ಸದಾಚಾರ, ಮೌಲ್ಯ ಮತ್ತು ಸೌಹಾರ್ದದಿಂದ ಸತ್ಯಯುಗ ಸ್ಥಾಪನೆ ಸಾಧ್ಯ: ಬಿ.ಎಲ್. ಸಂತೋಷ್

KannadaprabhaNewsNetwork |  
Published : Oct 22, 2026, 01:15 AM IST
    ಸಿಕೆಬಿ-5  ತಾಲ್ಲೂಕಿನ  ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ನಡೆದ ಮಹಾ ರುದ್ರ ಯಾಗದ ಪೂರ್ಣಾಹುತಿಯನ್ನು  ಬಿ.ಎಲ್. ಸಂತೋಷ್ ನೆರವೇರಿಸಿದರು  | Kannada Prabha

ಸಾರಾಂಶ

ಸಮಾಜದಲ್ಲಿ ಮೌಲ್ಯಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕೇವಲ ಪ್ರೇಕ್ಷಕರಾಗಿ ಉಳಿಯದೆ, ಧರ್ಮವನ್ನು ತಮ್ಮ ಬದುಕಿನಲ್ಲಿ ಸಕ್ರಿಯವಾಗಿ ಆಚರಿಸಬೇಕು. ಒಳ್ಳೆಯ ಉದ್ದೇಶದಿಂದ ಸತ್ಕರ್ಮಗಳನ್ನು ನಿರಂತರವಾಗಿ ಮಾಡುತ್ತಾ ಧರ್ಮದ ಹಾದಿಯಲ್ಲಿ ನಡೆಯುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಹುದು ಎಂದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಮಾಜದಲ್ಲಿ ಸದಾಚಾರ, ಮಾನವೀಯ ಮೌಲ್ಯಗಳು ಮತ್ತು ಸೌಹಾರ್ದತೆ ನೆಲೆಗೊಂಡರೆ ಸತ್ಯಯುಗವನ್ನು ಸ್ಥಾಪಿಸಲು ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅಭಿಪ್ರಾಯಪಟ್ಟರು.

ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಮಹೋತ್ಸವದ ಕೊನೆಯ ದಿನವಾದ ಬುಧವಾರ ನಡೆದ ಮಹಾರುದ್ರ ಯಾಗದ ಪೂರ್ಣಾಹುತಿಯಲ್ಲಿ ಭಾಗವಹಿಸಿ ಮಾತನಾಡಿ, ಪ್ರಪಂಚ, ಪ್ರಕೃತಿ ಮತ್ತು ಮಾನವ ನಾಗರಿಕತೆ ಮೂಲತಃ ಒಳಿತಿನ ಪರವಾಗಿವೆ. ಆದರೆ ಮಾನವನ ವಿವಿಧ ಕರ್ಮಗಳಿಂದಾಗಿ ಕೆಲವೊಮ್ಮೆ ಕೆಟ್ಟತನ ಮತ್ತು ಅಧರ್ಮ ತಲೆದೂರುತ್ತವೆ. ಅಂತಿಮವಾಗಿ ಸತ್ಯ, ದೈವತ್ವ ಮತ್ತು ಧರ್ಮಕ್ಕೇ ಜಯ ದೊರೆಯುತ್ತದೆ ಎಂದು ಹೇಳಿದರು.

ಸಮಾಜದಲ್ಲಿ ಮೌಲ್ಯಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕೇವಲ ಪ್ರೇಕ್ಷಕರಾಗಿ ಉಳಿಯದೆ, ಧರ್ಮವನ್ನು ತಮ್ಮ ಬದುಕಿನಲ್ಲಿ ಸಕ್ರಿಯವಾಗಿ ಆಚರಿಸಬೇಕು. ಒಳ್ಳೆಯ ಉದ್ದೇಶದಿಂದ ಸತ್ಕರ್ಮಗಳನ್ನು ನಿರಂತರವಾಗಿ ಮಾಡುತ್ತಾ ಧರ್ಮದ ಹಾದಿಯಲ್ಲಿ ನಡೆಯುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಹುದು ಎಂದರು.

ವಿಜ್ಞಾನದಲ್ಲಿ ಶುದ್ಧ ವಿಜ್ಞಾನ ಮತ್ತು ಅನ್ವಯಿಕ ವಿಜ್ಞಾನ ಇರುವಂತೆ ಧರ್ಮದಲ್ಲಿಯೂ ಶುದ್ಧ ಧರ್ಮ ಮತ್ತು ಅನ್ವಯಿಕ ಧರ್ಮಗಳಿವೆ. ಶುದ್ಧ ಧರ್ಮವು ವಿಚಾರ ಮತ್ತು ತತ್ವಗಳನ್ನು ಪ್ರತಿಪಾದಿಸಿದರೆ, ಅನ್ವಯಿಕ ಧರ್ಮವು ಅವುಗಳನ್ನು ಬದುಕಿನಲ್ಲಿ ಆಚರಣೆಗೆ ತರುವುದನ್ನು ಉದ್ದೇಶಿಸುತ್ತದೆ. ಸನಾತನ ಹಿಂದೂ ಧರ್ಮವು ಕೇವಲ ಬೋಧನೆಗೆ ಸೀಮಿತವಾಗದೆ, ಧಾರ್ಮಿಕ ತತ್ವಗಳ ಪ್ರಾಯೋಗಿಕ ಆಚರಣೆಗೂ ಮಹತ್ವ ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ನಿರ್ಮಲ್ ಕುಮಾರ್ ಸುರಾನ ಹಾಗೂ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭ್ಯರ್ಥಿ ಶಶೀಲ್‌ ನಮೋಶಿಗೆ ಅಭೂತಪೂರ್ವ ಬೆಂಬಲ: ರವೀಂದ್ರ ಶೆಟ್ಟಿ
ಶ್ರದ್ದಾ ಭಕ್ತಿಯಿಂದ ದೇವರನ್ನು ಆರಾಧಿಸಿದರೆ ಯಶಸ್ಸು ಸಿದ್ದಿ