ಶೇಣಿ ಪ್ರಶಸ್ತಿಗೆ ಮೂಡಂಬೈಲು ಶಾಸ್ತ್ರಿ ಆಯ್ಕೆ, 25 ರಂದು ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Dec 24, 2025, 03:00 AM IST
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರೀ  | Kannada Prabha

ಸಾರಾಂಶ

ಶೇಣಿ ಪ್ರಶಸ್ತಿಗೆ ಹಿರಿಯ ತಾಳಮದ್ದಳೆ ಅರ್ಥಧಾರಿ, ಪ್ರವಚನಕಾರ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಆಯ್ಕೆ

ಮಂಗಳೂರು: ಡಾ. ಶೇಣಿ ಗೋಪಾಲಕೃಷ್ಣ ಭಟ್ ಅವರ ಹೆಸರಿನಲ್ಲಿ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಟ್ರಸ್ಟ್ ನೀಡುವ 2025ರ ಸಾಲಿನ ಶೇಣಿ ಪ್ರಶಸ್ತಿಗೆ ಹಿರಿಯ ತಾಳಮದ್ದಳೆ ಅರ್ಥಧಾರಿ, ಪ್ರವಚನಕಾರ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರನ್ನು ಆಯ್ಕೆ ಮಾಡಲಾಗಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‌ ಅಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ, ಶೇಣಿ ಗೋಪಾಲಕೃಷ್ಣ ಭಟ್‌ ಚಾರಿಟೆಬಲ್‌ ಟ್ರಸ್ಟ್‌ ಮಂಗಳೂರು ಇದರ ವತಿಯಿಂದ ಉರ್ವಸ್ಟೋರ್‌ ಶ್ರೀ ಮಹಾಗಣಪತಿ ದೇವಸ್ಥಾನದ ಸಹಯೋಗದಲ್ಲಿ ಡಿ.25 ರಂದು ಸಂಜೆ 5 ಗಂಟೆಗೆ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 30 ಸಾವಿರ ರು. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದರು.ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್ ದೀಪ ಪ್ರಜ್ವಲನೆ ಮಾಡಲಿದ್ದು, ಕಸಪಾ ಮಾಜಿ ಅಧ್ಯಕ್ಷ, ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್ ಗೌರವಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಶುಭಾಶಂಸನೆ ಮಾಡುವರು. ಹಿರಿಯ ಲೆಕ್ಕಪರಿಶೋಧಕ ಸಿ.ಎ.ಶ್ಯಾಮ ಭಟ್, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ಯದರ್ಶಿ ಶ್ರೀಧರ ಮಣಿಯಾಣಿ, ಉದ್ಯಮಿ ಶಿವಪ್ರಸಾದ ಪ್ರಭು ಅತಿಥಿಗಳಾಗಿ ಭಾಗವಹಿಸುವರು. ಮಧ್ಯಾಹ್ನ 3.30ರಿಂದ ಹರಿದಾಸ ಮಂಜುಳಾ ಜಿ.ರಾವ್ ಇರಾ ಅವರಿಂದ ಹರಿಕಥೆ ಇರಲಿದೆ ಎಂದು ಅವರು ಹೇಳಿದರು.ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು ಬಂಟ್ವಾಳ ತಾಲೂಕಿನ ಮೂಡಂಬೈಲಿನ ಹೆಸರಾಂತ ಚಕ್ರಕೋಡಿ ಮನೆತನದಲ್ಲಿ 1936ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಶಾಸ್ತ್ರ, ಪುರಾಣ, ಸಂಪ್ರದಾಯ ಮತ್ತು ಯಕ್ಷಗಾನಗಳತ್ತ ಆಸಕ್ತಿ ವಹಿಸಿ ಅಭ್ಯಾಸ ಮಾಡಿದವರು. ಕೈಕೈ, ಅಂಬೆ, ದ್ರೌಪದಿ, ತಾರೆ, ಸೀತೆ, ಮಂಡೋದರಿ, ಕಯಾದು ಮೊದಲಾದ ಸ್ತ್ರೀಪಾತ್ರಗಳು, ರಾಮ, ಕೃಷ್ಣ, ಧರ್ಮರಾಯ, ಪರಶುರಾಮ, ತಾಮ್ರಧ್ವಜ, ಇಂದ್ರಜಿತು, ಭೀಷ್ಮ, ಲಕ್ಷ್ಮಣ, ಅರ್ಜುನ ಇವರಿಗೆ ಹೆಸರು ತಂದುಕೊಟ್ಟ ಇತರ ಪಾತ್ರಗಳು. ವೃತ್ತಿಯಲ್ಲಿ ಅಧ್ಯಾಪಕರಾಗಿ ನಿವೃತ್ತರು. 89ರ ಇಳಿವಯಸ್ಸಿನಲ್ಲಿರುವ ಅವರು ಸದ್ಯ ಬೆಳ್ತಂಗಡಿಯಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.ಟ್ರಸ್ಟ್‌ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಉಪಾಧ್ಯಕ್ಷ ಜಿ.ಕೆ. ಭಟ್‌ ಸೇರಾಜೆ, ಕೋಶಾಧಿಕಾರಿ ಶ್ರೀಪತಿ ಭಟ್‌ ಬೆಳ್ಳೇರಿ, ಕಾರ್ಯದರ್ಶಿ ಶೇಣಿ ಮುರಳಿ, ಸದಸ್ಯರಾದ ಬೆಟ್ಟಂಪಾಡಿ ಸುಂದರ ಶೆಟ್ಟಿ ಮತ್ತು ಮಾಣಿಪ್ಪಾಡಿ ರಾಮಚಂದ್ರ ಭಟ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ