ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪತ್ರಿಕಾ ವಿತರಕರು, ಪತ್ರಕರ್ತರ ಮೇಲೂ ದಾಳಿ:ಶುಕ್ರವಾರ ಬೆಳಗ್ಗೆ ಎಂದಿನಂತೆ 6 ಗಂಟೆ ಸುಮಾರಿಗೆ ಕಾಲೇಜು ಸರ್ಕಲ್ ಹತ್ತಿರ ಪತ್ರಿಕೆ ವಿತರಣೆ ಮಾಡುತ್ತಿದ್ದ ಪತ್ರಕರ್ತ ಎಚ್.ಎಸ್. ಘಂಟಿ ಅವರ ಮೇಲೆ ಮಂಗ ದಾಳಿ ಮಾಡಿ ಕಚ್ಚಿದ್ದು, ತಪ್ಪಿಕೊಸಿಕೊಳ್ಳಲು ಓಡಿದರೂ ಬೆನ್ನಿಟ್ಟಿದೆ. ಘಟನೆಯಲ್ಲಿ ಅವರ ಎಡಗೈನ ಭುಜದ ಕೀಲು ಮುರಿದಿದೆ. ಅದೇ ಸಮಯದಲ್ಲಿ ಪತ್ರಿಕೆ ವಿತರಣೆ ಮಾಡುತ್ತಿದ್ದ ಪತ್ರಿಕಾ ವಿತರಕ ಶಂಕರ ಗಣಾಚಾರಿ, ಗುಂಡಪ್ಪ ಎಂಬುವವರ ಮೇಲೂ ಮಂದ ದಾಳಿ ನಡೆಸಿ ತೀವ್ರತರ ಗಾಯಗೊಳಿಸಿದೆ. ರಸ್ತೆಯ ಮೇಲಿನ ಅಂಗಡಿ ಹಾಗೂ ಮನೆಯ ವಠಾರದಲ್ಲಿ ಕೆಲಸ ಮಾಡಿಕೊಂಡು ಕುಳಿತಿದ್ದ ಜನರ ಮೇಲೂ ಅಟ್ಯಾಕ್ ಮಾಡಿದೆ. ಮಂಗನ ದಾಳಿಯಿಂದ ಸುಮಾರು 45ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಎರಡು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಮಂಗನನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದರೂ ಯಶಸ್ವಿಯಾಗಿರಲಿಲ್ಲ. ಜನತೆಯ ಒತ್ತಡಕ್ಕೆ ಮಣಿದು ಶುಕ್ರವಾರ ಗದಗ ಪ್ರಾಣಿ ಸಂಗ್ರಹಾಲಯದ ವೈದ್ಯರನ್ನು ಕರೆಸಿದ್ದರು. ವೈದ್ಯರು ಕೆಲವೇ ನಿಮಿಷಗಳಲ್ಲಿ ಅರಿವಳಿಕೆ ಚುಚ್ಚು ಮದ್ದು ಹಾರಿಸಿದ್ದು, ಮಂಗ ಮೂರ್ಛೆಹೋದ ಬಳಿಕ ಬಲೆಯಲ್ಲಿ ಹಾಕಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ನಗರಸಭೆ ವಾಹನದಲ್ಲಿ ಹಾಕಿಕೊಂಡು ಹೋದರು.ಅರಣ್ಯ ಅಧಿಕಾರಿಗಳು ಮಹೇಶ ಮರೆಣ್ಣವರ, ಮಹೇಶ ಕಲ್ಲೂರ, ಆರ್.ಎಸ್.ಹೊಸಮನಿ, ಬಿ.ಎಸ್.ಬಡಿಗೇರ, ಪಿ.ಎಸ್.ತುಂಗಳ, ಜಿ.ಎಸ್.ಮಾಲಗತ್ತಿಮಠ, ಶಿವರಾಜ ಸಜ್ಜನ, ಶರಣು ಹಚ್ಯಾಳ, ಭದ್ರು ಸಂಕನ್ನವರ, ನಾಗರಾಜ ಹೊಸಮನಿ, ಹಣಮಂತ ತಿಮ್ಮಣ್ಣವರ ಮತ್ತು ಪೋಲೀಸ್ ಸಿಬ್ಬಂದಿ ಇದ್ದರು. ಮೂರು ದಿನಗಳಿಂದ ಜನರನ್ನು ಹೈರಾಣ ಮಾಡಿದ್ದ ಕೋತಿ ಸೆರೆಸಿಕ್ಕಿದ್ದರಿಂದ ಜನರು ನೆಮ್ಮದಿಯ ನಿಟ್ಟುಸಿಬಿಟ್ಟರು. ಬುಧವಾರದಿಂದ ಮಂಗ ಕಚ್ಚಿದ ಪ್ರಕರಣಗಳು ಕಂಡು ಬಂದವು. ಸಂಬಂಧಪಟ್ಟ ಇಲಾಖೆಯವರು ಕಾರ್ಯಾಚರಣೆ ಮಾಡಿ ಮಂಗನನ್ನು ಸೆರೆ ಹಿಡಿದಿದ್ದರೆ ಸುಮಾರು 40ರಷ್ಟು ಜನರನ್ನು ರಕ್ಷಿಸಬಹುದಿತ್ತು. ಅದರೆ ತಡವಾಗಿ ಎಚ್ಚೆತ್ತು ಅರಣ್ಯ ಇಲಾಖೆಯವರು ಗದಗದಿಂದ ವೈದ್ಯರ ತಂಡ ಕರೆಯಿಸಿ ಮಂಗನನ್ನು ಸೆರೆಹಿಡಿದರು. ಇದು ಬುಧವಾರ ಇಲ್ಲವೇ ಗುರುವಾರವೇ ಆಗಬೇಕಿತ್ತು.
-ಡಾ.ನಾಗರಾಜ ಕುರಿ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಗುಳೇದಗುಡ್ಡ
- ಮಹೇಶ ಮರೆಣ್ಣವರ್ ವಲಯ ಅರಣ್ಯಾಧಿಕಾರಿ ಬಾದಾಮಿ