ನೃತ್ಯರೂಪಕದ ಮೂಲಕ ಕನ್ನಡ ನಾಡಿನ ಗತವೈಭವ ದರ್ಶನ

KannadaprabhaNewsNetwork |  
Published : Oct 22, 2026, 01:15 AM IST
ಚಂದನ್ ಶೆಟ್ಟಿ ಹಾಡು ನೃತ್ಯ | Kannada Prabha

ಸಾರಾಂಶ

ಪ್ರಭಾತ್ ಕಲಾವಿದರು ಪ್ರಸ್ತುತಪಡಿಸಿದ ಕರುನಾಡಿನ ವೈಭವ ನೃತ್ಯರೂಪಕವು ಕನ್ನಡ ನಾಡಿನ ಶಿಲ್ಪಕಲೆ, ಸಂಸ್ಕೃತಿ, ಪುರಾಣ, ಇತಿಹಾಸದ ಗತವೈಭವವನ್ನು ಪರಿಚಯಿಸಿತು.

ಕನ್ನಡಪ್ರಭ ವಾರ್ತೆ ತುಮಕೂರು

ಪ್ರಭಾತ್ ಕಲಾವಿದರು ಪ್ರಸ್ತುತಪಡಿಸಿದ ಕರುನಾಡಿನ ವೈಭವ ನೃತ್ಯರೂಪಕವು ಕನ್ನಡ ನಾಡಿನ ಶಿಲ್ಪಕಲೆ, ಸಂಸ್ಕೃತಿ, ಪುರಾಣ, ಇತಿಹಾಸದ ಗತವೈಭವವನ್ನು ಪರಿಚಯಿಸಿತು.

ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಉತ್ಸವದ ಅಮರಶಿಲ್ಪಿ ಚಕಣಾಚಾರಿ ಸಾಂಸ್ಕೃತಿಕ ವೈಭವ ಮಹಾವೇದಿಕೆಯಲ್ಲಿ ಸಂಜೆ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನವಾದ ಈ ನೃತ್ಯರೂಪಕವು ಪ್ರೇಕ್ಷಕರ ಮನಸೂರೆಗೊಂಡಿತು.

ನೃತ್ಯರೂಪಕದಲ್ಲಿ ಹೊಯ್ಸಳರ ಶೌರ್ಯ, ದಕ್ಷಿಣಾಪತೇಶ್ವರ ಶ್ರೀ ಕೃಷ್ಣದೇವರಾಯನ ವಿಜಯನಗರ ಸಾಮ್ರಾಜ್ಯದ ಕೀರ್ತಿ, ಪ್ರಪಂಚದಲ್ಲಿಯೇ ಅತೀ ಎತ್ತರದ ಏಕಶಿಲಾ ಮೂರ್ತಿ ಶ್ರವಣ ಬೆಳಗೊಳದ ಬಾಹುಬಲಿ ಕೆತ್ತನೆ, ಬೆಂದಕಾಳೂರಿನಿಂದ ರಾಜಧಾನಿ ಬೆಂಗಳೂರಾದ ಇತಿಹಾಸ, ಕನ್ನಡಿಗರ ಸತ್ಯ ಹಾಗೂ ನಿಷ್ಠೆಯನ್ನು ಸಾರುವ ಪುಣ್ಯಕೋಟಿ ಕತೆ, ತುಮಕೂರಿನ ಪ್ರಸಿದ್ಧ ದೇವರಾಯನದುರ್ಗ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ಪುರಾಣ, ನಾಮದ ಚಿಲುಮೆ, ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಡಾ: ಶಿವಕುಮಾರಸ್ವಾಮೀಜಿ ಹಾಗೂ ಶಿಕ್ಷಣ ಭೀಷ್ಮ ಎಚ್.ಎಂ. ಗಂಗಾಧರಯ್ಯ ಅವರ ಸ್ಮರಣೆ ಸೇರಿ ಕರುನಾಡಿನ ಇತಿಹಾಸ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಯಿತು. ಮೈತುಂಬಾ ಕಣ್ಣುಗಳಿರಬೇಕು:

ಅಮೆರಿಕ-ಅಮೆರಿಕ ಚಲನಚಿತ್ರದ ನೂರು ಜನ್ಮಕೂ ನೂರಾರು ಜನ್ಮಕೂ ಗೀತೆಯೊಂದಿಗೆ ವೇದಿಕೆಗೆ ಆಗಮಿಸಿದ ಖ್ಯಾತ ಚಲನಚಿತ್ರ ನಟ, ನಿರ್ದೇಶಕ ರಮೇಶ್ ಅರವಿಂದ್ ಮಾತನಾಡಿ, ತುಮಕೂರು ದಸರಾ ವೈಭವ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಮೈತುಂಬಾ ಕಣ್ಣುಗಳಿರಬೇಕೆಂದು ಅಭಿಪ್ರಾಯಪಟ್ಟರು.

ದಸರಾ ಉತ್ಸವದ ಸಾಂಸ್ಕೃತಿಕ ವೇದಿಕಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವರು, ಮೊಬೈಲ್ ಯುಗದಲ್ಲಿಯೂ ಇಷ್ಟೊಂದು ಸಂಖ್ಯೆಯಲ್ಲಿ ಸೇರಿರುವ ತುಮಕೂರಿನ ಜನತೆ ಉತ್ಸಾಹ ನೋಡುತ್ತಿದ್ದರೆ ಹಳೆಯ ಮೈಸೂರು ದಸರಾ ಎಷ್ಟೊಂದು ಸುಂದರ ಹಾಡಿನಂತೆ ತುಮಕೂರು ದಸರಾ ಎಷ್ಟೊಂದು ಸುಂದರ ಎಂದು ಹೊಸ ಹಾಡು ಬರೆಯುವಂತೆ ಭಾಸವಾಗುತ್ತದೆ ಎಂದು ಹೇಳಿದರು.

ದಸರಾ ಉತ್ಸವದ ಅಂಗವಾಗಿ ಇಲ್ಲಿ ಆಯೋಜಿಸಿರುವ ಫಲ-ಪುಷ್ಪ ಪ್ರದರ್ಶನ, ಕಲಾ ಮತ್ತು ಜ್ಞಾನ ವೈಭವ ಪ್ರದರ್ಶನ, ಹೆಲಿಕಾಪ್ಟರ್ ಪ್ರದರ್ಶನ, ಫ್ಲೋಟಿಂಗ್ ರೆಸ್ಟೋರೆಂಟ್, ಮತ್ತಿತರ ವಿನೂತನ ಕಾರ್ಯಕ್ರಮಗಳು ಜನಾಕರ್ಷಕವಾಗಿವೆ ಎಂದರು.

ಸಣ್ಣ-ಪುಟ್ಟ ತಪ್ಪು ಮಾಡಿದರೂ ಕ್ಷಮಿಸಿ ನಮ್ಮ ಆಸೆ-ಗುರಿಯನ್ನು ಈಡೇರಿಸಿಕೊಳ್ಳಲು ಅನುಗ್ರಹಿಸುವ ತಾಯಿ ಚಾಮುಂಡೇಶ್ವರಿ ದೇವಿಯು ಕಲ್ಪತರು ನಾಡಿನ ಎಲ್ಲರ ಕನಸನ್ನು ನನಸಾಗಿಸಲಿ ಎಂದು ಶುಭ ಹಾರೈಸಿದರು.

ತಾಯಿಯ ಪೂಜೆಗಿಂತ ಮಿಗಿಲಾದ ಮತ್ತೊಂದು ಪೂಜೆಯಿಲ್ಲ. ಮಹಿಳೆಯರಿಗೆ ಸ್ಥಾನಮಾನ, ಸುರಕ್ಷತೆ, ಪ್ರೋತ್ಸಾಹ ನೀಡುವುದು ದೇವಿಯನ್ನು ಪೂಜೆ ಮಾಡಿದಷ್ಟೇ ಪುಣ್ಯ ದೊರೆಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಇದಕ್ಕೂ ಮುನ್ನ ರ್ಯಾಂಪ್ ವಾಕ್ ಮೂಲಕ ಅಭಿಮಾನಿಗಳ ಬಳಿ ಸಾಗಿ ಹಸ್ತಲಾಘವ ಮಾಡಿದ್ದಲ್ಲದೆ, ದಸರಾ ಉತ್ಸವದ ಶುಭಾಶಯಗಳನ್ನು ಕೋರಿದರು. ಡಿಸಿಎಂ ಗೌರವ:

ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ಅವರು ದಸರಾ ಮಹೋತ್ಸವ ಯಶಸ್ಸಿಗೆ ಕಾರಣರಾದ ಅಧಿಕಾರಿಗಳು, ಅಧಿಕಾರೇತರರು, ಪಾಲಿಕೆ ಎಲ್ಲಾ ಪೌರಕಾರ್ಮಿಕರು, ಪಂಜಿನ ಕವಾಯತಿನಲ್ಲಿ ಪಾಲ್ಗೊಂಡ ಮಕ್ಕಳು ಹಾಗೂ ತರಬೇತಿದಾರರು, ದಸರಾ ಉತ್ಸವ ಆಚರಣೆ ವಿವಿಧ ಸಮಿತಿಗಳ ಸದಸ್ಯರು ಸೇರಿದಂತೆ ಮತ್ತಿತರರನ್ನು ಸನ್ಮಾನಿಸಿದರು.

ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್, ಉಪಮುಖ್ಯಮಂತ್ರಿಗಳ ಪತ್ನಿ ಕನ್ನಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜಾ, ಪಾಲಿಕೆ ಆಯುಕ್ತೆ ಶುಭ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ತಹಸೀಲ್ದಾರ್ ರಾಜೇಶ್ವರಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಬಹುಮುಖ ಪ್ರತಿಭೆ ರಮೇಶ್ ಅರವಿಂದ್ ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ಮಾತನಾಡಿ, ಚಿತ್ರರಂಗದಲ್ಲಿ ಮಾನವೀಯತೆ ಮೌಲ್ಯವುಳ್ಳ ಕಲಾಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಕನ್ನಡದ ಏಕೈಕ ಬಹುಮುಖ ಪ್ರತಿಭೆ ರಮೇಶ್ ಅರವಿಂದ್ ಅವರು ಎಂದರೆ ತಪ್ಪಾಗಲಾರದು. ಇವರು ತಮ್ಮ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಪ್ರಖ್ಯಾತಿ ಗಳಿಸಲು ದೇವಿ ಆಶೀರ್ವದಿಸಲಿ ಎಂದು ಶುಭ ಹಾರೈಸಿದರು. ನಂತರ ಸಂಜಿತ್ ಹೆಗ್ಡೆ ಮತ್ತು ತಂಡದಿಂದ ಏರ್ಪಡಿಸಿದ್ದ ಸಂಗೀತ ರಸಸಂಜೆ ಕಾರ್ಯಕ್ರಮ ಪ್ರೇಕ್ಷಕರ ಮನರಂಜಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭ್ಯರ್ಥಿ ಶಶೀಲ್‌ ನಮೋಶಿಗೆ ಅಭೂತಪೂರ್ವ ಬೆಂಬಲ: ರವೀಂದ್ರ ಶೆಟ್ಟಿ
ಶ್ರದ್ದಾ ಭಕ್ತಿಯಿಂದ ದೇವರನ್ನು ಆರಾಧಿಸಿದರೆ ಯಶಸ್ಸು ಸಿದ್ದಿ