ಕಾರು ಡಿಕ್ಕಿ; ಸೈಕಲ್‌ ಸವಾರ ಚಕ್ಕುಲಿ ರಮೇಶಣ್ಣ ಸಾವು

KannadaprabhaNewsNetwork |  
Published : Jul 28, 2024, 02:03 AM IST
ಮೂಡುಬಿದಿರೆ: ಸೈಕಲ್ ಸವಾರನಿಗೆ ಕಾರು ಢಿಕ್ಕಿಚಕ್ಕುಲಿ ರಮೇಶಣ್ಣ ಇನ್ನಿಲ್ಲ | Kannada Prabha

ಸಾರಾಂಶ

ಮೂಡುಬಿದಿರೆ ಸಂತೆ ಮಾರ್ಕೆಟ್ ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರವಾದ ಬಳಿಕ ಪುತ್ತಿಗೆ ಪಂಚಾಯಿತಿ ಪಂಪ್ ಆಪರೇಟರ್ ಆಗಿ ತನ್ನ ಕರ್ತವ್ಯವನ್ನು ಅವರು ಮುಂದುವರೆಸಿದ್ದರು.

ಮೂಡುಬಿದಿರೆ: ಹಲವು ದಶಕಗಳಿಂದ ಮೂಡುಬಿದಿರೆ ಮಾರ್ಕೆಟ್‌ನ ವಾರದ ಸಂತೆಯಲ್ಲಿ ಚಕ್ಕುಲಿ ಸಹಿತ ಕರಿದ ತಿಂಡಿ ತಿನಿಸುಗಳು, ತುಳುವರ ಪ್ರೀತಿಯ ಸೋಜಿ ಸಹಿತ ಪಾನೀಯಗಳ ವರ್ತಕರಾಗಿ ಜನಾನುರಾಗಿಯಾಗಿದ್ದ ಪುತ್ತಿಗೆ ಪದವು ಹಂಡೇಲಿನ ರಮೇಶ್ ಅಂಚನ್ (65) ಶುಕ್ರವಾರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಪುತ್ತಿಗೆ ಪದವು ಹಂಡೇಲು ಮಸೀದಿ ಬಳಿ ಸಂಜೆ 6.30ರ ವೇಳೆಗೆ ಸೈಕಲಲ್ಲಿ ಹೋಗುತ್ತಿದ್ದ ಅವರಿಗೆ ಕಲ್ಲಮುಂಡ್ಕೂರು ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು ತಲೆ, ಕಾಲಿಗೆ, ತೀವ್ರ ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಅವರು ಮೃತಪಟ್ಟಿದ್ದಾರೆ.

ಮೂಡುಬಿದಿರೆ ಸಂತೆ ಮಾರ್ಕೆಟ್ ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರವಾದ ಬಳಿಕ ಪುತ್ತಿಗೆ ಪಂಚಾಯಿತಿ ಪಂಪ್ ಆಪರೇಟರ್ ಆಗಿ ತನ್ನ ಕರ್ತವ್ಯವನ್ನು ಅವರು ಮುಂದುವರೆಸಿದ್ದರು. 18 ಬಾರಿ ಶಬರಿ ಮಲೆ ಯಾತ್ರೆ ಕೈಗೊಂಡು ಗುರುಸ್ವಾಮಿಯಾಗಿಯೂ ಅವರು ಹಲವರಿಗೆ ಮಾರ್ಗದರ್ಶಕರಾಗಿದ್ದರು. ಅವರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ