ಹಿಂದೂಗಳು ಜಾತಿಯೆನ್ನದೇ ಒಗ್ಗಟ್ಟಾಗಿ: ಮಾಜಿ ಸಂಸದ ಪ್ರತಾಪ್ ಸಿಂಹ

KannadaprabhaNewsNetwork |  
Published : Oct 22, 2026, 01:15 AM IST
ಎಂಪಿ  | Kannada Prabha

ಸಾರಾಂಶ

ರಾಜ್ಯದಲ್ಲಿ ಬಹುತೇಕ ತಾಲೂಕುಗಳು ಬರ ಪೀಡಿತವಾಗಿದ್ದು, ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡುವಲ್ಲಿ, ಯುವನಿಧಿ ನೀಡುವಲ್ಲಿ, ನಿರುದ್ಯೋಗ ಭತ್ಯೆ ಒದಗಿಸುವಲ್ಲಿ ಸರ್ಕಾರಿ ವಿಫಲವಾಗಿದ್ದು, 2.48 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿಮಾಡುವಲ್ಲಿ ವಿಫಲವಾಗಿದೆಯೆಂದು ಸರ್ಕಾರದ ವಿರುದ್ಧ ಗುಡುಗಿದರು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಹಿಂದೂಗಳು ಚುನಾವಣೆ ಬಂದರೆ ಒಕ್ಕಲಿಗರು, ಗೌಡರು, ಕುರುಬರು, ಎಸ್‌ಸಿ, ಎಸ್‌ಟಿ, ಬ್ರಾಹ್ಮಣ, ಈಡಿಗ ಸೇರಿ ನಾನಾ ಜಾತಿಗಳಾಗಿ ವಿಂಗಡಣೆ ಆಗುತ್ತಾರೆ. ಆದರೆ ಇಲ್ಲಿನ ದಸರಾ ಮಹೋತ್ಸವದಲ್ಲಿ ಎಲ್ಲಾ ಜಾತಿ ಮರೆತು ಒಂದಾಗಿ ಕುಳಿತಿರುವುದು ಸಂತೋಷದ ವಿಚಾರ. ಹೀಗೆಯೇ ಎಲ್ಲಾ ಸಂದರ್ಭದಲ್ಲೂ ಹಿಂದೂಗಳು ಒಗ್ಗೂಡಿ ಹಬ್ಬ ಹರಿದಿನಗಳನ್ನು ಆಚರಣೆ ಮಾಡಬೇಕೆಂದು ಮೈಸೂರು ಲೋಕಸಭಾ ಮಾಜಿ ಸಂಸದ ಪ್ರತಾಪ್ ಸಿಂಹ ನುಡಿದರು.

ನಗರದ ಪಾಲಿಟೆಕ್ನಿಕ್ ಮೈದಾನದ ಮಾತಾ ಭಾರತಿ ಮಂಗಳ ಮಂಟಪದಲ್ಲಿ ಆಯೋಜಿಸಿದ್ದ ದಸರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ನಾನು ಈ ಭಾಗಕ್ಕೆ ಬಂದಿರಲಿಲ್ಲ. ಆದರೆ ಇಲ್ಲಿನ ನನ್ನ ಸ್ನೇಹಿತರಾದ ಕೋಲಾರ ಲೋಕಸಭಾದ ಮಾಜಿ ಸಂಸದ ಎಸ್.ಮುನಿಸ್ವಾಮಿ, ಆಯೋಜಕರಾದ ಸತ್ಯನಾರಾಯಣ ಮಹೇಶ್ ಹಾಗೂ ಬಿಜೆಪಿ ಮುಖಂಡ ಜಿ.ಎನ್.ವೇಣುಗೋಪಾಲ್ ಚಿಂತಾಮಣಿಯಲ್ಲಿ ನಡೆಯುತ್ತಿರುವ ದಸರಾಗೆ ಕರೆ ನೀಡಿದ್ದರಿಂದ ಭಾಗವಹಿಸಿದ್ದೇನೆ ಎಂದರು.

ಮೈಸೂರಿನಲ್ಲಿ ದಸರಾ ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆಯುತ್ತೆ, ಆದರೆ ಚಿಂತಾಮಣಿಯಲ್ಲಿ ಎಲ್ಲ ಜಾತಿಯವರು ಒಗ್ಗೂಡಿ ಮಾಡುತ್ತಿದ್ದು ದೇವಿಯ ಆರಾಧನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದ್ದು, ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಶ್ರೇಯಸ್ಸು, ಚೈತನ್ಯ, ಸುಭಿಕ್ಷೆಯನ್ನು ಕೊಡಲೆಂದು ಆಶಿಸಿದರು.

ಸಿದ್ಧರಾಮಯ್ಯನವರು 8 ವರ್ಷಗಳ ಸುದೀರ್ಘ ಆಡಳಿತವನ್ನು ನಡೆಸಿದ್ದು ಅವರ ವಿರುದ್ಧ ನಡೆದಿರುವ ಷಡ್ಯಂತ್ರಗಳಿಗೆ ಅವರು ದೂರು ನೀಡಿದ್ದಾರೆ. ಸಿಎಂ. ಡಿ.ಕೆ.ಶಿವಕುಮಾರ್ ತನಿಖೆಗೆ ಆದೇಶಿಸಿದ್ದಾರೆ. ಅದನ್ನು ದೊಡ್ಡ ವಿಚಾರ ಮಾಡುವಂತಿಲ್ಲ ಎಂದರು.

ರಾಜ್ಯದಲ್ಲಿ ಬಹುತೇಕ ತಾಲೂಕುಗಳು ಬರ ಪೀಡಿತವಾಗಿದ್ದು, ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡುವಲ್ಲಿ, ಯುವನಿಧಿ ನೀಡುವಲ್ಲಿ, ನಿರುದ್ಯೋಗ ಭತ್ಯೆ ಒದಗಿಸುವಲ್ಲಿ ಸರ್ಕಾರಿ ವಿಫಲವಾಗಿದ್ದು, 2.48 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿಮಾಡುವಲ್ಲಿ ವಿಫಲವಾಗಿದೆಯೆಂದು ಸರ್ಕಾರದ ವಿರುದ್ಧ ಗುಡುಗಿದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಹಿಂದುತ್ವದ ವಿಚಾರಕ್ಕೆ ಬಂದಾಗ ಎಲ್ಲಾ ಜಾತಿಗಳನ್ನು ಮರೆತು ಒಗ್ಗೂಡಿ ದಸರಾ ಕಾರ್ಯಕ್ರಮ ಆಯೋಜಿಸಿದ್ದು, ನಾವೆಲ್ಲರೂ ಒಟ್ಟಾಗಿ ಸೇರುತ್ತೇವೆ ಎಂದು ನುಡಿದರು.

ಬಿಜೆಪಿ ಮುಖಂಡ ಜಿ.ಎನ್.ವೇಣುಗೋಪಾಲ್, ಸತ್ಯನಾರಾಯಣ ಮಹೇಶ್, ನಗರ ಘಟಕದ ನಿಕಟಪೂರ್ವ ಅಧ್ಯಕ್ಷ ಮಹೇಶ್ ಬೈ, ಕುರುಟಹಳ್ಳಿ ಡಾಬಾ ಮಂಜುನಾಥ್, ನಗರ ಘಟಕದ ಅಧ್ಯಕ್ಷ ಗೋವಿಂದರಾಜು, ನಿಕಟಪೂರ್ವ ಗ್ರಾಮಾಂತರ ಅಧ್ಯಕ್ಷ ಶಿವಾರೆಡ್ಡಿ, ಮಂಜುನಾಥಾಚಾರಿ, ಆಂಜನೇಯರೆಡ್ಡಿ, ಗಾಜಲಶಿವ ಸೇರಿ ಹಿಂದೂ ಬಾಂಧವರು, ಯುವಕರು, ಮಾತೆಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭ್ಯರ್ಥಿ ಶಶೀಲ್‌ ನಮೋಶಿಗೆ ಅಭೂತಪೂರ್ವ ಬೆಂಬಲ: ರವೀಂದ್ರ ಶೆಟ್ಟಿ
ಶ್ರದ್ದಾ ಭಕ್ತಿಯಿಂದ ದೇವರನ್ನು ಆರಾಧಿಸಿದರೆ ಯಶಸ್ಸು ಸಿದ್ದಿ