ಮೂಡುಬಿದಿರೆ: ಪ್ರಿಯದರ್ಶಿನಿ ಸೊಸೈಟಿ ನೂತನ ಶಾಖೆ ಉದ್ಘಾಟನೆ

KannadaprabhaNewsNetwork |  
Published : Sep 09, 2025, 01:01 AM IST
ಮೂಡುಬಿದಿರೆಯಲ್ಲಿ ಪ್ರಿಯದರ್ಶಿನಿ ಸೊಸೈಟಿ ನೂತನ ಶಾಖೆ ಉದ್ಘಾಟನೆ | Kannada Prabha

ಸಾರಾಂಶ

ಮೂಡುಬಿದಿರೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಪ್ರಿಯದರ್ಶಿನಿ ಸೊಸೈಟಿಯ ಮೂಡುಬಿದಿರೆ ಶಾಖೆ ಉದ್ಘಾಟನೆ ಜ್ಯೋತಿನಗರದ ಮಹಾಲಸ ಕಟ್ಟಡದಲ್ಲಿಸೋಮವಾರ ನೆರವೇರಿತು.

ಮೂಡುಬಿದಿರೆ: ಸೊಸೈಟಿ, ಬ್ಯಾಂಕ್ ಸ್ಥಾಪನೆ ಸುಲಭ. ಮುಂದುವರಿಸಿಕೊಂಡು ಹೋಗಲು ಕಷ್ಟವಿದೆ. ಆದರೆ ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ಪ್ರಗತಿಯಲ್ಲಿದೆ. ದ.ಕ. ಜಿಲ್ಲೆಯಲ್ಲೂ ಸಹಕಾರಿ ಬ್ಯಾಂಕುಗಳು ಲಾಭದಾಯಕವಾಗಿ ನಡೆಯುತ್ತಿವೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್‌ ಹೇಳಿದ್ದಾರೆ.ಮೂಡುಬಿದಿರೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಪ್ರಿಯದರ್ಶಿನಿ ಸೊಸೈಟಿಯ ಮೂಡುಬಿದಿರೆ ಶಾಖೆಯನ್ನು ಜ್ಯೋತಿನಗರದ ಮಹಾಲಸ ಕಟ್ಟಡದಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ವಸಂತ್ ಬೆರ್ನಾರ್ಡ್ ಅಧ್ಯಕ್ಷರಾಗಿರುವ ಪ್ರಿಯದರ್ಶಿನಿ ಸೊಸೈಟಿಯ ನಾಲ್ಕನೇ ಶಾಖೆ ಇದಾಗಿದ್ದು ಅತಿ ವೇಗದಲ್ಲೇ ಹತ್ತನೇ ಶಾಖೆ ಉದ್ಘಾಟನೆಯಾಗಲಿ ಎಂದು ಡಾ.ರಾಜೇಂದ್ರಕುಮಾರ್‌ ಆಶಿಸಿದರು.

ಮುಲ್ಕಿ ಅರಮನೆಯ ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್‌, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಡಾ.ಎಂ.ಮೋಹನ ಆಳ್ವ, ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಚೌಟರ ಅರಮನೆಯ ಕುಲದೀಪ್ ಎಂ, ಕ್ರಿಸ್ತ ಶಾಂತಿ ಚರ್ಚ್ ನ ಸಂತೋಷ್ ಕುಮಾರ್, ಸೂರ್ಯಕುಮಾರ್, ಚಿತ್ತರಂಜನ್ ಬೋಳಾರ್, ನ್ಯಾಯವಾದಿ ಶರತ್ ಶೆಟ್ಟಿ, ಹರ್ಷವರ್ಧನ ಪಡಿವಾಳ್, ಪ್ರವೀಣ್ ಕುಮಾರ್, ಕುಮಾರ್ ಪೂಜಾರಿ, ಪುರಂದರ ದೇವಾಡಿಗ, ಇಕ್ಬಾಲ್ ಕರೀಮ್, ಜೊಸ್ಸಿ ಮಿನೇಜಸ್, ದೇವದಾಸ್ ಭಟ್, ಪ್ರತಿಭಾ ಕುಳಾಯಿ, ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಶಾಖಾ ಪ್ರಬಂಧಕ ಅಭಿಷ್ಮಾ ಜೈನ್, ನಿರ್ದೇಶಕರಾದ ಗಣೇಶ್ ಕುಮಾರ್, ಧನಂಜಯ ಮಟ್ಟು, ಗೌತಮ್ ಜೈನ್, ತನುಜಾ ಶೆಟ್ಟಿ , ನವೀನ್ ಸಾಲಿಯಾನ್ ಪಂಜ, ಲೆಕ್ಕಿಗರಾದ ಲೋಲಾಕ್ಷಿ ಮತ್ತಿತರರು ಹಾಜರಿದ್ದರು. ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾರ್ಡ್ ಸ್ವಾಗತಿಸಿದರು. ಅಕ್ಷತಾ ಎಂ.ಶೆಟ್ಟಿ ನಿರೂಪಿಸಿದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು