ಆಯುಧಪೂಜೆ ದಿನವೇ ವಕೀಲರ ಕಚೇರಿಯಲ್ಲಿ ಹಣ ಕಳ್ಳತನ

KannadaprabhaNewsNetwork |  
Published : Oct 22, 2026, 01:15 AM IST
ಆಯುಧ ಪೂಜೆಯ ದಿನವೇ ವಕೀಲರ ಕಚೇರಿಗೆ ಕನ್ನ 3.50 ಲಕ್ಷ ಹಣ ದೋಚಿ ಪರಾರಿ | Kannada Prabha

ಸಾರಾಂಶ

ಆಯುಧಪೂಜೆಯ ಅಂಗವಾಗಿ ರಾತ್ರಿ ಕಚೇರಿಯಲ್ಲಿ ಪೂಜೆ ಮುಗಿಸಿದ ಬಳಿಕ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದರು ಎಂದು ತಿಳಿಸಿದ್ದಾರೆ. ಮರುದಿನ ಬೆಳಗ್ಗೆ ಪಕ್ಕದ ಅಂಗಡಿಯವರು ಕಚೇರಿಯ ಬೀಗ ಮುರಿದಿರುವುದಾಗಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ತಿಳಿದುಬಂದಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ. ಕಚೇರಿಯಲ್ಲಿದ್ದ ಕಡತಗಳು, ಲ್ಯಾಪ್‌ಟಾಪ್ ಸೇರಿದಂತೆ ಇತರೆ ಉಪಕರಣಗಳನ್ನು ಕಳ್ಳರು ಮುಟ್ಟಿಲ್ಲ. ಕೇವಲ ₹3.50 ಲಕ್ಷ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಆತಂಕದ ನಡುವೆಯೇ, ಆಯುಧಪೂಜೆಯ ದಿನವೇ ಕಳ್ಳರು ವಕೀಲರ ಕಚೇರಿಯೊಂದಕ್ಕೆ ನುಗ್ಗಿ ₹ 3.50 ಲಕ್ಷ ನಗದು ದೋಚಿರುವ ಘಟನೆ ಬೆಳಕಿಗೆ ಬಂದಿದೆ.ನಗರದ ಬಿ. ಎಚ್. ರಸ್ತೆಯ ಮುಂಭಾಗದಲ್ಲಿರುವ ಸಾಯಿನಾಥ ರಸ್ತೆಯಲ್ಲಿನ ವಕೀಲ ಶಶಿಕುಮಾರ್‌ ಅವರ ಕಚೇರಿಯ ಬೀಗ ಮುರಿದು ಕಳ್ಳತನ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಆಯುಧಪೂಜೆಯ ಅಂಗವಾಗಿ ರಾತ್ರಿ ಕಚೇರಿಯಲ್ಲಿ ಪೂಜೆ ಮುಗಿಸಿದ ಬಳಿಕ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದರು ಎಂದು ತಿಳಿಸಿದ್ದಾರೆ. ಮರುದಿನ ಬೆಳಗ್ಗೆ ಪಕ್ಕದ ಅಂಗಡಿಯವರು ಕಚೇರಿಯ ಬೀಗ ಮುರಿದಿರುವುದಾಗಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ತಿಳಿದುಬಂದಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ. ಕಚೇರಿಯಲ್ಲಿದ್ದ ಕಡತಗಳು, ಲ್ಯಾಪ್‌ಟಾಪ್ ಸೇರಿದಂತೆ ಇತರೆ ಉಪಕರಣಗಳನ್ನು ಕಳ್ಳರು ಮುಟ್ಟಿಲ್ಲ. ಕೇವಲ ₹3.50 ಲಕ್ಷ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.ನಗರದಲ್ಲಿ ದಿನೇದಿನೇ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಬ್ಬದ ದಿನವೇ ವಕೀಲರ ಕಚೇರಿಯನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸಿರುವ ಘಟನೆ ನಗರದಲ್ಲಿ ಭದ್ರತಾ ವ್ಯವಸ್ಥೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಈ ಸಂಬಂಧ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭ್ಯರ್ಥಿ ಶಶೀಲ್‌ ನಮೋಶಿಗೆ ಅಭೂತಪೂರ್ವ ಬೆಂಬಲ: ರವೀಂದ್ರ ಶೆಟ್ಟಿ
ಶ್ರದ್ದಾ ಭಕ್ತಿಯಿಂದ ದೇವರನ್ನು ಆರಾಧಿಸಿದರೆ ಯಶಸ್ಸು ಸಿದ್ದಿ