ಯಾದಗಿರಿ: ಶ್ರಾವಣ ಮಾಸ ಮುಕ್ತಾಯಗೊಂಡ ಪ್ರಯುಕ್ತ ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ತಾಲೂಕಿನ ಮೈಲಾಪೂರ ಮಲ್ಲಯ್ಯನ ದೇವಸ್ಥಾನದಲ್ಲಿ ಅರ್ಚಕರು ವಿಶೇಷ ಪೂಜೆ ಕೈಂಕರ್ಯಗಳನ್ನು ನೆರವೇರಿಸಿದರು. ವಿಶೇಷ ದಿನವಾಗಿರುವುದರಿಂದ ದೇವಸ್ಥಾನಕ್ಕೆ ನಾನಾ ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿಸಿ, ಪವಿತ್ರ ಹೊನ್ನಕೆರೆಯಲ್ಲಿ ಪುಣ್ಯ ಸ್ನಾನ ಮಾಡಿ, ಸರಧಿಯಲ್ಲಿ ನಿಂತು ಮಲ್ಲಯ್ಯನ ದರ್ಶನ ಪಡೆದು, ಪ್ರಾರ್ಥಿಸಿ, ನಂತರ ಎಲ್ಲರಿಗೂ ಅನ್ನದಾಸೋಹ ನಡೆಸಿಕೊಟ್ಟರು.
4ವೈಡಿಆರ್3: ಶ್ರಾವಣ ಮಾಸ ಮುಕ್ತಾಯಗೊಂಡ ಪ್ರಯುಕ್ತ ಯಾದಗಿರಿ ತಾಲೂಕಿನ ಮೈಲಾಪೂರ ಮಲ್ಲಯ್ಯನ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.