ಕರುನಾಡಿನ ಜ್ಞಾನ ಪರಂಪರೆಗೆ ಘನತೆ ತಂದ ಮಧ್ವಾಚಾರ್ಯ: ಡಾ. ಗುರುಮಧ್ವಾಚಾರ್ಯ

KannadaprabhaNewsNetwork |  
Published : Oct 22, 2026, 01:15 AM IST
ಫೋಟೋ- ಜಯಂತಿ 1, ಜಯತಿ 2 ಮತ್ತು ಜಯಂತಿ 3ಕಲಬುರಗಿಯಲ್ಲಿ ಮಂಗಳವಾರ ನಡೆದ ಜಗದ್ಗುರು ಮಧ್ವಾಚಾರ್ಯರ ಜಯಂಕಿ ಅಂಗವಾಗಿ ಜಿಲ್ಲಾ ಬ್ರಾಹ್ಹಣ ಸಮಾಜ, ಸತ್ಯಾತ್ಮ ಸೇನೆ ಆಯೋಜಿಸಿದ್ದ ಆಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆ ನೋಟಗಳು | Kannada Prabha

ಸಾರಾಂಶ

ಆಚಾರ್ಯ ಮಧ್ವರು ನಮ್ಮ ಕನ್ನಡ ನೆಲದವರು. ಭಾರತೀಯ ಸನಾತನ ಧರ್ಮದಲ್ಲಿ ಭಕ್ತಿಪಂಥವನ್ನು ಪರಿಣಾಮಕಾರಿಯಾಗಿ ಬೆಳೆಸಿದ ಮಹನೀಯರು, ಕನ್ನಡ ನಾಡಿನ ಜ್ಞಾನಪರಂಪರೆ ಶ್ರೀಮಂತಗೊಳಿಸಿದವರು. ರಾಜ್ಯ ಸರ್ಕಾರ ಅವರ ಜಯಂತಿ ಆಚರಣೆಗೆ ಮುಂದಾಗಿದ್ದು ಶ್ಲಾಘನೀಯ ಎಂದು ನಗರದ ಎನ್.ವಿ. ಪದವಿ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲ, ಸಂಸ್ಕೃತ ವಿದ್ವಾಂಸ ಪಂ. ಡಾ. ಗುರುಮಧ್ವಾಚಾರ್ಯ ನವಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ ಆಚಾರ್ಯ ಮಧ್ವರು ನಮ್ಮ ಕನ್ನಡ ನೆಲದವರು. ಭಾರತೀಯ ಸನಾತನ ಧರ್ಮದಲ್ಲಿ ಭಕ್ತಿಪಂಥವನ್ನು ಪರಿಣಾಮಕಾರಿಯಾಗಿ ಬೆಳೆಸಿದ ಮಹನೀಯರು, ಕನ್ನಡ ನಾಡಿನ ಜ್ಞಾನಪರಂಪರೆ ಶ್ರೀಮಂತಗೊಳಿಸಿದವರು. ರಾಜ್ಯ ಸರ್ಕಾರ ಅವರ ಜಯಂತಿ ಆಚರಣೆಗೆ ಮುಂದಾಗಿದ್ದು ಶ್ಲಾಘನೀಯ ಎಂದು ನಗರದ ಎನ್.ವಿ. ಪದವಿ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲ, ಸಂಸ್ಕೃತ ವಿದ್ವಾಂಸ ಪಂ. ಡಾ. ಗುರುಮಧ್ವಾಚಾರ್ಯ ನವಲಿ ಹೇಳಿದರು.ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದ ವತಿಯಿಂದ ನಡೆದ ಮಧ್ವ ಜಯಂತಿ ಆಚರಣೆಯ ಸಮಾರಂಭದಲ್ಲಿ ಪಾಲ್ಗೊಂಡು ಅವರು ವಿಶೇಷ ಉಪನ್ಯಾಸ ನೀಡಿದರು.ಶ್ರೀ ಮಧ್ವಾಚಾರ್ಯರ ಮಹತ್ವದ ಕೊಡುಗೆಯೆಂದರೆ ದ್ವೈತವೇದಾಂತದ ಶಾಸ್ತ್ರೀಯ, ವ್ಯವಸ್ಥಿತ ನಿರೂಪಣೆ, ದ್ವೈತದ ಮೂಲಭೂತ ನಿಲುವು ಜೀವಾತ್ಮ ಮತ್ತು ಪರಮಾತ್ಮ ಒಂದೇ ಅಲ್ಲ, ಅವುಗಳ ಮಧ್ಯೆ ನೈಜವಾದ ಭಿನ್ನತೆ ಇದೆ ಎಂಬುದಾಗಿದೆ. ಪರಮಾತ್ಮನು ಸ್ವತಂತ್ರ ಸತ್ಯ, ಜೀವಾತ್ಮ ಮತ್ತು ಜಗತ್ತು ಪರಮಾತ್ಮನ ಮೇಲೆ ಅವಲಂಬಿತವಾದ ಸತ್ಯಗಳು ಎಂಬುದನ್ನು ಮಧ್ವಾಚಾರ್ಯರು ಪ್ರತಿಪಾದಿಸಿದರು ಎಂದರು.ಆಚಾರ್ಯ ಮಧ್ವರ ದೃಷ್ಟಿಯಲ್ಲಿ ಶ್ರೀ ವಿಷ್ಣುವೇ ಸರ್ವೋತ್ತಮ ಪರಮಾತ್ಮ. ಅದನ್ನು ಅರಿತುಕೊಂಡು, ವಿಶ್ವಾಸವಿರಿಸಿ ಜ್ಞಾನ, ಭಕ್ತಿ, ವೈರಾಗ್ಯ, ಧರ್ಮಾಚರಣೆ ಮೂಲಕ ಆಧ್ಯಾತ್ಮಿಕ ಪ್ರಗತಿ, ಉನ್ನತಿ ಸಾಧಿಸಬೇಕೆಂದು ಪ್ರತಿಪಾದಿಸಿದ್ದಾರೆ. 37 ಅಪೂರ್ವ ಕೃತಿಗಳನ್ನು ರಚಿಸಿ ದ್ವೈತ ಸಿದ್ಧಾಂತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದರು.*ನೀತಿ ಸಂಹಿತೆ ಹಿನ್ನೆಲೆ- ಸರಳ ಆಚರಣೆ: ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಡೆದ ಜಯಂತಿಯನ್ನು ಸಂಕ್ಷಿಪ್ತವಾಗಿ, ಸರಳವಾಗಿ ಆಚರಿಸಲಾಯಿತು. ಬ್ರಾಹ್ಮಣ ಸಮಾಜದ ಹಿರಿಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ರಾಮಾಚಾರ್ಯ ನವಲಿ ಅವರು ಶ್ರೀ ಮಧ್ವಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಉತ್ತರಾದಿ ಮಠದ ಮಠಾಧಿಕಾರಿಗಳಾದ ಘಂಟಿ ರಾಮಾಚಾರ್ಯರು, ಬ್ರಾಹ್ಮಣ ಸಮಾಜದ ಪ್ರಮುಖರಾದ ಪ್ರಶಾಂತರಾವ ಕೋರಳ್ಳಿ, ರಾಘವೇಂದ್ರ ಕುಲಕರ್ಣಿ ಕೋಗನೂರ, ಸತ್ಯಾತ್ಮ ಸೇನೆಯ ಉಪಾಧ್ಯಕ್ಷ ವಿನೂತ ಕುಲಕರ್ಣಿ, ರಘೂತ್ತಮ ಘಂಟಿ, ಕಂದಾಯ ಇಲಾಖೆಯ ಶಿಷ್ಟಾಚಾರ ತಹಸೀಲ್ದಾರ್ ಗಂಗಾಧರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಗೌರಮ್ಮ ಮತ್ತಿತರರು ಉಪಸ್ಥಿತರಿದ್ದರು. ಗಾಯಕ ಅನಂತ ಮೇಸ್ತ್ರಿ ಮತ್ತು ವಿದ್ಯಾಧೀಶ ಆದ್ಯ ಅವರು ಆಚಾರ್ಯ ಮಧ್ವರ ಕುರಿತ ಗೀತೆಗಳನ್ನು ಹಾಡಿದರು. ಹಿರಿಯ ಪತ್ರಕರ್ತ ಶೇಷಮೂರ್ತಿ ಅವಧಾನಿ ಅವರನ್ನು ಸನ್ಮಾನಿಸಲಾಯಿತು. ವಿದ್ವಾಂಸ ಪಂ. ಗೋಪಾಲಾಚಾರ್ಯ ಅಕಮಂಚಿ ನಿರೂಪಿಸಿ ವಂದಿಸಿದರು.

*ಭವ್ಯ ಶೋಭಾಯಾತ್ರೆ: ಜಗತ್ ವೃತ್ತದಿಂದ ಡಾ. ಎಸ್.ಎಂ. ಪಂಡಿತ್ ರಂಗಮoದಿರದವರೆಗೆ ಶ್ರೀ ಮಧ್ವಾಚಾರ್ಯರ ಭಾವಚಿತ್ರದ ಭವ್ಯ ಶೋಭಾಯಾತ್ರೆ ಜರುಗಿತು. ಶಾಸಕ ಅಲ್ಲಂಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಮಾಜಿ ಮೇಯರ್ ಶರಣು ಮೋದಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌, ಉತ್ತರಾದಿ ಮಠಾಧಿಕಾರಿ ರಾಮಾಚಾರ್ಯ ಘಂಟಿ ಅವರು ಚಾಲನೆ ನೀಡಿದರು. ವಿವಿಧ ಮಹಿಳಾ ಭಜನಾ ಮಂಡಳಿಯವರು ಹರಿನಾಮ ಭಜನೆ ಮಾಡಿದರು. ವಿದ್ವಾಂಸರು ವೇದಘೋಷ ಮಾಡಿದರು.ವಿದ್ವಾಂಸರಾದ ಪಂ. ಗೋಪಾಲಾಚಾರ್ಯ ಅಕಮಂಚಿ, ಪಂ. ಡಾ. ಹಣಮಂತಾಚಾರ್ಯ ಸರಡಗಿ, ಪಂ. ಡಾ. ಗುರುಮಧ್ವಾಚಾರ್ಯ ನವಲಿ, ಪಂ. ಪ್ರಸನ್ನಾಚಾರ್ಯ ಜೋಶಿ, ಪಂ. ಡಾ. ಶ್ರೀನಿವಾಸ ಆಚಾರ್ಯ ಪದಕಿ, ಪಂ. ನಾರಾಯಣಾಚಾರ್ಯ ಕಮಲಾಪುರ, ಸತ್ಯಾತ್ಮ ಸೇನೆಯ ರಘೋತ್ತಮ ಘಂಟಿ, ಭರತ ಕುಲಕರ್ಣಿ, ಲಕ್ಷ್ಮಣಾಚಾರ್ಯ ಗಂಗಾವತಿ, ಕೃಷ್ಣಾ ಪೂಜಾರಿ, ನಾರಾಯಣ ಪೂಜಾರಿ, ಬ್ರಾಹ್ಮಣ ಸಮಾಜದ ಪ್ರಮುಖರಾದ ರಾಘವೇಂದ್ರ ನಾಡಗೌಡ ವಕೀಲರು, ಡಾ. ಗೌತಮ ಜಹಾಗೀರದಾರ್, ಡಿ.ಕೆ. ಕುಲಕರ್ಣಿ, ವ್ಯಾಸರಾಜ ಸಂತೆಕೆಲ್ಲೂರ, ಶ್ರೀನಿವಾಸ್ ಸಿರನೂರಕರ್, ವೆಂಕಟೇಶ್ ಮುದಗಲ್, ಬೆಂಕಿ ಭೀಮಣ್ಣ ಮೋತಕಪಲ್ಲಿ, ಪಾಂಡುರಂಗ ದೇಶಮುಖ, ರಂಗನಾಥ ದೇಸಾಯಿ, ಪ್ರಶಾಂತ ಕೊರಳ್ಳಿ, ರಾಘವೇಂದ್ರ ಕುಲಕರ್ಣಿ ಕೋಗನೂರ, ಮುರಳೀಧರ ಜಿ. ಕರಲಗಿಕರ್, ಅವಿನಾಶ ಕುಲಕರ್ಣಿ ರೇವೂರ, ವಿನೂತ ಜೋಶಿ, ಡಾ. ಲಕ್ಷ್ಮೀಕಾಂತ ಮೊಹರೀರ್, ಪ್ರಮೋದ ದೇಶಪಾಂಡೆ ಆಡಕಿ, ಕೃಷ್ಣ ಮಳ್ಳಿ, ವಿನೋದ ಕುಲಕರ್ಣಿ ಸಾತಖೇಡ, ಸುಬ್ಬರಾವ ಸುಬೇದಾರ್, ಸುರೇಶ ಕುಲಕರ್ಣಿ ಯಾಳವಾರ, ವಿನಾಯಕ ಕುಲಕರ್ಣಿ ಸೇರಿದಂತೆ . ಬ್ರಾಹ್ಮಣ ಸಮಾಜ, ಸತ್ಯಾತ್ಮ ಸೇನೆಯ ಹಿರಿಯರು, ನೂರಾರು ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.

ಕಲಬುರಗಿಯಿಂದಲೇ ಚಿಗುರೊಡೆದ ಜಯಂತಿ ಬೇಡಿಕೆ: ಕನ್ನಡಿಗ ಆಚಾರ್ಯರ ಮಧ್ವರ ಜಯಂತಿ ಆಚರಣೆಯ ಬೇಡಿಕೆ ಕಲಬುರಗಿ ನೆಲದಿಂದಲೇ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇಲ್ಲಿನ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಪ್ರಿಯಾಂಕ್‌ ಖರ್ಗೆಯವರನ್ನು ಕಂಡ ಜಿಲ್ಲಾ ಬ್ರಾಹ್ಮಣ ಸಮಾಜ, ಸತ್ಯಾತ್ಮ ಸೇನೆಯ ನಿಯೋಗ ಜಯಂತಿ ಆಚರಣೆಗೆ ಕೋರಿದಾಗ ಸಚಿವರು ನಿಯೋಗಕ್ಕೆ ಸಿಎಂ ಶಿವಕುಮಾರ್‌ ಬಳಿ ಕರೆದೊಯ್ದು ವಿಶಯ ಮಂಡನೆಗೆ ಅವಕಾಶ ಕಲ್ಪಿಸಿದ್ದರು. ಇದಾದ ನಂತರ 25 ದಿನದಲ್ಲಿ ಜಯಂತಿ ಆಚರಣೆಯ ಅಧಿಕೃತ ಆದೇಶ ಅ. 14 ರಂದು ಹೊರಬಿದ್ದು ಇಡೀ ಸಮಾಜಕ್ಕೆ ಸಂತಸ ಉಂಟುಮಾಡಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭ್ಯರ್ಥಿ ಶಶೀಲ್‌ ನಮೋಶಿಗೆ ಅಭೂತಪೂರ್ವ ಬೆಂಬಲ: ರವೀಂದ್ರ ಶೆಟ್ಟಿ
ಶ್ರದ್ದಾ ಭಕ್ತಿಯಿಂದ ದೇವರನ್ನು ಆರಾಧಿಸಿದರೆ ಯಶಸ್ಸು ಸಿದ್ದಿ