ಕಾಫಿನಾಡಿನಲ್ಲಿ ಈಗ ಮಂಗನ ಕಾಯಿಲೆ ಆತಂಕ

KannadaprabhaNewsNetwork |  
Published : Jan 31, 2026, 01:15 AM IST
ಚಿತ್ರದುರ್ಗ  ಮೂರನೇ ಪುಟಕ್ಕೆ  | Kannada Prabha

ಸಾರಾಂಶ

ಚಿಕ್ಕಮಗಳೂರುಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಮಂಗನ ಕಾಯಿಲೆಗೆ (ಕೆಎಫ್‌ಡಿ) 29 ವರ್ಷ ಯುವಕ ಬಲಿಯಾದ ವರದಿಯಾಗುತ್ತಿದ್ದಂತೆ ನೆರೆಯ ಜಿಲ್ಲೆ ಚಿಕ್ಕಮಗಳೂರಿನಲ್ಲಿ ದಿನದಿಂದ ದಿನಕ್ಕೆ ಕೆಎಫ್‌ಡಿ ಪ್ರಕರಣ ದೃಢಪಡುತ್ತಿರುವುದು ಆತಂಕ ಹೆಚ್ಚಿಸಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಮಂಗನ ಕಾಯಿಲೆಗೆ (ಕೆಎಫ್‌ಡಿ) 29 ವರ್ಷ ಯುವಕ ಬಲಿಯಾದ ವರದಿಯಾಗುತ್ತಿದ್ದಂತೆ ನೆರೆಯ ಜಿಲ್ಲೆ ಚಿಕ್ಕಮಗಳೂರಿನಲ್ಲಿ ದಿನದಿಂದ ದಿನಕ್ಕೆ ಕೆಎಫ್‌ಡಿ ಪ್ರಕರಣ ದೃಢಪಡುತ್ತಿರುವುದು ಆತಂಕ ಹೆಚ್ಚಿಸಿದೆ.

ಕಳೆದ 25 ರಂದು ತೀರ್ಥಹಳ್ಳಿ ತಾಲೂಕಿನ ಯುವಕನೊಬ್ಬ ಮಂಗನ ಕಾಯಿಲೆಯಿಂದ ಮೃತಪಟ್ಟಿ ವರದಿಯಾಗಿತ್ತು. ಈ ನಡುವೆ ಕಾಫಿನಾಡು ಚಿಕ್ಕಮಗಳೂರಿನ ಎನ್‌,ಆರ್‌.ಪುರ ತಾಲೂಕು ವ್ಯಾಪ್ತಿಯಲ್ಲಿ ಬರೋಬ್ಬರಿ 9 ಮಂಗನ ಕಾಯಿಲೆ ಸೋಂಕು ಪ್ರಕರಣ ಪತ್ತೆ ಯಾಗಿರುವುದು ಇಡೀ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗುವುದಕ್ಕೆ ಕಾರಣವಾಗಿದೆ.

ಮಂಗನ ಕಾಯಿಲೆ ಸೋಂನಕಿ ಲಕ್ಷಣ ಕಂಡು ಬರುವ ರೋಗಿಗಳ ರಕ್ತ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಮಲೆನಾಡು ಭಾಗದ ತಾಲೂಕುಗಳಾದ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯಿಂದ ಪರೀಕ್ಷೆ ನಡೆಸಲಾಗುತ್ತಿದೆ.

ಈವರೆಗೆ ಒಟ್ಟು 595 ಮಂದಿ ರಕ್ತ ಪರೀಕ್ಷೆ ಮಾಡಲಾಗಿದೆ. ಈ ಪೈಕಿ ಎನ್‌.ಆರ್‌.ಪುರ ತಾಲೂಕಿನಲ್ಲಿ ಮಾತ್ರ ಮಂಗನ ಕಾಯಿಲೆ ಸೋಂಕು ದೃಢಪಟ್ಟ 9 ಮಂದಿಯ ಪೈಕಿ 6 ಮಂದಿ ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗಿ ತೆರಳಿದ್ದಾರೆ. ಇನ್ನುಳಿದ ಮೂವರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡಿಸೆಂಬರ್‌ನಲ್ಲಿ ಮೊದಲ ಪ್ರಕರಣ ಪತ್ತೆ

ಇತ್ತೀಚಿನ ವರ್ಷಗಳಲ್ಲಿ ಕಾಫಿನಾಡಿನಲ್ಲೂ ಮಂಗನಕಾಯಿಲೆ ಸೋಂಕು ಹೆಚ್ಚಾಗಲಾರಂಭಿಸಿದೆ. ಮಲೆನಾಡು ಭಾಗದಲ್ಲಿ ಅದರಲ್ಲೂ ತೀರ್ಥಹಳ್ಳಿ ತಾಲೂಕಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿಯೇ ಇದುವರೆಗೆ ಹೆಚ್ಚು ಪ್ರಕರಣಗಳು ಕಂಡು ಬರುತ್ತಿವೆ.

ಸಾಮಾನ್ಯವಾಗಿ ಮಳೆಗಾಲ ಮುಕ್ತಾಯದ ಬಳಿಕ ಮಂಗನ ಕಾಯಿಲೆ ಆರಂಭಗೊಳ್ಳಲಿದೆ. ಕಳೆದ ಡಿಸೆಂಬರ್‌ನಲ್ಲಿ ಪ್ರಥಮ ಪ್ರಕರಣ ಕೊಪ್ಪ ತಾಲೂಕಿನಲ್ಲಿ ಪತ್ತೆಯಾಗಿತ್ತು. ತಾಲೂಕಿನ ಕಮ್ಮರಡಿ ಗ್ರಾಮದ 40 ವರ್ಷದ ವ್ಯಕ್ತಿ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಅವರನ್ನು ಕೆಎಫ್‌ಡಿ ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಕೆಎಫ್‌ಡಿ ವೈರಸ್ ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರನ್ನು ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ವ್ಯಕ್ತಿ ಚೇತರಿಸಿಕೊಂಡಿದ್ದಾರೆ.

ಮನೆ ಮನೆಗೆ ಭೇಟಿ

ಜಿಲ್ಲೆಯಲ್ಲಿ ಮಂಗನಕಾಯಿಲೆಯನ್ನು ಸಮರ್ಪಕವಾಗಿ ನಿಯಂತ್ರಿಸುವ ಉದ್ದೇಶದಿಂದ ಈಗಾಗಲೇ ಆರೋಗ್ಯ ಇಲಾಖೆ ಎಲ್ಲ ರೀತಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಆಶಾ ಕಾರ್ಯಕರ್ತೆಯರು ಮಲೆನಾಡು ಭಾಗದಲ್ಲಿ ಮನೆಮನೆಗೆ ತೆರಳಿ ಜನರಿಗೆ ಮಂಗನಕಾಯಿಲೆ ಬಗ್ಗೆ ಅರಿವು ಮೂಡಿಸಲಾರಂಭಿಸಿದ್ದಾರೆ. ಅಲ್ಲದೆ ಯಾರಿಗಾದರೂ ಜ್ವರ ಕಂಡು ಬಂದಲ್ಲಿ ಅವರನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆತಂದು ಕೆಎಫ್‌ಡಿ ತಪಾಸಣೆ ಮಾಡಿಸಲಾಗುತ್ತಿದೆ. ಇದಲ್ಲದೆ ಮಂಗನ ಕಾಯಿಲೆ ನಿಯಂತ್ರಿಸಲು ಮಲೆನಾಡಿನ ಜನ ಯಾವೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಆಶಾ ಕಾರ್ಯಕರ್ತೆಯರು ಅರಿವು ಮೂಡಿಸಲು ಕೆಲಸ ಮಾಡುತ್ತಿದ್ದಾರೆ.---ಬಾಕ್ಸ್---

ಉಣ್ಣೆಗಳ ಸಂಗ್ರಹ

ಹೆಚ್ಚು ಬಿಸಿಲು ಇದ್ದಾಗ ಉಣ್ಣೆಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ಸಂಚಾರ ನಡೆಸುತ್ತವೆ. ಆಗ ಕೆಎಫ್‌ಡಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚುತ್ತದೆ. ಕೆಎಫ್‌ಡಿ ಪತ್ತೆಗೆ ಉಣ್ಣೆಗಳನ್ನು ಸಂಗ್ರಹ ಮಾಡಿ ಅವುಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈವರೆಗೆ 223 ಉಣ್ಣೆ ಸಂಗ್ರಹಿಸಿ ಕೆಎಫ್‌ಡಿ ವೈರಸ್ ಪತ್ತೆಗೆ ಒಳಪಡಿಸಲಾಗಿದೆ, ಆದರೆ, ಯಾವುದೇ ಸೋಂಕು ದೃಢಪಟ್ಟಿಲ್ಲ.

ಅಲ್ಲದೆ ಇದುವರೆಗೆ ಜಿಲ್ಲೆಯಲ್ಲಿ ಅಸಹಜವಾಗಿ ಮೃತಪಟ್ಟ ಎರಡು ಮಂಗಗಳ ಶವ ಪರೀಕ್ಷೆ ಒಳಪಡಿಸಲಾಗಿದೆ. ಅಲ್ಲಿಯೂ ಸೋಂಕು ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

----ಬಾಕ್ಸ್----

ಕಳೆದ ಬಾರಿ ಮೂವರ ಬಲಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಬಾರಿ ತಲ್ಲಣವನ್ನೇ ಮೂಡಿಸಿದ್ದ ಮಹಾಮಾರಿ ಮಂಗನಕಾಯಿಲೆ ಮೂವರನ್ನು ಬಲಿ ಪಡೆದಿತ್ತು. ಕಳೆದ ವರ್ಷ ಜಿಲ್ಲೆಯ 94 ಮಂದಿಯಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿತ್ತು. ಇದರಲ್ಲಿ ಮೂವರು ಚಿಕಿತ್ಸೆ ಫಲಕಾರಿ ಯಾಗದೇ ಮೃತಪಟ್ಟಿದ್ದರು. ಅದರಲ್ಲೂ ಕೊಪ್ಪ ತಾಲೂಕಿನಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದವು. ಈ ಬಾರಿ ಎನ್‌ಆರ್‌ಪುರ ತಾಲೂಕಿನ ಕಾಣಿಸಿಕೊಂಡಿರುವುದು ಆತಂಕ ಹಚ್ಚಿಸಿದೆ.

--ಕೋಟ್......

ಜಿಲ್ಲೆಯಲ್ಲಿ 9 ಕೆಎಫ್‌ಡಿ ಪ್ರಕರಣ ಕಂಡು ಬಂದಿರುವ ಹಿನ್ನೆಲೆಯಲ್ಲಿ ಎನ್.ಆರ್.ಪುರ ತಾಲೂಕು ಸೇರಿದಂತೆ ಸೋಂಕು ಕಂಡು ಬಂದಿರುವ ಎಲ್ಲಾ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಯಾರಿಗಾದರೂ ಜ್ವರ ಕಂಡು ಬಂದಲ್ಲಿ ಅವರನ್ನು ಕೂಡಲೇ ಕೆಎಫ್‌ಡಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ನಮ್ಮಲ್ಲಿ ಡಾಂಪ ಎಣ್ಣೆ ಅಗತ್ಯಕ್ಕೆ ತಕ್ಕಷ್ಟು ದಾಸ್ತಾನಿದ್ದು, ಅಗತ್ಯವಿದ್ದರೆ ವಿತರಿಸಲಾಗುವುದು.

- ಡಾ.ಭರತ್‌ಕುಮಾರ್,

ಜಿಲ್ಲಾ ಸರ್ವೇಕ್ಷಣಾಧಿಕಾರಿ---ಬಾಕ್ಸ್‌---

ಎಲ್ಲಿ ಎಷ್ಟು ಪ್ರಕರಣ ದೃಢ

ತಾಲೂಕುಪರೀಕ್ಷೆಸೋಂಕು, ದೃಢ

ಚಿಕ್ಕಮಗಳೂರು112, 0

ಮೂಡಗಿರಿ2,0

ಕೊಪ್ಪ359,0

ಎನ್‌ಆರ್‌ಪುರ82,9

ಶೃಂಗೇರಿ40,0

ಒಟ್ಟು595,9

--ಫೋಟೋ ( ಸಂಬಂಧಪಟ್ಟ ಸಂಗ್ರಹ ಫೋಟೋ ಬಳಸುವುದು)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ನಂದಿಗಿರಿ ಪ್ರದಕ್ಷಿಣೆ: ಸಂಸದ ಡಾ. ಸುಧಾಕರ್
ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಯಶಸ್ವಿ