿಯೊಬ್ಬ ವ್ಯಕ್ತಿಯ ಬೆಳವಣೆಗೆಯಲ್ಲಿ ಸಂಸ್ಕಾರ ಮತ್ತು ಶಿಕ್ಷಣ ಪ್ರಮುಖವಾಗಿವೆ. ಸಂಸ್ಕಾರವಿಲ್ಲದೇ ಶಿಕ್ಷಣ ನಿರರ್ಥಕ. ಮಠ-ಮಾನ್ಯಗಳು ಧಾರ್ಮಿಕ ಸೇವೆಯೊಂದಿಗೆ ಸಂಸ್ಕಾರವನ್ನು ಕಲಿಸುತ್ತವೆ. ಹೀಗಾಗಿ ಮಠಮಾನ್ಯಗಳು ಸಂಸ್ಕಾರ ನೀಡುವ ಶ್ರದ್ಧಾ ಕೇಂದ್ರಗಳು ಎಂದು ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪ್ರತಿಯೊಬ್ಬ ವ್ಯಕ್ತಿಯ ಬೆಳವಣೆಗೆಯಲ್ಲಿ ಸಂಸ್ಕಾರ ಮತ್ತು ಶಿಕ್ಷಣ ಪ್ರಮುಖವಾಗಿವೆ. ಸಂಸ್ಕಾರವಿಲ್ಲದೇ ಶಿಕ್ಷಣ ನಿರರ್ಥಕ. ಮಠ-ಮಾನ್ಯಗಳು ಧಾರ್ಮಿಕ ಸೇವೆಯೊಂದಿಗೆ ಸಂಸ್ಕಾರವನ್ನು ಕಲಿಸುತ್ತವೆ. ಹೀಗಾಗಿ ಮಠಮಾನ್ಯಗಳು ಸಂಸ್ಕಾರ ನೀಡುವ ಶ್ರದ್ಧಾ ಕೇಂದ್ರಗಳು ಎಂದು ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಅಭಿಪ್ರಾಯಪಟ್ಟರು.

ಪಟ್ಟಣದ ಹಿರೇಮಠದಲ್ಲಿ ಶ್ರಾವಣ ಮಾಸದ ಪೂಜಾ ಮಂಗಳ ಹಾಗೂ ಅನೇಕ ಮಹನೀಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಬಹುತೇಕ ಸಾಧಕರ ಹಿಂದೆ ಮಠಗಳ ಸಂಸ್ಕಾರವಿದೆ. ಮಠ ಮಾನ್ಯಗಳು ಸಂಸ್ಕಾರ ನೀಡಿ ಆದರ್ಶ ವ್ಯಕ್ತಿಯನ್ನಾಗಿ ರೂಪಿಸುತ್ತಿವೆ. ಇದಕ್ಕೆ ನಾನು ಸೇರಿದಂತೆ ಅನೇಕರ ಉದಾಹರಣೆ ಇದೆ. ಹೀಗಾಗಿ ನಮ್ಮ ಸನಾತನ ಪರಂಪರೆಯಲ್ಲಿ ಮಠಗಳಿಗೆ ಹೆಚ್ಚಿನ ಆದ್ಯತೆ ಇದೆ ಎಂದರು.

ಹಿರೇಮಠದ ಡಾ.ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಧರ್ಮ, ಸಾಹಿತ್ಯ, ಸಂಸ್ಕಾರ ಮೈಗೂಡಿಸಿಕೊಂಡಿರುವ ಕನ್ನಡ ನಾಡಿನ ಮಠಗಳು ಮಾನವೀಯತೆಯ ಮಹಾ ಮಂದಿರಗಳಾಗಿವೆ. ಲೋಕೋದ್ಧಾರ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಠಗಳ ಮತ್ತು ಮಠಾಧಿಪತಿಗಳನ್ನು ಉದಾಸೀನ ಮಾಡಿದರೆ ಸಾಮಾಜಿಕ ಸೇವಾ ಕಾರ್ಯಕ್ಕೆ ತೊಡಕುಂಟಾಗಲಿದೆ. ಮಠಗಳನ್ನು ರಕ್ಷಿಸಿಕೊಳ್ಳುವ ಮೂಲಕ ಸಮಾರ್ಜೋದ್ಧಾರ ಕಾಯಕ ಪರಂಪತೆ ಮುಂದುವರೆಸಿಕೊಂಡು ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.

ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳದ ಉಪಾಧ್ಯಕ್ಷ ಕಾಶಿನಾಥ ಹುಡೇದ, ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಸರ, ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ರಫೀಕ ಭೈರಕದಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಣಾಕರ ಶೆಟ್ಟಿ, ಅಲ್ಲಾಸಾಬ ಯಾದವಾಡ, ಶಿವರುದ್ರಯ್ಯ ವಜ್ರಮಟ್ಟಿ, ಡಾ. ಆರ್.ವ್ಹಿ. ಪಾಟೀಲ ಹಿರೇಮಠ ಮಠದಿಂದ ಸನ್ಮಾನಿಸಲಾಯಿತು.

ಈ ವೇಳೆ ಎಲ್.ಸಿ.ಉದಪುಡಿ, ಡಿ.ಎಂ.ತೆಗ್ಗಿ, ಎಸ್.ಎನ್.ಹಿರೇಮಠ, ಆರ್.ಕೆ.ಮಠದ, ಲೋಕಣ್ಣ ಕತ್ತಿ, ಶಂಕರ ತೇಲಿ, ಪ್ರಕಾಶ ಚುಳಕಿ, ಸದಾಶಿವ ನಾವ್ಹಿ, ಸಂಕಪ್ಪ ಗಂಗಣ್ಣವರ, ಶಿವಪ್ಪ ಚೌಧರಿ, ಅರುಣ ಕಟಗೇರಿ ಅಪಾರ ಹಿರೇಮಠದ ಭಕ್ತ ವೃಂದ ಇದ್ದರು.

PREV

Recommended Stories

ಉಪರಾಷ್ಟ್ರಪತಿ ಹುದ್ದೆ ರೇಸಲ್ಲಿ ರಾಜ್ಯ ಗೌರ್ನರ್‌ ಗೆಹಲೋತ್‌?
ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಪ್ರೇಮ ತುಂಬಿ