ಯೂರಿಯಾ ಪೂರೈಕೆಗೆ ಸೋಮವಾರ ಗಡುವು

KannadaprabhaNewsNetwork |  
Published : Aug 01, 2025, 12:00 AM IST
31ಕೆಡಿವಿಜಿ2-ಸಮರ್ಪಕವಾಗಿ ಯೂರಿಯಾ ಪೂರೈಸುವಂತೆ ದಾವಣಗೆರೆ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು ಕೃಷಿ ಸಚಿವ ಚಲುವರಾಯ ಸ್ವಾಮಿ ಭಾವಚಿತ್ರ ಸುಟ್ಟು ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟಿಸುತ್ತಿರುವುದು. | Kannada Prabha

ಸಾರಾಂಶ

ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಕೃಷಿ ಸಚಿವ ಚಲುವರಾಯ ಸ್ವಾಮಿ ಭಾವಚಿತ್ರಗಳನ್ನು ದಹಿಸುವ ಮೂಲಕ ರೈತರು ಪ್ರತಿಭಟಿಸಿದರು.

- ರಸಗೊಬ್ಬರ ನೀಡದಿದ್ದರೆ ತೀವ್ರ ಹೋರಾಟ: ರೈತ ಸಂಘಟನೆಗಳ ಎಚ್ಚರಿಕೆ

- - - - ಕೃಷಿ ಸಚಿವ ಚಲುವರಾಯ ಸ್ವಾಮಿ ಭಾವಚಿತ್ರಗಳ ದಹಿಸಿ ರೈತರ ಆಕ್ರೋಶ

- ₹290 ದರ ರಸಗೊಬ್ಬರ ಪ್ಯಾಕೆಟ್‌ ₹1000ಕ್ಕೆ ಮಾರಾಟ: ಆರೋಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಕೃಷಿ ಸಚಿವ ಚಲುವರಾಯ ಸ್ವಾಮಿ ಭಾವಚಿತ್ರಗಳನ್ನು ದಹಿಸುವ ಮೂಲಕ ರೈತರು ಪ್ರತಿಭಟಿಸಿದರು.

ನಗರದ ಆರ್‌ಎಂಸಿ ರಸ್ತೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು, ದಾವಣಗೆರೆ ಸೇರಿದಂತೆ ರಾಜ್ಯದ ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಸುತ್ತಿಲ್ಲ ಎಂದು ರಾಜ್ಯ ಸರ್ಕಾರ ಹಾಗೂ ಕೃಷಿ ಸಚಿವ ಚಲುವರಾಯ ಸ್ವಾಮಿ ಪ್ರತಿಕೃತಿ ದಹಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಮಾತನಾಡಿ, ಜಿಲ್ಲೆಯಲ್ಲಿ ರೈತರು ರಸಗೊಬ್ಬರಕ್ಕಾಗಿ ಪರದಾಡುವ ಪರಿಸ್ಥಿತಿ ಇದೆ. ಗೊಬ್ಬರದ ಅಂಗಡಿಗಳ ಮುಂದೆ ನಸುಕಿನಿಂದಲೇ ರೈತರು ಸಾಲುಗಟ್ಟಿ ನಿಂತರೂ ಸಮರ್ಪಕ ಗೊಬ್ಬರ ಪೂರೈಕೆ ಆಗುತ್ತಿಲ್ಲ. ಕೃಷಿ ಸಚಿವ ಚಲುವರಾಯ ಸ್ವಾಮಿ, ಕೃಷಿ ಅಧಿಕಾರಿಗಳು ಈ ವಿಚಾರಕ್ಕೂ ತಮಗೂ ಯಾವುದೇ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದರು.

ಸರ್ಕಾರ ಸಬ್ಸಿಡಿಯಲ್ಲಿ ರಸಗೊಬ್ಬರ ನೀಡುತ್ತಿದ್ದರೂ, ₹290ಕ್ಕೆ ಮಾರಾಟ ಮಾಡುವ ರಸಗೊಬ್ಬರವನ್ನು ₹1 ಸಾವಿರಕ್ಕೆ ಮಾರಾಟ ಮಾಡಿಕೊಳ್ಳುವ ಕೆಲಸವಾಗುತ್ತಿದೆ. ಕಾಳಸಂತೆಯಲ್ಲಿ ರಸಗೊಬ್ಬರವನ್ನು ರಾಜಾರೋಷವಾಗಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಬಡರೈತರಿಗೆ ಗೊಬ್ಬರ ಮರೀಚಿಕೆಯಾಗಿದೆ. ಹೀಗಾದರೆ ರೈತರು ರಸಗೊಬ್ಬರ ಯಾರಿಗೆ ಕೇಳಬೇಕು ಎಂದು ಪ್ರಶ್ನಿಸಿದರು.

ಸಂಘದ ತಾಲೂಕು ಕಾರ್ಯಾಧ್ಯಕ್ಷ ಮಂಜುನಾಥ, ಮುಖಂಡರಾದ ಪರಮೇಶ, ಗಂಗನಕಟ್ಟೆ ರೇವಣ್ಣ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

- - -

-31ಕೆಡಿವಿಜಿ2.ಜೆಪಿಜಿ:

ರೈತ ಸಂಘ, ಹಸಿರು ಸೇನೆಯಿಂದ ಷಿ ಸಚಿವರ ಭಾವಚಿತ್ರ ದಹಿಸಿ ಪ್ರತಿಭಟಿಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ