ಮುಂಡರಗಿಯಲ್ಲಿ ಮುಂಗಾರು ಬಿತ್ತನೆ ಬೀಜ ವಿತರಣೆ

KannadaprabhaNewsNetwork |  
Published : May 27, 2026, 02:45 AM IST
ಮುಂಡರಗಿ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಬೆಳೆವಾರು ರಿಯಾಯಿತಿ ದರದ ವಿವರ ನಿಗದಿಪಡಿಸಲಾಗಿದೆ.

ಮುಂಡರಗಿ: ಮುಂಗಾರು ಹಂಗಾಮಿನ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಕಾರ್ಯಕ್ರಮ ಸೋಮವಾರ ತಾಲೂಕಿನ ರೈತ ಸಂಪರ್ಕ ಕೇಂದ್ರ ಹಾಗೂ ಡಂಬಳದಲ್ಲಿ ತಾಲೂಕು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪ ಅಂಕದ ಹಾಗೂ ಮುಂಡರಗಿ ರೈತ ಸಂಪರ್ಕ ಕೇಂದ್ರದಲ್ಲಿ ತಾಲೂಕು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಸದಸ್ಯರಾದ ಅಂಬವ್ವ ಕಟ್ಟಿಮನಿ, ಈಶ್ವರಪ್ಪ ಮಲಶೆಟ್ಟಿ ಚಾಲನೆ ನೀಡಿದರು.

ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಬೆಳೆವಾರು ರಿಯಾಯಿತಿ ದರದ ವಿವರ ನಿಗದಿಪಡಿಸಲಾಗಿದೆ. ಹೆಸರು 5 ಕೆಜಿಗೆ ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ 635 ರು., ಸಾಮಾನ್ಯ ವರ್ಗದ ರೈತರಿಗೆ ಸರ್ಕಾರದ ಸಹಾಯಧನ 125 ರು., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಸರ್ಕಾರದ ಸಹಾಯಧನ 187 ರು., ಸಾಮಾನ್ಯ ವರ್ಗದ ರೈತರ ವಂತಿಕೆ 510 ರು., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರ ವಂತಿಕೆ 448 ರು. ಇದೆ.

ತೊಗರಿ 5 ಕೆಜಿಗೆ ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ 660 ರು., ಸಾಮಾನ್ಯ ವರ್ಗದ ರೈತರಿಗೆ ಸರ್ಕಾರದ ಸಹಾಯಧನ 125 ರು., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಸರ್ಕಾರದ ಸಹಾಯಧನ 187 ರು., ಸಾಮಾನ್ಯ ವರ್ಗದ ರೈತರ ವಂತಿಕೆ 535 ರು., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರ ವಂತಿಕೆ 473 ರು. ಇದೆ.

ರೈತರ ವಾಸ್ತವಿಕ ಹಿಡುವಳಿ ಅಥವಾ ಗರಿಷ್ಠ ಎರಡು ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ಎಲ್ಲ ಬಿತ್ತನೆ ಬೀಜಗಳಿಗೆ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು. ಒಬ್ಬ ರೈತರಿಗೆ ಒಂದು ಬೆಳೆಯ ಮೂರು ಎಕರೆ ವಿಸ್ತೀರ್ಣಕ್ಕೆ ಮಾತ್ರ ಬಿತ್ತನೆ ಬೀಜ ನೀಡಲಾಗುವುದು. ಇನ್ನು ಎರಡು ಎಕರೆ ಜಮೀನಿಗೆ ಅನ್ಯ ಬೆಳೆಯ ಬೀಜವನ್ನು ಪಡೆಯಬಹುದು. ರೈತರು ತಮ್ಮ ಜಮೀನಿನಲ್ಲಿ ಬೆಳೆ ವೈವಿಧ್ಯತೆಯನ್ನು ರೂಢಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ಸರ್ಕಾರ ಈ ನಿಯಮವನ್ನು ರೂಪಿಸಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮುಂಡರಗಿ ಹಾಗೂ ಡಂಬಳ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಆತ್ಮ ಯೋಜನೆಯ ಸಿಬ್ಬಂದಿ, ಕೃಷಿ ಸಂಜೀವಿನಿ ಸಿಬ್ಬಂದಿ ಹಾಗೂ ರೈತರು, ರೈತ ಮಹಿಳೆಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರಿಗೆ ಬಿತ್ತನೆ ಬೀಜ, ಗೊಬ್ಬರದ ಕೊರತೆ ಆಗುವುದಿಲ್ಲ
ಪ್ರಯತ್ನವಿಲ್ಲದೇ ಯಾವುದೇ ಸಾಧನೆ ಅಸಾಧ್ಯ: ಡಾ. ಕಲ್ಲನಗೌಡರ