ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆದ 23ನೇ ವರ್ಷದ ಹೊನಲು ಬೆಳಕಿನ ‘ಕೋಟಿ-ಚೆನ್ನಯ’ ಜೋಡುಕರೆ ಕಂಬಳ ಭಾನುವಾರ ರಾತ್ರಿ ಯಶಸ್ವಿಯಾಗಿ ಸಮಾಪನಗೊಂಡಿತು. ಈ ಬಾರಿ ಕಂಬಳ ಕೂಟದಲ್ಲಿ ದಾಖಲೆಯ 236 ಕೋಣಗಳು ಪಾಲ್ಗೊಂಡಿದ್ದರೂ ಕೇವಲ 32 ಗಂಟೆಗಳಲ್ಲಿ ಕಂಬಳೋತ್ಸವವನ್ನು ಶಿಸ್ತುಬದ್ಧವಾಗಿ ನೆರವೇರಿಸುವ ಮೂಲಕ ಮೂಡುಬಿದಿರೆ ಕಂಬಳ ಮಾದರಿಯಾಗಿ ಮೂಡಿಬಂದಿದೆ.
ಕನೆಹಲಗೆ: 11 ಜೊತೆ
ಅಡ್ಡ ಹಲಗೆ: 9 ಜೊತೆಪ್ರಥಮ: ನಾರ್ಯ ಗುತ್ತು ಕುವೆತ್ತಬೈಲು ಸಂತೋಷ್ ರೈ ಬೊಳ್ಯಾರು (12.33)
ಹಗ್ಗ ಹಿರಿಯ: (19 ಜೊತೆ): ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ (11.45),
ಹಗ್ಗ ಕಿರಿಯ (39 ಜೊತೆ): ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ "ಬಿ " (11.72) ಓಡಿಸಿದವರು: ಕಾವೂರುದೋಟ ಸುದರ್ಶನ್, ದ್ವಿತೀಯ: ಉಡುಪಿ ಕಕ್ಕುಂಜೆ ರಾಧ ನಿಲಯ ಸಂತೋಷ್ ಶಿವರಾಜ್ ಪೂಜಾರಿ "ಬಿ " (12.02) ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
ನೇಗಿಲು ಕಿರಿಯ (122 ಜೊತೆ): ಪ್ರಥಮ: ಮಿಯಾರ್ ಬೋರ್ಕಟ್ಟೆ ಮಿತ್ಲೊಟ್ಟು ಪೃಥ್ವಿ ಪ್ರಾಪ್ತಿ ಸಂಧ್ಯಾ ಪ್ರಭಾಕರ ಶೆಟ್ಟಿ "ಎ " (11.22) ಓಡಿಸಿದವರು: ಪಡು ಸಾಂತೂರು ಪೃಥ್ವಿರಾಜ್,
ಶನಿವಾರ ಚೌಟರ ಅರಮನೆ ಕುಲದೀಪ ಎಂ. ಅಧ್ಯಕ್ಷತೆಯಲ್ಲಿ ವಿವಿಧ ಆರಾಧನ ಕೇಂದ್ರಗಳ ಪ್ರಸಾದ, ತೀರ್ಥವನ್ನು ಕರೆಗೆ ಸಮರ್ಪಿಸಿ ದೀಪ ಬೆಳಗಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ, ಆಡಳಿತ ಮೊಕ್ತೇಸರ ಈಶ್ವರ ಭಟ್, ಆಲಂಗಾರು ಚರ್ಚ್‌ನ ಧರ್ಮ ಗುರುಗಳಾದ ಫಾ.ಮೆಲ್ವಿನ್ ನೊರೊನ್ಹಾ ಕುಂಟಾಡಿ ಸುಧೀರ್ ಹೆಗ್ಡೆ ಅವರು ಕರೆಯಲ್ಲಿ ದೀಪ ಬೆಳಗಿಸಿ ಕಂಬಳ ಉದ್ಘಾಟಿಸಿದ್ದರು. ಈಶ್ವರ ಭಟ್ ಪ್ರಾರ್ಥಿಸಿದರು. ರೆ.ಫಾ. ಮೆಲ್ವಿನ್ ನೊರೋನ್ನಾ ಶುಭ ಹಾರೈಸಿದರು. ಕಂಬಳ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ, ಕೋಶಾಧಿಕಾರಿ ಭಾಸ್ಕರ ಎಸ್.ಕೋಟ್ಯಾನ್, ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ಪ್ರಮುಖರಾದ ಹರಿಪ್ರಸಾದ್, ಕುಮಾರ ಪ್ರಸಾದ್. ಕೆ. ಆರ್. ಪಂಡಿತ್, ಸುರೇಶ್ ಕೆ. ಪೂಜಾರಿ, ಪುರಸಭಾ ನಿರ್ಗಮನ ಅಧ್ಯಕ್ಷೆ ಜಯಶ್ರೀ ಕೇಶವ್, ನಿರ್ಗಮನ ಉಪಾಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಮೂಡುಬಿದಿರೆ ಲಯನ್ಸ್ ಅಧ್ಯಕ್ಷ ಶಿವ ಪ್ರಸಾದ್ ಹೆಗ್ಡೆ ವೆಂಕಟರಮಣ, ಹನುಮಂತ ದೇವಸ್ಥಾನಗಳ ಆಡಳಿತ ಮೊಕ್ತೇಸರ ಉಮೇಶ್ ಪೈ, ಬೆಳುವಾಯಿ ಗ್ರಾ.ಪಂ. ಸದಸ್ಯ ರಘು ಪೆಲಕುಂಜ, ಪಾಣಿಲ ಕೋಣಗಳ ಯಜಮಾನ ಇರುವಲು ಯೋಗೀಶ್ ಶೆಟ್ಟಿ ಲಕ್ಷ್ಮಣ್ ಪೂಜಾರಿ, ಸತೀಶ್ಚಂದ್ರ ಸಾಲ್ಯಾನ್, ರಾಜೇಶ್ ಕಡಲಕರೆ, ಲೇಖಕಿ ರೆಶೆಲ್ ಬ್ರಿಟ್ಟಿ ಫರ್ನಾಂಡಿಸ್ ಮೊದಲಾದವರಿದ್ದರು.
ಶ್ರೀನಾಥ ಸುವರ್ಣ ಮೂಡು ಮಾರ್ನಾಡು, ಸುಹಾನ್ ಶೆಟ್ಟಿ ಬಜಪೆ, ಅಭಿಷೇಕ್ ಆಳ್ವ ತಿರುವೈಲುಗುತ್ತು ಇವರಿಗೆ ವಿಜೇತ್ ಅಮೀನ್ ಮೂಡುಬಿದಿರೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಂಬಳಗಳಲ್ಲಿ ಬೋಳಾರ ಚ್ಯಾಂಪಿಯನ್ ಕುಟ್ಟಿ (ಕೋಣ) ವನ್ನು ಸ್ಮರಿಸಿಕೊಂಡ ಫ್ಲೆಕ್ಸ್ ಗಳು ಗಮನ ಸೆಳೆದವು.