ತುಮಕೂರು:ಮನೆಗಳ್ಳತನ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸರು ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದ್ದು ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ನೂತನ ಪ್ರಯತ್ನ ಇದಾಗಿದೆ.ಬೀಗ ಹಾಕಿ ಪ್ರಯಾಣ ಮಾಡುವ ನಿವಾಸಿಗರಿಗೆಂದೆ ಹೊಸ ಯೋಜನೆ ಜಾರಿ ಮಾಡಿದ್ದು ಮನೆಗಳ್ಳತನ ನಿಯಂತ್ರಿಸಲು ಜಿಲ್ಲಾ ಪೊಲೀಸರಿಂದ ಸಿಸಿಟಿವಿ ಮೊರೆ ಹೋಗಿದ್ದು ಆ್ಯಪ್ ಮುಖಾಂತರ ರಿಜಿಸ್ಟರ್ ಮಾಡಿಕೊಂಡವರ ಮನೆ ಮೇಲೆ ಖಾಕಿ ಕಣ್ಣು ಇಡಲಿದೆ.ಸ್ಮಾರ್ಟ್ ಸಿಟಿ ಯೋಜನೆಯಡಿ 250 ಸಿಸಿ ಕ್ಯಾಮರಗಳನ್ನು ಪಡೆದು ಪೊಲೀಸರ ಹೊಸ ಯೋಜನೆ ರೂಪಿಸಿದ್ದಾರೆ. ಎಐ ಜೊತೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಆಪ್ ಅನ್ನು ಸಿದ್ಧಪಡಿಸಿದ್ದು ತುಮಕೂರು ನಿವಾಸಿಗಳಿಗೆಂದೇ ಈ ಆಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.ದೂರದ ಪ್ರಯಾಣ ಮಾಡುವ ನಿವಾಸಿಗಳಿಗಾಗಿ ಆ್ಯಪ್ ಮೂಲಕ ಲಾಗಿನ್ ಆಗಿ ರಿಕ್ವೆಸ್ಟ್ ಆಧರಿಸಿ ಮನೆಗೆ ಸಿಸಿಟಿವಿಯನ್ನು ಪೊಲೀಸರು ಅಳವಡಿಸುವರು. ವೈರಲೆಸ್ ಕ್ಯಾಮರಗಳನ್ನು ವೈಫೈ ಮುಖಾಂತರ ಆ್ಯಕ್ಟೀವ್ ಮಾಡಲಿರುವ ಪೊಲೀಸರು ಬಳಿಕ ಆ ಸಿಸಿಟಿವಿಗಳನ್ನು ತುಮಕೂರು ಎಸ್ಪಿ ಕಚೇರಿ ಬಳಿಯ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ದಿನದ 24 ಗಂಟೆ ಕ್ಯಾಮರಾ ಮೂಲಕ ಮನೆಯನ್ನು ಪೊಲೀಸರು ನಿಗಾ ವಹಿಸಲಿದ್ದಾರೆ.ಅನುಮಾನಸ್ಪದ ಬೆಳವಣಿಗೆಯಾದಲ್ಲಿ ಕೂಡಲೇ ಪೊಲೀಸರಿಗೆ ಅಲರ್ಟ್ ಬರಲಿದೆ. ಕೂಡಲೇ ಸ್ಮಾರ್ಟ್ ಸಿಸಿಟಿ ಸಿಬ್ಬಂದಿಯಿಂದ ಸ್ಥಳೀಯ ಪೊಲೀಸರಿಗೆ ಮಾಹಿತಿ ಬರುವುದು. ಮಾಹಿತಿ ಆಧರಿಸಿ ಬೀಗ ಹಾಕಿದ ಮನೆಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.ಆ್ಯಪ್ ಹೊರತಾಗಿ ಸಹ ಮನೆ ಮನೆಗೆ ಪೊಲೀಸ್ ಯೋಜನೆ ಅಡಿ ನಿಯೋಜನೆಗೊಂಡ ಸಿಬ್ಬಂದಿಗೆ ಮಾಹಿತಿ ನೀಡಿದರೂ ಸಿಸಿಟಿವಿ ಅಳವಡಿಸಲಿದ್ದಾರೆ.