ಮೇ 6ರಿಂದ 10ರವರೆಗೆ ಜರುಗುವ ಗೌರಿಕೆರೆ ಶ್ರೀ ರಾಮ ಮಂದಿರದ ಸಪರಿವಾರ ಶ್ರೀ ರಾಮ ದೇವರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಠಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಟಿ. ಮುರಳೀಧರ ತಂತ್ರಿ ಬಿಡುಗಡೆಗೊಳಿಸಿದರು.
ಮೂಡುಬಿದಿರೆ: ಮೇ 6ರಿಂದ 10ರವರೆಗೆ ಜರುಗುವ ಗೌರಿಕೆರೆ ಶ್ರೀ ರಾಮ ಮಂದಿರದ ಸಪರಿವಾರ ಶ್ರೀ ರಾಮ ದೇವರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಠಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಟಿ. ಮುರಳೀಧರ ತಂತ್ರಿ ಬಿಡುಗಡೆಗೊಳಿಸಿದರು.
ದೇವಾಡಿಗರ ಸುಧಾರಕ ಸಂಘ ಮೂಡುಬಿದಿರೆ ಇದರ ಅಧ್ಯಕ್ಷ ಹಾಗೂ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರಂದರ ದೇವಾಡಿಗ, ಗೌರವಾಧ್ಯಕ್ಷ ರತ್ನಾಕರ ಸಿ. ಮೊಯ್ಲಿ, ಕಾರ್ಯಾಧ್ಯಕ್ಷ ವಿಶ್ವನಾಥ ಪಿ. ದೇವಾಡಿಗ ಮತ್ತು ಶಶಿಧರ ಎಸ್. ದೇವಾಡಿಗ ಶಿರ್ತಾಡಿ, ಸಮಿತಿ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು, ದೇವಾಡಿಗ ಮಹಿಳಾ ಮತ್ತು ಯುವ ವೇದಿಕೆ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.ಸ್ವಾತಂತ್ರ್ಯ ಪೂರ್ವದ ಇತಿಹಾಸ ಹೊಂದಿರುವ ಇಲ್ಲಿನ ಶ್ರೀ ರಾಮ ಭಜನಾ ಮಂಡಳಿ ಮೂಲಕ ಪ್ರಾರಂಭವಾದ ಸಂಘಟನೆ ಮುಂದೆ ಶ್ರೀ ರಾಮ ಮಂದಿರವಾಗಿ ಕಾಲ ಕಾಲಕ್ಕೆ ಅಭಿವೃದ್ಧಿ ಹೊಂದುತ್ತಾ, ಪ್ರಸ್ತುತ ಹಲವು ಜೀರ್ಣೋದ್ಧಾರ ಕಾಮಗಾರಿಗಳೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗುತ್ತಿದೆ. ಇದೇ ಸಂದರ್ಭ ಸಂಘದ “ಅಮೃತ ಮಹೋತ್ಸವ” ಸಂಭ್ರಮವೂ ಜರುಗಲಿದೆ.
ಜೀರ್ಣೋದ್ಧಾರ ಕಾಮಗಾರಿ ಅಂಗವಾಗಿ ಮಂದಿರದ ಒಳ ಆವರಣದ ಗೋಡೆ ಮತ್ತು ನೆಲಕ್ಕೆ ಗ್ರಾನೈಟ್ ಅಳವಡಿಸಲಾಗಿದೆ. ಗರ್ಭಗುಡಿಯ ಕೆಳ ಅಂತಸ್ಥಿನ ಮೇಲ್ಛಾವಣಿಗೆ ತಾಮ್ರದ ಹೊದಿಕೆ ಹಾಸುವ ಕೆಲಸ ಪ್ರಗತಿಯಲ್ಲಿದೆ. ಗರ್ಭಗುಡಿಯ ದರಿ, ದ್ವಾರ ಬಾಗಿಲಿಗೆ ಹಿತ್ತಾಳೆ ಕವಚ ಮುಚ್ಚುವ ಕೆಲಸ ನಡೆಯಲಿದೆ. ಕ್ಷೇತ್ರದ ದೈವ ಶ್ರೀ ರಕ್ತೇಶ್ವರಿ ಮತ್ತು ಶ್ರೀ ಚಾಮುಂಡೇಶ್ವರಿಯ ಶಿಲಾಮಯ ಗುಡಿಗಳು ನಿರ್ಮಾಣವಾಗಲಿದೆ. ಜೊತೆಗೆ ಸುಮಾರು ೧.೧೫ ಕೋಟಿ ರು. ವೆಚ್ಚದಲ್ಲಿ ಸಮುದಾಯ ಭವನ, ಭೋಜನ ಶಾಲೆ, ಪಾಕ ಶಾಲೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಸಮುದಾಯ ಭವನ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.